ಕರ್ನಾಟಕದಲ್ಲಿ ಮತ್ತೆ ದಾಖಲೆ ಬರೆದ ಕೊರೊನಾ: 9386 ಪ್ರಕರಣಗಳು ಪತ್ತೆ

ಬೆಂಗಳೂರು, ಆಗಸ್ಟ್ 27: ಕರ್ನಾಟಕದಲ್ಲಿ ಮತ್ತೆ ಕೊರೊನಾ ದಾಖಲೆ ಬರೆದಿದೆ, 9386 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3.9 ಲಕ್ಷ ಗಡಿ ದಾಟಿದೆ.
ಒಂದೇ ದಿನ ದಾಖಲೆಯ 141 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,232ಕ್ಕೆ ಏರಿಕೆಯಾಗಿದೆ.

Recommended Video

      Fixed Deposit ಮೇಲಿನ ಬಡ್ಡಿ ದರ ಇಳಿಕೆ ಮಾಡಿದ HDFC Bank | Oneindia Kannada

      ಕಳೆದ 24 ಗಂಟೆಯಲ್ಲಿ ಕೊರೊನಾ 9,386 ಮಂದಿ ತುತ್ತಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,09,792ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

      ಬೆಂಗಳೂರಿನಲ್ಲಿ ಇಂದು 3,357 ಪ್ರಕರಣ ಪತ್ತೆಯಾಗಿದ್ದು 59 ಮಂದಿ ಮೃತಪಟ್ಟಿದ್ದಾರೆ. ಇನ್ನು ಇಂದು 3,362 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

      9386 New COVID-19 Cases Reported In Karnataka On August 27

      ಇಂದು 7,866 ಮಂದಿ ಡಿಸ್ಚಾರ್ಜ್ ಆಗಿದ್ದು 2,19,554 ಮಂದಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇನ್ನು 84,987 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಬಾಗಲಕೋಟೆ 121, ಬಳ್ಳಾರಿ 550, ಬೆಳಗಾವಿ 318, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು ನಗರ 3357, ಬೀದರ್ 76, ಚಾಮರಾಜನಗರ 63, ಚಿಕ್ಕಬಳ್ಳಾಪುರ 101, ಚಿಕ್ಕಮಗಳೂರು 229, ಚಿತ್ರದುರ್ಗ 61, ದಕ್ಷಿಣ ಕನ್ನಡ 297, ದಾವಣೆಗೆರೆ 391, ಧಾರವಾಡ 234, ಗದಗ 110, ಹಾಸನ 334, ಹಾವೇರಿ 117, ಕಲಬುರಗಿ 232, ಕೊಡಗು 25, ಕೋಲಾರ 108, ಕೊಪ್ಪಳ 155, ಮಂಡ್ಯ 197, ಮೈಸೂರು 895, ರಾಯಚೂರು 239, ರಾಮನಗರ 105, ಶಿವಮೊಗ್ಗ 306, ತುಮಕೂರು 127, ಉಡುಪಿ 209, ಉತ್ತರ ಕನ್ನಡ 164, ವಿಜಯಪುರ 121, ಯಾಗಿರಿಯಲ್ಲಿ 112 ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+