7th Pay Commission: ಸರ್ಕಾರಿ ನೌಕರರ ರಜಾ ಪ್ರಯಾಣ ರಿಯಾಯಿತಿ ಶಿಫಾರಸುಗಳು

ಬೆಂಗಳೂರು, ಸೆಪ್ಟೆಂಬರ್ 23: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಿ ನೌಕರರ ರಜೆ ಸೌಲಭ್ಯಗಳ ಕುರಿತು ಸಹ ಸರ್ಕಾರಕ್ಕೆ ಅನೇಕ ಶಿಫಾರಸುಗಳನ್ನು ಮಾಡಿದೆ. 558 ಪುಟಗಳ ಸಂಪುಟ-1ರ ವರದಿಯಲ್ಲಿ ಸರ್ಕಾರಿ ನೌಕರರ ರಜಾ ಪ್ರಯಾಣ ರಿಯಾಯಿತಿ, ಮಾತೃತ್ವ ರಜೆ ಸೌಲಭ್ಯಗಳ ಕುರಿತು ವಿವರಣೆಯನ್ನು ನೀಡಿದೆ. ಸರ್ಕಾರ ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ವೇತನ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುತ್ತಿದೆ. ವರದಿಯಲ್ಲಿ ಸರ್ಕಾರಿ ನೌಕರರ ಎಲ್‌ಟಿಸಿ ಬಗ್ಗೆ ಮಾಡಿರುವ ಶಿಫಾರಸುಗಳು ಇಲ್ಲಿವೆ.

ಪ್ರಸ್ತುತ ಸರ್ಕಾರಿ ನೌಕರರಿಗೆ ತಮ್ಮ ಸೇವಾವಧಿಯಲ್ಲಿ ಎರಡು ಬಾರಿ, ಭಾರತದಲ್ಲಿನ ಯಾವುದೇ ಸ್ಥಳಕ್ಕೆ ಪ್ರವಾಸವನ್ನು ಕೈಗೊಳ್ಳಲು ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವು ಲಭ್ಯವಿರುತ್ತದೆ. ಇದರ ಮೊದಲ ಬ್ಲಾಕ್ 1ನೇ ವರ್ಷದಿಂದ 15 ವರ್ಷಗಳ ಸೇವಾವಧಿಯವರೆಗೆ ಮತ್ತು ಎರಡನೇ ಬ್ಲಾಕ್ 16ನೇ ವರ್ಷದ ಸೇವೆಯಿಂದ ವಯೋನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದವರೆಗೆ ಇರುತ್ತದೆ.

7th Pay Commission Recommendations On Government Employees Leave Travel Concession

ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಇಡೀ ಸೇವಾವಧಿಯಲ್ಲಿ ಎರಡು ಬಾರಿಗೆ ಬದಲು ನಾಲ್ಕು ವರ್ಷಗಳಲ್ಲಿ ಒಂದು ಬಾರಿಗೆ ಹೆಚ್ಚಿಸಲು ಮತ್ತು ಪ್ರವಾಸದ ಮೇಲೆ ಹೋಗುವ ನೌಕರರಿಗೆ ಮಂಜೂರು ಮಾಡುವ ರೀತಿಯಲ್ಲಿ ದಿನಭತ್ಯೆಯನ್ನು ಸಹ ನೀಡಬೇಕೆಂದು ಹಲವು ನೌಕರರ ಸಂಘಗಳು ಮತ್ತು ನೌಕರರಿಂದ ಮನವಿಗಳನ್ನು 7ನೇ ರಾಜ್ಯ ವೇತನ ಆಯೋಗ ಸ್ವೀಕಾರ ಮಾಡಿದೆ.

ನೌಕರರು ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ಆಯೋಗವು ಒಪ್ಪುತ್ತದೆ. ಆದ್ದರಿಂದ, ರಜಾ ಪ್ರಯಾಣ ರಿಯಾಯಿತಿ ಸೌಲಭ್ಯವನ್ನು ಸೇವೆಯಲ್ಲಿ 2 ಬಾರಿಯಿಂದ 3 ಬಾರಿಗೆ ಹೆಚ್ಚಿಸಲು, ಮೊದಲನೇ ಬ್ಲಾಕ್ ಅವಧಿಯು 1ನೇ ವರ್ಷದಿಂದ 10ನೇ ವರ್ಷದ ಸೇವಾವಧಿಯವರೆಗೆ, ಎರಡನೇ ಬ್ಲಾಕ್ ಅವಧಿಯು 11ನೇ ವರ್ಷದ ಸೇವೆಯಿಂದ 20ನೇ ವರ್ಷದ ಸೇವಾವಧಿಯವರೆಗೆ ಮತ್ತು ಮೂರನೇ ಬ್ಲಾಕ್ ಅವಧಿಯು 21ನೇ ವರ್ಷದ ಸೇವೆಯಿಂದ ಅವರ ನಿವೃತ್ತಿ ಅಥವಾ ಸೇವೆ ಕೊನೆಗೊಳ್ಳುವ ದಿನಾಂಕದವರೆಗೆ ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡಿದೆ.

ನೌಕರರು ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಕೆಲಸದ ಸ್ಥಳದಿಂದ ಹೊರಗೆ ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ದಿನ ಭತ್ಯೆಯನ್ನು ನೀಡಲಾಗುತ್ತಿದ್ದು, ರಜಾ ಪ್ರಯಾಣ ರಿಯಾಯಿತಿ (LTC) ಅವಧಿಯನ್ನು ಕರ್ತವ್ಯದ ಅವಧಿಗೆ ಸಮನಾಗಿ ಪರಿಗಣಿಸಲು ಸಾಧ್ಯವಿಲ್ಲದಿರುವುದರಿಂದ, ದಿನಭತ್ಯೆ ನೀಡಬೇಕೆಂಬ ಬೇಡಿಕೆಯಲ್ಲಿ ಯಾವುದೇ ಸಮರ್ಥನೆಯು ಕಂಡುಬರುತ್ತಿಲ್ಲ. ಇಂತಹ ಭತ್ಯೆಯು ಭಾರತ ಸರ್ಕಾರದಲ್ಲಾಗಲಿ ಅಥವಾ ಇತರೆ ಯಾವುದೇ ರಾಜ್ಯಗಳಲ್ಲಾಗಲಿ ಜಾರಿಯಲ್ಲಿರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಮಾತೃತ್ವ ರಜೆ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹಿಳಾ ನೌಕರರು ಮಾತೃತ್ವ ಪ್ರಯೋಜನ ಕಾಯಿದೆ, 1961ರಡಿ ಗರ್ಭ ಧರಿಸಿದ ಮತ್ತು ಹೆರಿಗೆಯ ಅವಧಿಯಲ್ಲಿ ಒಟ್ಟು 26 ವಾರಗಳ ಮಾತೃತ್ವ ರಜೆಯನ್ನು ತೆಗೆದುಕೊಳ್ಳಲು ಮತ್ತು ಹೆರಿಗೆಗೆ ಮೊದಲು 8 ವಾರಗಳ ರಜೆಯನ್ನು ಪಡೆಯಲು ಹಾಗೂ ಹೆರಿಗೆಯ ನಂತರ ಅದನ್ನು 26 ವಾರಗಳಿಗೆ ವಿಸ್ತಿರಿಸಿಕೊಳ್ಳುವ ಅವಕಾಶವಿರುತ್ತದೆ. ಈ ಸೌಲಭ್ಯವು ಸೇವೆಯ ಅವಧಿಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ. ಆದಾಗ್ಯೂ, ಸೇವೆಗೆ ಸೇರುವ ಮೊದಲೇ ಹೆರಿಗೆಯಾಗಿದ್ದು ಮತ್ತು ಸೇವೆಗೆ ಸೇರುವ ಸಮಯದಲ್ಲಿ ಹಾಲುಣಿಸುವ ತಾಯಿಯಾಗಿದ್ದರೂ ಸಹ ಮಹಿಳಾ ನೌಕರರು ಈ ಸೌಲಭ್ಯವನ್ನು ಪಡೆಯಲಾಗುವುದಿಲ್ಲ.

ಸೇವೆಗೆ ಸೇರುವ ಮೊದಲು ಮಗುವಿಗೆ ಜನ್ಮ ನೀಡಿದ ಮತ್ತು ಸೇವೆಗೆ ಸೇರುವ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯಲ್ಲಿ ತೊಡಗಿರುವ ಮಹಿಳಾ ಉದ್ಯೋಗಿಗಳಿಗೆ ಪ್ರಯೋಜನವನ್ನು ವಿಸ್ತರಿಸಲು ಇದು ಒಳಗೊಳ್ಳುವಿಕೆಯ ಕ್ರಮ ಆಗುತ್ತದೆ. ಆದ್ದರಿಂದ ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ 18 ವಾರಗಳ ಹೆರಿಗೆ ರಜೆಯನ್ನು ವಿಸ್ತರಿಸಲು ಆಯೋಗವು ಶಿಫಾರಸು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+