ಸಿದ್ದರಾಮಯ್ಯ ಕಾಲದಲ್ಲಿ ರಾಜ್ಯಕ್ಕೆ ಬರ! ಟ್ವೀಟ್ ಮಾಡಿ ಹಂಗಿಸಿದ ಬಿಜೆಪಿ

ಕರ್ನಾಟಕ ರಾಜ್ಯಕ್ಕೆ ಮುಂಗಾರು ಆಗಮನ ತಡವಾಗಿದೆ ಕಂಡು ಕೇಳರಿಯದ ಬಿಸಿಲಿನ ಕಾರಣ ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ.

ಅತಿಯಾದ ಬಿಸಿಲು ಇದ್ದ ಕಾರಣ ನೀರು ತ್ವರಿತವಾಗಿ ಖಾಲಿಯಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಬಿಸಿಲು ಹೆಚ್ಚಾಗಿದ್ದು, ನದಿ, ಹೊಳೆಗಳಲ್ಲಿ ಕೂಡ ನೀರಿಲ್ಲದಂತಾಗಿದೆ. ಮಂಗಳೂರು ನಗರದಲ್ಲಿ ನೀರಿನ ಕೊರತೆಯಿಂದಾಗಿ ಶಾಲಾ-ಕಾಲೇಜುಗಳಿಗೂ ರಜೆ ಕೊಡುವಂತ ಸ್ಥಿತಿ ನಿರ್ಮಾಣವಾಗಿದೆ.

A Tweet By The BJP Linked Karnataka CM Siddaramaiah To The Ongoing Drought Situation

ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎನ್ನುವ ಅರ್ಥದಲ್ಲಿ ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದು, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಮಾಡಿದೆ.

ಸಿದ್ದುಕಾಲ ಎಂದರೆ ಬರಗಾಲ ಎಂದ ಬಿಜೆಪಿ

ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ "ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಮುಂಗಾರು ಓಡಿಹೋಯಿತೇ! ಸಿದ್ದರಾಮಯ್ಯನವರೇ?" ಎಂದು ಪ್ರಶ್ನೆ ಮಾಡಿದೆ.

"ಬರಿದಾಯ್ತು ಘಟಪ್ರಭಾ, ಮಲಪ್ರಭಾ. ಬತ್ತಿ ಹೋಗುತ್ತಿದೆ ಕೆಆರ್‌ಎಸ್. ಶುರುವಾಗಿದೆ ಬೆಂಗಳೂರಿಗೆ ಜಲಕಂಟಕ. ಉಡುಪಿ-ಮಂಗಳೂರಲ್ಲಿ ನೀರಿಲ್ಲ, ಕಾಲೇಜು, ಹೋಟೆಲ್‌ಗಳು ಬಂದ್!, ಸಿಗಂದೂರಿನ ಹಿನ್ನೀರು ಸಂಪೂರ್ಣ ಖಾಲಿ. ಕೃಷ್ಣ, ತುಂಗೆಯೂ ಬರಿದು. ತಳಕಂಡ ನಾರಾಯಣಪುರ ಬಲದಂಡೆ. ಆದರೂ ತಾವು ಮೌನವಾಗಿದ್ದೀರಿ" ಎಂದು ಸಿದ್ದರಾಮಯ್ಯ ಅವರನ್ನು ಕೇಳಿದೆ.

"ರಾಜ್ಯದಲ್ಲಿ ಕ್ಷಾಮ ಪಕ್ಷದ ಕಾಲ್ಗುಣದಿಂದ ಉಂಟಾದ ಈ ಘನಘೋರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ, ಹೇಗೆ 'ಸಿದ್ದ' ರಾಗಿದ್ದೀರಿ?" ಎಂದು ಕೇಳಿದೆ.

ರಾಜ್ಯದಲ್ಲಿ ಬರಗಾಲಕ್ಕೆ ಸಿದ್ದರಾಮಯ್ಯ ಕಾರಣವಾ?

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳೂ ಕೂಡ ಆಗಿಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೂ ಮುಂಗಾರು ತಡವಾಗಿದ್ದಕ್ಕೂ ಏನು ಸಂಬಂಧ ಎಂದು ಟ್ವಿಟರ್ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಬರ ಇದೆ ಎಂದಾದರೆ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬಂದ ಪ್ರವಾಹಕ್ಕೆ ಯಾರ ಕಾಲ್ಗುಣ ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದಕ್ಕೆ ಯಾರು ಕಾರಣ ಎಂದು ಅಭಿಮಾನಿಗಳು ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+