7th Pay Commission: ಸರ್ಕಾರಿ ನೌಕರರ ಈ ಬೇಡಿಕೆ ಈಡೇರಿಕೆ ಯಾವಾಗ?

ಬೆಂಗಳೂರು, ಆಗಸ್ಟ್‌ 07: ಕರ್ನಾಟಕದ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಲಾಗಿದೆ. ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಏರಿಕೆಯಾಗಿದೆ. ವೇತನ ಆಯೋಗ ಹಲವು ಅಂಶಗಳ ಕುರಿತು ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ ಮಾಡಿದೆ. ಸರ್ಕಾರ ಇನ್ನೂ ಈಡೇರಿಸಬೇಕಾದ ಆಯೋಗದ ಶಿಫಾರಸುಗಳು ಹಲವು ಇವೆ. ಹಂತ-ಹಂತವಾಗಿ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 16ರಂದು ರಾಜ್ಯ 7ನೇ ವೇತನ ಆಯೋಗದ ವರದಿ ಸ್ವೀಕಾರ ಮಾಡಿದ್ದರು. ಲೋಕಸಭೆ ಚುನಾವಣೆ ಸೇರಿದಂತೆ ವಿವಿಧ ನೀತಿ ಸಂಹಿತೆ ಕಾರಣಕ್ಕೆ ವರದಿ ಜಾರಿ ವಿಳಂಬವಾಗಿತ್ತು. ಜುಲೈನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವೇತನ ಆಯೋಗದ ಶಿಫಾರಸು ಜಾರಿಗೆ ಒಪ್ಪಿಗೆ ನೀಡಲಾಗಿದ್ದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆ ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

7th Pay Commission Recommendations On Fill Vacant Post

7ನೇ ರಾಜ್ಯ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ಹಲವಾರು ಅಂಶಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇವುಗಳಲ್ಲಿ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಗಳನ್ನು ಭರ್ತಿ ಮಾಡುವುದು ಸಹ ಒಂದು. ಲಕ್ಷಾಂತರ ಹುದ್ದೆಗಳು ಖಾಲಿ ಇರುವ ಕಾರಣ ಇರುವ ನೌಕರರ ಮೇಲೆ ಅಧಿಕ ಒತ್ತಡ ಉಂಟಾಗಿದೆ. ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ನೌಕರರು ಸರ್ಕಾರಕ್ಕೆ ಬೇಡಿಕೆ ಇಡುತ್ತಲೇ ಇದ್ದಾರೆ.

ಎಷ್ಟು ಹುದ್ದೆಗಳು ಖಾಲಿ?: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯ ಪ್ರಕಾರ ಒಟ್ಟು ಮಂಜೂರಾದ ಹುದ್ದೆಗಳು 7,72,025. ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ನೌಕರರು 5,16,105. ಖಾಲಿ ಹುದ್ದೆಗಳು 2,55,920 ಒಟ್ಟು 41 ಇಲಾಖೆಗಳ ಅಂಕಿಸಂಖ್ಯೆಗಳನ್ನು ಒಟ್ಟುಗೂಡಿಸಿ ಸರ್ಕಾರಕ್ಕೆ ವರದಿಯಲ್ಲಿ ಸಲ್ಲಿಕೆ ಮಾಡಲಾಗಿದೆ.

ತನ್ನ ಶಿಫಾರಸಿನಲ್ಲಿ ರಾಜ್ಯ 7ನೇ ವೇತನ ಆಯೋಗ 2023-24ನೇ ಸಾಲಿನ ಪ್ರಾರಂಭದಲ್ಲಿ ಕರ್ನಾಟಕ ಸರ್ಕಾರದಲ್ಲಿ ಮಂಜೂರಾದ ಒಟ್ಟು 7.72 ಲಕ್ಷ ಹುದ್ದೆಗಳಲ್ಲಿ 5.16 ಲಕ್ಷ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮತ್ತು ಒಟ್ಟಾರೆ ಶೇ 33.15 ರಷ್ಟು ಹುದ್ದೆಗಳು ಖಾಲಿಯಿವೆ. 25 ಇಲಾಖೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಿವೆ, 14 ಇಲಾಖೆಗಳಲ್ಲಿ ಶೇ 30 ರಿಂದ ಶೇ 50 ರಷ್ಟು ಹುದ್ದೆಗಳು ಖಾಲಿಯಿವೆ ಮತ್ತು 2 ಇಲಾಖೆಗಳಲ್ಲಿ ಶೇ 10 ರಿಂದ ಶೇ 30 ರಷ್ಟು ಹುದ್ದೆಗಳು ಖಾಲಿಯಿವೆ ಎಂದು ಹೇಳಿದೆ.

ಕಳೆದ 5 ವರ್ಷಗಳಲ್ಲಿ ಒಟ್ಟಾರೆ ಖಾಲಿ ಹುದ್ದೆಗಳ ಶೇಕಡಾವಾರು ಸಂಖ್ಯೆಯು ಹೆಚ್ಚು ಕಡಿಮೆ ಶೇ 33ರಲ್ಲಿ ಉಳಿದಿದ್ದಾಗ್ಯೂ ಕೆಲವು ಇಲಾಖೆಗಳಾದ ಪಶು ಸಂಗೋಪನೆ (+2,673), ಶಾಲಾ ಶಿಕ್ಷಣ (+2,540), ಅರಣ್ಯ (+2,238), ರೇಷ್ಮೆ (+2,131), ಕಂದಾಯ (+1,266), ಆರ್ಥಿಕ (+1,239) ಮತ್ತು ತೋಟಗಾರಿಕೆ (+1,224) ಇಲಾಖೆಗಳ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ (ಕಳೆದ 5 ವರ್ಷಗಳಲ್ಲಿ) ಸಾಧಾರಣ ಏರಿಕೆ ಕಂಡಿರುತ್ತದೆ ಎಂದು ತಿಳಿಸಿದೆ.

ಸಾಮಾನ್ಯವಾಗಿ ಕಳೆದ 5 ವರ್ಷಗಳಲ್ಲಿ ಮಂಜೂರಾದ, ಕಾರ್ಯನಿರತ ಮತ್ತು ಖಾಲಿ ಹುದ್ದೆಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಆಗಿಲ್ಲವೆಂಬುದು ವಾಸ್ತವ ಸಂಗತಿ. ಬಹುಶ: ಇದು ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಂತ್ರಣವನ್ನು ಮುಂದುವರೆಸಿಕೊಂಡು ಬಂದಿರುವುದರ ದ್ಯೋತಕವಾಗಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ, ಸಹಕಾರ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಸಾರಿಗೆ, ಕಾರ್ಮಿಕ, ಪಶುಸಂಗೋಪನೆ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು, ಆರ್ಥಿಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂತಾದ ಪ್ರಮುಖ ಇಲಾಖೆಗಳಲ್ಲಿ, ಮಂಜೂರಾದ ಹುದ್ದೆಗಳ ಸಂಖ್ಯೆ ಹೆಚ್ಚಳವಾಗಿದ್ದರೂ, ಆ ಇಲಾಖೆಗಳಲ್ಲಿಯೇ ಉದಾಹರಣೆಗೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಸಹಕಾರ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗಳಲ್ಲಿ ಯಾವ ಕಾರಣದಿಂದ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂಬುದನ್ನು ಗ್ರಹಿಸುವುದು ಕಷ್ಟವಾಗಿದೆ ಎಂದು ವರದಿ ಹೇಳಿದೆ.

ಹುದ್ದೆಗಳನ್ನು ಸೃಜಿಸುವ ವಿಷಯದಲ್ಲಿ ಯಾವುದೇ ಸುವ್ಯವಸ್ಥಿತ ವಿಧಾನ ಅಥವಾ ನೀತಿಯು ಇರುವುದಿಲ್ಲವೆಂಬ ಅಂಶವನ್ನು ಆಯೋಗವು ಗಮನಿಸಿರುತ್ತದೆ. ಇದನ್ನು ಸರಳೀಕರಣಗೊಳಿಸುವ ನಿರ್ದಿಷ್ಟ ಅವಶ್ಯಕತೆಯಿದೆ. ಆಯಾ ಇಲಾಖೆಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿ ಕಾರ್ಯಬಲವನ್ನು ನಿರ್ಧರಿಸಲು ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿನ ಸಿಬ್ಬಂದಿ ಸಂಖ್ಯಾಬಲವನ್ನು ಪುನರ್ ವಿಮರ್ಶೆ ಮಾಡಬೇಕೆಂದು ಮತ್ತು ಆಡಳಿತಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಮತ್ತು ಕಾರ್ಯವಿಧಾನಗಳು, ಅಗತ್ಯ ಮಾನವ ಸಂಪನ್ಮೂಲಗಳ ಮೇಲೆ ಬೀರಬಹುದಾದ ಪ್ರಭಾವವನ್ನು ಸಹ ಪರಿಗಣಿಸುವಂತೆ 6ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುತ್ತದೆ. ಈ ಆಯೋಗವು ಈ ಶಿಫಾರಸ್ಸುಗಳನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+