ಕರ್ನಾಟಕದಲ್ಲಿ ಇಂದು ಮೂರಂಕಿಗಿಳಿದ ಕೊರೊನಾ ಸೋಂಕಿತರು
ಬೆಂಗಳೂರು, ನವೆಂಬರ್ 30: ಕರ್ನಾಟಕದಲ್ಲಿ ಇಂದು ಕೇವಲ 998 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಕರ್ನಾಟಕದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ ಇಂದು ಮತ್ತಷ್ಟು ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು ಮೂರಂಕಿಗಿಳಿದಿದೆ. ಇಷ್ಟು ದಿನದಲ್ಲಿ ಇದೇ ಮೊದಲ ಬಾರಿ ಇಷ್ಟು ಕಡಿಮೆ ಸಂಖ್ಯೆಯ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಆಸ್ಪತ್ರೆಯಿಂದ ಇಂದು 2209 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 884897 ಪ್ರಕರಣಗಳಿವೆ. ಒಂದೇ ದಿನದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. 23279 ಸಕ್ರಿಯ ಪ್ರಕರಣಗಳಿವೆ.

ಇದುವರೆಗೆ 11778 ಮಂದಿ ಮೃತಪಟ್ಟಿದ್ದಾರೆ.349 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 849821 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಬಾಗಲಕೋಟೆ 3, ಬಳ್ಳಾರಿ 10, ಬೆಳಗಾವಿ12, ಬೆಂಗಳೂರು ಗ್ರಾಮಾಂತರ23, ಬೆಂಗಳೂರು ನಗರ 444, ಬೀದರ್ 2, ಚಾಮರಾಜನಗರ4, ಚಿಕ್ಕಬಳ್ಳಾಪುರ 11, ಚಿಕ್ಕಮಗಳೂರು 14, ಚಿತ್ರದುರ್ಗ 1, ದಕ್ಷಿಣ ಕನ್ನಡ 27, ದಾವಣಗೆರೆ 11, ಧಾರವಾಡ 8, ಗದಗ3, ಹಾಸನ 45, ಹಾವೇರಿ 123, ಕಲಬುರಗಿ 15, ಕೊಡಗು 4, ಕೋಲಾರ 12, ಕೊಪ್ಪಳ 10, ಮಂಡ್ಯ 30, ಮೈಸೂರು 43, ರಾಯಚೂರು10, ರಾಮನಗರ 8, ಶಿವಮೊಗ್ಗ 14, ತುಮಕೂರು 43, ಉಡುಪಿ 14, ಉತ್ತರ ಕನ್ನಡ 21, ವಿಜಯಪುರ 30, ಯಾದಗಿರಿಯಲ್ಲಿ 4 ಪ್ರಕರಣ ಪತ್ತೆಯಾಗಿದೆ.












Click it and Unblock the Notifications