7th Pay Commission: ಸರ್ಕಾರಿ ನೌಕರರ 5 ದಿನಗಳ ಕೆಲಸದ ವಾರ, ಶಿಫಾರಸುಗಳು
ಬೆಂಗಳೂರು, ಸೆಪ್ಟೆಂಬರ್ 18: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ಸರ್ಕಾರಿ ನೌಕರರ 5 ದಿನಗಳ ಕೆಲಸದ ವಾರದ ಕುರಿತು ಹಲವು ಅಂಶಗಳನ್ನು ಪರಿಶೀಲಿಸಿದೆ. ಸಾಮಾನ್ಯ ವಿನಾಯಿತಿಗಳೊಂದಿಗೆ ಸರ್ಕಾರಿ ನೌಕರರಿಗೆ ಐದು ದಿನಗಳ ವಾರವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕೆಂದು ಆಯೋಗವು ಶಿಫಾರಸು ಮಾಡುತ್ತದೆ. ಈ ಪ್ರಸ್ತಾವನೆಯ ವಿಧಾನಗಳು ಇದನ್ನು ಪರಿಚಯಿಸುವುದಕ್ಕೂ ಮುಂಚೆ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆಂದು ಹೇಳಬೇಕಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
5 ದಿನಗಳ ಕೆಲಸದ ವಾರದ ವಿಚಾರದಲ್ಲಿ 6ನೇ ವೇತನ ಆಯೋಗವು ಅಧಿಕಾರಿ ವೇತನ ಸಮಿತಿಯ ಶಿಫಾರಸುಗಳನ್ನು ಗಮನಿಸಿರುತ್ತದೆ ಮತ್ತು ಐದು ದಿನಗಳ ಕೆಲಸದ ವಾರಕ್ಕಾಗಿ ನೌಕರರ ಮನವಿಯನ್ನು ಅಂಗೀಕರಿಸಿರುತ್ತದೆ. ಆದಾಗ್ಯೂ, ಆಡಳಿತವು ಎಲ್ಲಾ ಶನಿವಾರಗಳನ್ನು ರಜಾ ದಿನಗಳನ್ನಾಗಿ ಘೋಷಿಸುವುದಕ್ಕೆ ಬೆಂಬಲ ನೀಡುವುದಿಲ್ಲ ಕಾರಣ ಸರ್ಕಾರಿ ನೌಕರರ ಒಟ್ಟಾರೆ ಕೆಲಸದ ಅವಧಿಯು 30 ದಿನಗಳಿಗೆ ಕಡಿತವಾಗುತ್ತದೆ (2011 ರ ಅಧಿಕಾರಿ ವೇತನ ಸಮಿತಿಯು ಅಂದಾಜಿಸಲಾಗಿರುವಂತೆ) ಎಂದು ಆಯೋಗವು ಭಾವಿಸಿರುತ್ತದೆ. ಕರ್ತವ್ಯದ ಅವಧಿಯಲ್ಲಿನ ಕೊರತೆಯನ್ನು ಸರಿದೂಗಿಸಲು ಕರ್ತವ್ಯದ ಅವಧಿಯನ್ನು ವಿಸ್ತರಿಸುವುದು ಮತ್ತು ಜಯಂತಿ/ ವಾರ್ಷಿಕೋತ್ಸವಗಳ ಮೇಲಿನ ರಜೆಗಳನ್ನು ಕಡಿತಗೊಳಿಸುವುದು (ಮಹಾತ್ಮ ಗಾಂಧಿಜೀ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಗಳನ್ನು ಹೊರತುಪಡಿಸಿ) ಸಾಮಾನ್ಯ ರಜೆಗಳನ್ನು ಕಡಿತಗೊಳಿಸುವುವ ಮೂಲಕ ಸರಿದೂಗಿಸಬಹುದು.

ಸರ್ಕಾರಿ ಸಿಬ್ಬಂದಿಗೆ ಈಗಾಗಲೇ 2ನೇ ಶನಿವಾರವನ್ನು ರಜೆಯೆಂದು ಘೋಷಿಸಲಾಗಿರುವುದರ ಜೊತೆಗೆ ಪ್ರತಿ ತಿಂಗಳ 4ನೇ ಶನಿವಾರದಂದು ರಜೆಯನ್ನು ಮಂಜೂರು ಮಾಡಲು ಆಯೋಗವು ಶಿಫಾರಸು ಮಾಡಿದೆ. ಇದರಿಂದ 2 ವಾರಗಳ ನಡುವೆ 2 ಹಚ್ಚಿನ ದಿನಗಳ ರಜೆಯನ್ನು ಪಡೆಯುತ್ತಾರೆ. ಇದು ನೌಕರರ ಕೆಲಸದ ನಿರ್ವಹಣೆ ಮೇಲೆ ಮತ್ತು ಸಂತೃಪ್ತಿ ಮತ್ತು ಧನಾತ್ಮಕ ಪರಿಣಾಮವನ್ನು ಹೆಚ್ಚಿಸುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಈಗಾಗಲೇ 2015ರಿಂದ ಜಾರಿಗೆ ಬರುವಂತೆ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜೆ ಎಂದು ಘೋಷಿಸಿರುವುದರಿಂದ ಈ ಶಿಫಾರಸನ್ನು ಬಲಗೊಳಿಸಲಾಗಿದೆ.
2019ರಲ್ಲಿ, ರಾಜ್ಯ ಸಚಿವ ಸಂಪುಟವು 4ನೇ ಶನಿವಾರ ರಜೆಯ ಪ್ರಸ್ತಾವನೆಯನ್ನು 5 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಅನುಮೋದಿಸಲಾಗಿರುತ್ತದೆ. ಇದಕ್ಕೆ ಕಾರಣ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆಗಾಗಿ ನೌಕರರಿಂದ ನಿರಂತರವಾಗಿ ಬೇಡಿಕೆಯಿತ್ತು ಮತ್ತು ದೇಶದಲ್ಲಿನ ಹೆಚ್ಚಿನ ರಾಜ್ಯಗಳಲ್ಲಿ ಐದು ದಿನಗಳ ಕೆಲಸದ ಅವಧಿಯನ್ನು ಅಧ್ಯಾಯನ ಮಾಡಿದ ನಂತರ ನಿರ್ಧರಿಸಲಾಗಿತ್ತು. ಇತರೆ ದಿನಗಳಿಗೆ ಕೆಲಸದ ಅವಧಿಯನ್ನು ವಿಸ್ತರಿಸುವ ಯಾವುದೇ ಪ್ರಸ್ತಾವನೆಯಿರಲಿಲ್ಲ ಮತ್ತು ಶಾಲೆಗಳು ಮತ್ತು ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಇಲಾಖೆಗಳಿಗೆ 4ನೇ ಶನಿವಾರವನ್ನು ರಜೆಯಂದು ಘೋಷಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ರಜಾ ದಿನಗಳ ಹೆಚ್ಚಳವನ್ನು ಸರಿದೂಗಿಸುವುದಕ್ಕೆ ನೌಕರರ ಸಾಂದರ್ಭಿಕ ರಜೆಯನ್ನು ವರ್ಷದಲ್ಲಿ 15 ರಿಂದ 10ಕ್ಕೆ ಕಡಿತಗೊಳಿಸಲಾಯಿತು, ಇತರೆ ಅಸ್ತಿತ್ವದಲ್ಲಿರುವ ಸಾಮಾನ್ಯ ರಜೆಗಳನ್ನು ಯಥಾವತ್ತಾಗಿ ಮುಂದುವರೆಸಲಾಯಿತು.
ವಾರದಲ್ಲಿ ಐದು ದಿನಗಳ ಕೆಲಸದ ಮಾದರಿಯನ್ನು ಪಂಜಾಬ್, ದೆಹಲಿ, ಗೋವಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಮತ್ತು ನೆರೆಯ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಮತ್ತು ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲಾಗಿದೆ. ಇತ್ತೀಚಿಗೆ, 11ನೇ ಕೇರಳ ವೇತನ ಪರಿಷ್ಕರಣೆ ಆಯೋಗವು ಸರ್ಕಾರಿ ನೌಕರರಿಗೆ ಕೆಲಸದ ಅವಧಿಯನ್ನು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ಅವಧಿಯನ್ನು ಬೆಳಗೆ 9.30 ರಿಂದ ಸಂಜೆ 5.30 ವರೆಗೆ ಬದಲಾಯಿಸುವುದರ ಜೊತೆಗೆ ವಾರದಲ್ಲಿ ಐದು ದಿನಗಳ ಕೆಲಸದ ಅವಧಿಯನ್ನು ಪರಿಚಯಿಸಲು ಶಿಫಾರಸು ಮಾಡಿದೆ. ಅಲ್ಲದೆ, ರಾಷ್ಟ್ರೀಯ ರಜೆಗಳನ್ನು 12ಕ್ಕೆ ನಿರ್ಬಂಧಿಸಲು ಸಹ ಶಿಫಾರಸು ಮಾಡಿದೆ ಮತ್ತು ಸ್ಥಳೀಯ ಮಟ್ಟದ ರಜೆಗಳನ್ನು ಅ ಪ್ರದೇಶದಲ್ಲಿನ ಜನರ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುವಂತಹ ಆಚರಣೆಗಳಿದ್ದರೆ ಮಾತ್ರ ಅನುಮತಿಸುವುದು. ಮುಂದುವರೆದು, ಪುನಃ ಕಛೇರಿಯಲ್ಲಿ ಮಾಡುವ ಕೆಲಸದ ಹಂಚಿಕೆಯ ಉದ್ದೇಶಕ್ಕಾಗಿ ಪ್ರತಿ ಇಲಾಖೆಯು ಮನೆಯಿಂದಲೇ ನಿರ್ವಹಿಸಬೇಕಾದ ಕೆಲಸವನ್ನು ಗುರುತಿಸಬೇಕು.
ಅಂತಾರಾಷ್ಟ್ರೀಯವಾಗಿ ವಾರದಲ್ಲಿ 5 ದಿನಗಳ ಕೆಲಸ ಇಂದು ಸಾಮಾನ್ಯವಾಗಿದೆ. ಕೆಲಸ ಮತ್ತು ವಿರಾಮವನ್ನು ಸರಿದೂಗಿಸುವುದಕ್ಕೆ ಮತ್ತು ಕೋವಿಡ್ ಸಾಂಕ್ರಾಮಿಕ ನಂತರ ಸರಿಹೊಂದುವ ಕೆಲಸದ ಕಡೆಗೆ ಸಮಾಜದ ಗಮನ ಹೆಚ್ಚುತ್ತಿರುವುದರ ದೃಷ್ಟಿಯಿಂದ ವಾರದಲ್ಲಿ ನಾಲ್ಕು ದಿನಗಳ ಕೆಲಸಕ್ಕೆ ಹೋಗಲು ಕಂಪನಿಗಳು ತುದಿಗಾಲ ಮೇಲೆ ನಿಂತಿವೆ ಎಂದು ಸಹ ಗಮನಿಸಲಾಗಿದೆ. ನಾಲ್ಕು ದಿನಗಳ ವಾರದ ಕೆಲಸಕ್ಕೆ ಬದಲಾಗುವುದರಿಂದ ಕೆಲಸದ ಸಂತೃಪ್ತಿ ಮತ್ತು ಉತ್ಪಾದಕತೆ ಮತ್ತು ಅನುಪಸ್ಥಿತಿ ಮತ್ತು ಪ್ರಯಾಣದ ಸಮಯವನ್ನು ಹೆಚ್ಚಿಸುವುದರ ಜೊತೆಗೆ ಅಸಂಖ್ಯಾತ ಪ್ರಯೋಜನಗಳನ್ನು ಸಂಶೋಧಿಸಲು ವ್ಯವಹರಣೆಗಳು ಮತ್ತು ಫೆಡರಲ್ ಸರ್ಕಾರಗಳಿಗಾಗಿ ಹೊಸ ಪ್ರೋತ್ಸಾಹಕಗಳನ್ನು ಪರಿಚಯಿಸುವುದಕ್ಕೆ ಅಮೆರಿಕ ರಾಜ್ಯಗಳಾದ ಕ್ಯಾಲಿಫೋರ್ನಿಯ, ಮಸೆಚುಸ್ಸೇಟ್ಸ್, ಮಿಸ್ಸೋರಿ, ಪೆನ್ಸಿಲ್ವೆನಿಯಾ, ಟೆಕ್ಸಾಸ್ ಮತ್ತು ವರ್ಮೌಂಟ್ ರಾಜ್ಯಗಳು ಶಾಸನಗಳನ್ನು ರೂಪಿಸಿವೆ. ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಮನಹರಿಸಲು ಅವಕಾಶ ನೀಡುವ ಪುಯತ್ನದಲ್ಲಿ ಅಮೆರಿಕದ ಇತರೆ ರಾಜ್ಯಗಳಲ್ಲಿ ಈ ಕ್ರಮವನ್ನು ಪ್ರತಿಬಿಂಬಿಸಲಾಗುತ್ತಿದೆ. ಜಗತ್ತಿನಲ್ಲಿಯೇ ಫ್ರಾನ್ಸ್ ಏಳನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದು, ಇಲ್ಲಿ 35 ಗಂಟೆಗಳ ಕೆಲಸದ ವಾರವಿದ್ದು ಮತ್ತು ಇದನ್ನು 32 ಗಂಟೆಗಳಿಗೆ ಕಡಿತಗೊಳಿಸಲು ಪರಿಗಣಿಸುತ್ತಿದೆ. ನಾರ್ವೇ ಮತ್ತು ಡೆನ್ಮಾರ್ಕ್ ದೇಶಗಳಲ್ಲಿ ವಾರದ ಕೆಲಸವು ಅಂದಾಜು 37 ಗಂಟೆಗಳಿರುತ್ತದೆ.
ಕೋವಿಡ್-19 ಸಾಂಕ್ರಾಮಿಕ ನಂತರದ ವಿಷಯದ ಕುರಿತು ಚರ್ಚೆ ಜಾಗತಿಕವಾಗಿ ಮುನ್ನೆಲೆಗೆ ಬಂತು. ಸಾಂಕ್ರಾಮಿಕದ ನಂತರ ಅನೇಕ ಕಾರ್ಯಸ್ಥಳಗಳಲ್ಲಿ ವ್ಯಕ್ತಿಗತವಾಗಿ ತಮ್ಮ ನೌಕರರನ್ನು ಮರಳಿ ಕಛೇರಿಗೆ ಕರೆತರಲು ಪ್ರಯತ್ನಿಸಲಾಯಿತು, ನೌಕರರು ದೂರದಿಂದ ಕೆಲಸವನ್ನು ಮಾಡಲು ಮತ್ತು ಅದರ ಜೊತೆಗೆ ಸಮಯದ ಸ್ವಾತಂತ್ರ್ಯವನ್ನು ಬಯಸಿರುತ್ತಾರೆ, ಇದು ನೌಕರರು ಕೆಲಸದ ವೇಳೆಯಲ್ಲಿನ ಅನುಕೂಲತೆ ಹೊಂದುವುದಕ್ಕೆ ಅಲ್ಲದೆ ಈ ಎರಡು ಉತ್ತಮ ಕೆಲಸ-ವಿರಾಮದ ಸಮತೋಲನವನ್ನು ಬಯಸುವುದನ್ನು ಕೋರಿರುವುದರ ದ್ಯೋತಕವಾಗಿದೆ.
ಹೇಗೆ ವಾರದ 5 ದಿನ ಕೆಲಸ?; ಈ ಸಂಬಂಧದಲ್ಲಿ ಆದ ಇತ್ತೀಚಿನ ಎಲ್ಲಾ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾ ರಾಜ್ಯ ಸರ್ಕಾರವು ಈ ಪ್ರಸ್ತಾವವನ್ನು ಹೊಸದಾಗಿ ಪರಿಶೀಲಿಸುವ ಅಗತ್ಯವಿರುತ್ತದೆ ಎಂದು ಆಯೋಗದ ಅಭಿಪ್ರಾಯವಾಗಿದೆ. ಅಂತಿಮವಾಗಿ, ಈ ನಿಟ್ಟಿನಲ್ಲಿ ನಿರ್ಣಯಕ್ಕೆ ಬರುವಾಗ ಇತ್ತೀಚಿಗೆ, ಬ್ಯಾಂಕ್ ನೌಕರರ ಒಕ್ಕೂಟಗಳಿಂದ ನಿರಂತರ ಮನವಿಗಳು ಮತ್ತು ಅರ್ಜಿಗಳನ್ನು ಸ್ವೀಕರಿಸಿದ ನಂತರ ಭಾರತೀಯ ಬ್ಯಾಂಕಿಂಗ್ ಒಕ್ಕೂಟ್ಟು (ಐಬಿಎ) ನಡೆಸಿದ ಸಭೆಯಲ್ಲಿ ಬ್ಯಾಂಕ್‌ಗಳು ಉದ್ಯಮದ ಬೇಡಿಕೆಯನ್ನು ಮುಂದಿಟ್ಟವು ಮತ್ತು ನೌಕರರ ಸಂಘಗಳು ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜೆಯೆಂದು ಘೋಷಿಸಲು ಉದ್ಯಮ ಸಂಸ್ಥೆ ಒಪ್ಪಿಕೊಂಡಿತ್ತು ಎಂದು ಹೇಳಲಾಗಿದೆ. ಐಬಿಎಯು ಅನುಮೋದನೆಗಾಗಿ ಸದರಿ ಅರ್ಜಿಯನ್ನು ಹಣಕಾಸು ಮಂತ್ರಾಲಯಕ್ಕೆ ರವಾನಿಸಿದೆ.
ಅಲ್ಲದೆ ಪ್ರಸ್ತುತಕ್ಕೆ ಸಂಬಂಧಿಸಿದೇನೆಂದರೆ, ಐದು ದಿನಗಳ ವಾರದ ಕೆಲಸವು ಅಗತ್ಯವೆಂದು ಭಾವಿಸಲಾಗಿರುವ ಸೇವೆಗಳಿಗೆ ಈ ಐದು ದಿನಗಳ ವಾರದ ಕೆಲಸವು ಅನ್ವಯವಾಗುವುದಿಲ್ಲ. ಸರ್ಕಾರಿ ಆಸ್ಪತ್ರೆಗಳು, ಪೊಲೀಸ್, ಕಾರಾಗೃಹ, ನೀರು ಸರಬರಾಜು ಯೋಜನೆಗಳು, ಅಗ್ನಿಶಾಮಕ ದಳಗಳು, ನಾಗರಿಕ ಪ್ರಾಧಿಕಾರಗಳು, ಶೈಕ್ಷಣಿಕ ಸಂಸ್ಥೆಗಳು, ಶಾಲೆಗಳು, ಸರ್ಕಾರಿ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಮತ್ತು ತಾಂತ್ರಿಕ ಸಂಸ್ಥೆಗಳು ಇವುಗಳಲ್ಲಿ ಒಳಗೊಂಡಿದೆ. ಆದಾಗ್ಯೂ, ಕೆಲವು ಭಾಗಗಳಲ್ಲಿ ವಿಶೇಷವಾಗಿ ರಾಜಕೀಯ ಕಾರ್ಯನಿರ್ವಾಹಕರುಗಳು ಕಳವಳ ವ್ಯಕ್ತಪಡಿಸಿದ್ದು, ಈ ನಿರ್ಧಾರವು ಆಡಳಿತದ ಗತಿಯ ಮೇಲೆ ಪರಿಣಾಮ ಬೀರಬಹುದು, ಇಂದು ಇ- ಆಡಳಿತ ಕ್ರಮವನ್ನು ಎಲ್ಲಾ ಇಲಾಖೆಗಳಾದ್ಯಂತ ಪರಿಚಯಿಸಿರುವುದರಿಂದ, ವಾರದಲ್ಲಿನ ಎರಡು ದಿನಗಳ ರಾಜವಧಿಯು ಸೇವೆಯನ್ನು ಒದಗಿಸುವಲ್ಲಿ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ವಾಸ್ತವವಾಗಿ, ಈ ಕ್ರಮವು ನೌಕರನ ಸೇವೆಯನ್ನು ಒದಗಿಸುವಲ್ಲಿ ಮತ್ತು ಕೆಲಸದ ಮೇಲೆ ಧನಾತ್ಮಕ ಪರಿಣಾಮವನ್ನು ಹೊಂದಿರುತ್ತದೆ ಎಂದು ರಾಜ್ಯದ ನೌಕರ ಸಂಘಗಳು ವಾದಿಸಿರುತ್ತವೆ, ನೌಕರರ ನಿರಂತರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾ, ಇಂದಿನ ತಂತ್ರಜ್ಞಾನವು ನೌಕರನು ವಾರದ ಎಲ್ಲಾ ದಿನವೂ ತನ್ನ ಮೇಜಿನ ಬಳಿ ಕುಳಿತುಕೊಳ್ಳುವ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಹಲವಾರು ಇ-ಆಡಳಿತ ಉಪಕ್ರಮಗಳ ಮೂಲಕ ಸಾರ್ವಜನಿಕರಿಗೆ ಹೆಚ್ಚು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ದಿನನಿತ್ಯದ ಸೇವೆಗಳು ತಲುಪುತ್ತವೆ, ವ್ಯವಸ್ಥೆಗೆ (ನೌಕರರನ್ನು ಹೊರತುಪಡಿಸಿ) ಯಾವುದೇ ಅಹಿತಕರ ಪರಿಣಾಮಗಳನ್ನು ಮೀರಿಸುತ್ತದೆ ಎಂದು ನಂಬುತ್ತೇವೆ.












Click it and Unblock the Notifications