ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್? ದಕ್ಷಿಣ ಭಾರತದ ಈ ರಾಜ್ಯದಲ್ಲಿ ಸೊನ್ನೆ ಸ್ಥಾನ?

2024ರ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ, ಅಭ್ಯರ್ಥಿಗಳು ಕೂಡ ಸಿದ್ಧವಾಗಿ ಕೂತಿದ್ದಾರೆ. ಇನ್ನೇನು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿ ರಣಕಹಳೆಯ ಮೊಗಳಗಿಸಬೇಕು ಅಷ್ಟೇ. ಹೀಗೆ ಇನ್ನೇನು ಕೆಲವೇ ದಿನದಲ್ಲಿ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ಮಾಡಲಿದ್ದಾರೆ. ಹೀಗಿದ್ದಾಗ ಬಿಜೆಪಿ ಸತತ 3ನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಲ್ಲಿ ಇದ್ದಾಗ ದಿಢೀರ್ ಕಮಲ ಪಾಳಯಕ್ಕೆ ಶಾಕ್ ಸಿಕ್ಕಿದೆ ಆ ಬಗ್ಗೆ ಮಾಹಿತಿ ಇಲ್ಲಿದೆ.

ಲೋಕಸಭೆ ಚುನಾವಣೆ ಬಂದೇ ಬಿಟ್ಟಿದ್ದು, ನಾಳೆ ಅಥವಾ ನಾಡಿದ್ದು 2024ರ ಲೋಕಸಭೆಗಾಗಿ ದಿನಾಂಕವೂ ಘೋಷಣೆ ಆಗುವ ನಿರೀಕ್ಷೆ ಇದೆ. ಚುನಾವಣೆಗೆ ದಿನಾಂಕ ಘೋಷಣೆ ಆಗುವುದಕ್ಕೆ ಮೊದಲು ಇದೀಗ ಚುನಾವಣಾ ಪೂರ್ವ ಸಮೀಕ್ಷೆಗಳು ಸಂಚಲನ ಸೃಷ್ಟಿ ಮಾಡಿವೆ. ಬಿಜೆಪಿ ಪಕ್ಷ ಈ ಬಾರಿ ಹೊಸ ಇತಿಹಾಸ ನಿರ್ಮಾಣ ಮಾಡಲಿದೆ ಅಂತಾ ಕೆಲವು ಸಮೀಕ್ಷೆಗಳು ಹೇಳಿವೆ. ಈ ಮಧ್ಯೆ ಬಿಜೆಪಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಗ್ಯಾರಂಟಿ ಅಂತಾ ಕೂಡ ಹೇಳಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಇದೀಗ ದಕ್ಷಿಣ ಭಾರತದಲ್ಲಿ ಬಿಜೆಪಿ ನಾಯಕರಿಗೆ ಬಿಗ್ ಶಾಕ್ ಸಿಕ್ಕಿದೆ. ಹಾಗಾದರೆ ಬಿಜೆಪಿ ಏನದು ಆಘಾತಕಾರಿ ಸುದ್ದಿ? ಮುಂದೆ ಓದಿ.

ABP-C Voter Opinion Poll BJP Projected To Get No Seats In Southern States for Lok Sabha Election

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆತಂಕ?

ಬಿಜೆಪಿ ಈಗಾಗಲೇ ಇಡೀ ದೇಶದಲ್ಲಿ ತನ್ನ ಹವಾ ಇಟ್ಟಿದೆ, ಆದ್ರೆ ದಕ್ಷಿಣ ಭಾರತ ಬಿಜೆಪಿಗೆ ಇನ್ನೂ ಸಂಪೂರ್ಣ ಒಲಿದು ಬಂದಿಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಪ್ರಮುಖ ರಾಜ್ಯವಾಗಿ ತಮಿಳುನಾಡಲ್ಲಿ ಗೆಲುವನ್ನು ದಾಖಲಿಸಲು ಬಿಜೆಪಿ ರಣತಂತ್ರ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ, ಅಣ್ಣಾಮಲೈಗೆ ಸಂಪೂರ್ಣ ಅಧಿಕಾರವನ್ನ ನೀಡಲಾಗಿದೆ. ಅದ್ರಲ್ಲೂ ಕೆ. ಅಣ್ಣಾಮಲೈ ಅವರು ಈಗಾಗಲೇ ತಮಿಳುನಾಡಿನ ಪೂರ್ತಿ ಬೃಹತ್ ಯಾತ್ರೆ ಮಾಡಿ, ಡಿಎಂಕೆ ಸರ್ಕಾರದ ವಿರುದ್ಧವೂ ಭರ್ಜರಿ ಹೋರಾಟ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದ್ದರೂ ಬಿಜೆಪಿ ಮಾತ್ರ ತಮಿಳುನಾಡು ರಾಜ್ಯದಲ್ಲಿ ಒಂದೇ ಒಂದು ಲೋಕಸಭೆ ಸ್ಥಾನವನ್ನೂ ಗೆಲ್ಲುವುದಿಲ್ಲ ಎನ್ನುತ್ತಿದೆ ಸಮೀಕ್ಷೆ! ಹಾಗಾದರೆ ಈ ಸಮೀಕ್ಷೆಯ ಮಾತು ನಿಜವಾ? ಬನ್ನಿ ತಿಳಿಯೋಣ.

ಬಿಜೆಪಿಗೆ ಸಾಲು ಸಾಲು ಸೋಲು?

ತಮಿಳುನಾಡು ರಾಜ್ಯದಲ್ಲಿ ಒಟ್ಟಾರೆ 39 ಲೋಕಸಭಾ ಸ್ಥಾನಗಳು ಇವೆ. ಹೀಗಾಗಿ ಕರ್ನಾಟಕ ರಾಜ್ಯದ ನೆರೆ ರಾಜ್ಯ ತಮಿಳುನಾಡಿನಲ್ಲಿ ಗೆದ್ದು ಬೀಗಬೇಕು ಎಂಬುದು ಬಿಜೆಪಿ ನಾಯಕರ, ಬಹುದೊಡ್ಡ ಕನಸಾಗಿದೆ. ಈಗಾಗಲೇ 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡು ರಾಜ್ಯದಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಭರ್ಜರಿಯಾಗಿ ಗೆದ್ದು ಬೀಗುವ ನಿರೀಕ್ಷೆಯಲ್ಲಿ ಬಿಜೆಪಿ ಇತ್ತು. ಆದರೆ ಈ ಬಾರಿ ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನೂ ಗೆಲ್ಲುವುದಿಲ್ಲ ಎಂದು, 'ಎಬಿಪಿ & ಸಿ ವೋಟರ್' (ABP CVoter) ಸಮೀಕ್ಷೆ ತಿಳಿಸಿದೆ.

ಕಾಂಗ್ರೆಸ್‌ಗೆ ಲಾಟರಿ ಗ್ಯಾರಂಟಿ?

ಇದೀಗ 'ಎಬಿಪಿ & ಸಿ ವೋಟರ್' ಸಮೀಕ್ಷೆಯಲ್ಲಿ ಮತದಾರರಿಂದ ಸಂಗ್ರಹ ಮಾಡಿರುವಂತೆ ಡಿಎಂಕೆ ಪಕ್ಷಕ್ಕೆ ಭರ್ಜರಿ ಗೆಲುವು ಗ್ಯಾರಂಟಿ ಎನ್ನಲಾಗಿದೆ. ಹಾಗೇ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ಗೂ ಲಾಟರಿ ಗ್ಯಾರಂಟಿ. ಹೇಗಂದ್ರೆ ಡಿಎಂಕೆ ಪಕ್ಷ ಒಟ್ಟಾರೆ 39 ಸ್ಥಾನ ಇರುವ ತಮಿಳುನಾಡು ರಾಜ್ಯದಲ್ಲಿ 31 ಸ್ಥಾನ ಗೆಲ್ಲಲಿದೆ ಎನ್ನಲಾಗಿದೆ. ಕಾಂಗ್ರೆಸ್ ಈ ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ 8 ಸ್ಥಾನ ಗೆಲ್ಲುವುದು ಗ್ಯಾರಂಟಿ ಎನ್ನುವ ಮಾತು ಸಮೀಕ್ಷೆಯಿಂದ ಕೇಳಿಬಂದಿದೆ. ಆದರೆ ಬಿಜೆಪಿ & ಬಿಜೆಪಿ ಜೊತೆಗೆ ಕೈಜೋಡಿಸಿರುವ ಪಕ್ಷಗಳು ಮಾತ್ರ ಒಂದೇ ಒಂದು ಸ್ಥಾನವನ್ನೂ ತಮಿಳುನಾಡು ರಾಜ್ಯದಲ್ಲಿ ಗೆಲ್ಲವುದಿಲ್ಲವೆಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ABP-C Voter Opinion Poll BJP Projected To Get No Seats In Southern States for Lok Sabha Election

ಒಟ್ನಲ್ಲಿ ಇಡೀ ದೇಶಾದ್ಯಂತ ಬಿಜೆಪಿ ತನ್ನ ಹವಾ ತೋರಿಸಲು ಸಜ್ಜಾಗಿರುವ ಸಮಯದಲ್ಲೇ ದಕ್ಷಿಣ ಭಾರತದ ತಮಿಳುನಾಡು ರಾಜ್ಯದಲ್ಲಿ ದೊಡ್ಡ ಆಘಾತ ಎದುರಿಸುತ್ತಿದೆ. ಹೀಗಾಗಿಯೆ ಕುತೂಹಲ ದುಪ್ಪಟ್ಟಾಗಿದೆ, ಇನ್ನೂ 2024ರ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿಲ್ಲ. ಹೀಗಾಗಿ ಬಿಜೆಪಿ ತಮಿಳುನಾಡಿನಲ್ಲಿ ಬಾವುಟ ಹಾರಿಸಲು ಏನೆಲ್ಲಾ ರಣತಂತ್ರಗಳನ್ನ ಹೆಣೆಯಲಿದೆ? ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+