ಕರ್ನಾಟಕ; ಒಂದೇ ದಿನ ಕೋವಿಡ್ ಗೆದ್ದ 8387 ಜನರು

ಬೆಂಗಳೂರು, ಆಗಸ್ಟ್ 19 : ಕರ್ನಾಟಕದಲ್ಲಿ ಮಂಗಳವಾರ 7665 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಆದರೆ, ಒಂದೇ ದಿನ ರಾಜ್ಯದಲ್ಲಿ 8387 ಜನರು ಗುಣಮುಖರಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.

Recommended Video

      ಹೇಳಿದ ಕೆಲಸವನ್ನು ಮೊದಲು ಮಾಡಿ ಎಂದ್ರು ಸುಧಾಕರ್ | Oneindia Kannada

      ಕರ್ನಾಟಕದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ ಮಂಗಳವಾರ 2,40,948ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 79,782. ಇದುವರೆಗೂ ಒಟ್ಟು ಗುಣಮುಖರಾದವರ ಸಂಖ್ಯೆ 1,56,949.

      ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 8,387 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದ ಅವಧಿಯಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿದವರ ಸಂಖ್ಯೆ ಇದೇ ಅಧಿಕವಾಗಿದೆ.

      ಕರ್ನಾಟಕದಲ್ಲಿ 18 ದಿನಗಳಲ್ಲಿ 1.16 ಲಕ್ಷ ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಳ ಮಾಡಲಾಗಿದ್ದು, ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ.

      ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು

      ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು

      ಕರ್ನಾಟಕದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಂಗಳವಾರ 7665 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. 8387 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 79,782. ಗುಣಮುಖ ಹೊಂದಿವರ ಸಂಖ್ಯೆ 1,56,949. ಒಟ್ಟು ಮೃತಪಟ್ಟವರ ಸಂಖ್ಯೆ 4,201.

      ಒಂದೇ ದಿನ ದಾಖಲೆಯ ಪರೀಕ್ಷೆ

      ಒಂದೇ ದಿನ ದಾಖಲೆಯ ಪರೀಕ್ಷೆ

      ಕರ್ನಾಟಕದಲ್ಲಿ ಒಂದೇ ದಿನ ದಾಖಲೆಯ 59,088 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ 28,867 antigen ಪರೀಕ್ಷೆ ಮಾಡಲಾಗಿದೆ. ಕರ್ನಾಟಕದಲ್ಲಿ ಒಟ್ಟು ಕೋವಿಡ್‌ ಸೋಂಕಿತರ ಸಂಖ್ಯೆ 2,40,948ಕ್ಕೆ ಏರಿಕೆಯಾಗಿದೆ.

      ಒಟ್ಟು ಮೃತಪಟ್ಟವರು 4,201 ಜನ

      ಒಟ್ಟು ಮೃತಪಟ್ಟವರು 4,201 ಜನ

      ಕರ್ನಾಟಕದಲ್ಲಿ ಇದುರೆಗೂ ಮೃತಪಟ್ಟ ಕೋವಿಡ್ ಸೋಂಕಿತರ ಸಂಖ್ಯೆ 4,201. ಮಂಗಳವಾರ ಒಂದೇ ದಿನ 139 ಜನರು ಮೃತಪಟ್ಟಿದ್ದಾರೆ. ಕಳೆದ 48 ಗಂಟೆಯಲ್ಲಿ 254 ಜನರು ಮೃತಪಟ್ಟಿದ್ದಾರೆ. ಹೊಸದಾಗಿ ಪ್ರಕರಣದಲ್ಲಿ ಮೃತಪಟ್ಟವರ ವಯೋಮಿತಿ 25 ರಿಂದ 50 ವರ್ಷ.

      ಬೆಂಗಳೂರಲ್ಲಿ ಹೆಚ್ಚು ಸೋಂಕಿತರು

      ಬೆಂಗಳೂರಲ್ಲಿ ಹೆಚ್ಚು ಸೋಂಕಿತರು

      ಕೊರೊನಾ ಸೋಂಕಿತರು ಹೆಚ್ಚು ಇರುವ ಜಿಲ್ಲೆಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮಂಗಳವಾರ ನಗರದಲ್ಲಿ 2,242 ಹೊಸ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 94,106ಕ್ಕೆ ಏರಿಕೆಯಾಗಿದೆ. ಮಂಗಳವಾರ ಬಳ್ಳಾರಿ (673), ಉಡುಪಿ (421), ಬೆಳಗಾವಿ (395), ಮೈಸೂರು (357) ಹೊಸ ಪ್ರಕರಣ ವರದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+