7th Pay Commission: ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪರಿಷ್ಕರಣೆ, ವಿವರ

ಬೆಂಗಳೂರು, ಆಗಸ್ಟ್ 31: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿರುವ ಕರ್ನಾಟಕ ಸರ್ಕಾರ ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ಅದನ್ನು ಜಾರಿಗೊಳಿಸುತ್ತಿದೆ. ವರದಿ ಜಾರಿಯಿಂದ ಸರ್ಕಾರಿ ನೌಕರರು, ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಎಷ್ಟು ವೇತನ ಹೆಚ್ಚಳವಾಗಲಿದೆ? ಎಂದು ಈಗಾಗಲೇ ವಿವರವಾದ ಆದೇಶವನ್ನು ಹೊರಡಿಸಿದೆ.

ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಆದೇಶವೊಂದನ್ನು ಹೊರಡಿಸಿ 7ನೇ ವೇತನ ಆಯೋಗದ ವರದಿ ಜಾರಿ ಬಳಿಕ ನಿವೃತ್ತ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು, ಪಿಂಚಣಿ ಪರಿಷ್ಕರಣೆ ವಿವರವನ್ನು ನೀಡಿದ್ದಾರೆ. ಇದರಲ್ಲಿ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪರಿಷ್ಕರಣೆಯ ಅಂಶಗಳು ಸೇರಿವೆ.

7th Pay Commission Karnataka Pension And Family Pension Revised

ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ: ದಿನಾಂಕ 01.07.2022ಕ್ಕೂ ಪೂರ್ವದಲ್ಲಿ ನಿವೃತ್ತನಾದ ಅಥವಾ ಮೃತನಾದ ಸರ್ಕಾರಿ ನೌಕರನ ಪ್ರಸಕ್ತ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಈ ಕೆಳಗಿನ ವಿಧಾನದಲ್ಲಿ ಪರಿಷ್ಕರಿಸತಕ್ಕದ್ದು ಎಂದು ಆದೇಶದಲ್ಲಿ ವಿವರಿಸಲಾಗಿದೆ.

* ದಿನಾಂಕ 01.07.2022 ರಂದು ಇದ್ದಂತ ಪ್ರಸಕ್ತ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ.

* ದಿನಾಂಕ 01.07.2022 ರಂದು ಇದ್ದಂತ ಪ್ರಸಕ್ತ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದ ಮೇಲಿನ ಶೇಕಡ 31ರಷ್ಟು ತುಟ್ಟಿ ಭತ್ಯೆ.

* ದಿನಾಂಕ 01.07.2022 ರಂದು ಇದ್ದಂತ ಪ್ರಸಕ್ತ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದ ಶೇಕಡ. 27.5ರಷ್ಟು ಫಿಟ್‌ಮೆಂಟ್ ಸೌಲಭ್ಯ.

ಈ ಮೇಲಿನ ಮೂರರ ಒಟ್ಟು ಮೊತ್ತವು ಸಂದರ್ಭಾನುಸಾರ ಪರಿಷ್ಕೃತ ಕನಿಷ್ಕ ನಿವೃತ್ತಿ ವೇತನ/ ಕನಿಷ್ಠ ಕುಟುಂಬ ನಿವೃತ್ತಿ ವೇತನದ ಮೊತ್ತ ಮಾಸಿಕ ರೂ.13,500ಗಳಿಗೆ ಕಡಿಮೆ ಇರತಕ್ಕದ್ದಲ್ಲ ಮತ್ತು ಅದು ಗರಿಷ್ಠ ನಿವೃತ್ತಿ ವೇತನ ರೂ. 1,20,600 ಮತ್ತು ಗರಿಷ್ಠ ಕುಟುಂಬ ನಿವೃತ್ತಿ ವೇತನ ರೂ. 80,400 ಮಿತಿಯನ್ನು ಮೀರತಕ್ಕದ್ದಲ್ಲ.

ಒಂದು ಕುಟುಂಬದ ಇಬ್ಬರು ಅಥವಾ ಹೆಚ್ಚಿನ ಸದಸ್ಯರಿಗೆ ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡುವ ಪ್ರಕರಣಗಳಲ್ಲಿ, ಆದೇಶದನ್ವಯ ಹಚ್ಚಳವಾಗುವ ಪಿಂಚಣಿ ಮೊತ್ತವನ್ನು ಪ್ರತಿ ಸದಸ್ಯನ ಪಾಲಿಗೆ ಅನ್ವಯಿಸಿ ನಿರ್ಧರಿಸತಕದ್ದು ಮತ್ತು ಅದು ಅನ್ವಯಿಸುವ ನಿಯಮಗಳು ಅಥವಾ ಆದೇಶಗಳಲ್ಲಿ ನಿರ್ಧಿಷ್ಟಪಡಿಸಿದ ಮಿತಿಗೊಳಪಟ್ಟಿರುತ್ತದೆ.

ಒಟ್ಟು ಕುಟುಂಬ ನಿವೃತ್ತಿ ವೇತನವನ್ನು ಮೇಲ್ಕಾಣಿಸಿದ ಸೂಚನೆಗಳನ್ವಯ ಪಾಲುಗಳ ಕ್ರೋಢೀಕರಿಸಿ ಒಂದೇ ಖಜಾನೆಯಲ್ಲಿ ಪಾವತಿಸುತ್ತಿದ್ದಲ್ಲಿ ಸದರಿ ಕ್ರೋಢೀಕರಣ ಮತ್ತು ಪಾಲುಗಳ ನಿರ್ಧರಣೆಗಳನ್ನು ಸಂಬಂಧಿಸಿದ ಖಜಾನಾಧಿಕಾರಿಯೇ ಲೆಕ್ಕಹಾಕತಕ್ಕದ್ದು. ಬೇರೆ ಬೇರೆ ಖಜಾನೆಗಳಲ್ಲಿ ಪಾಲುಗಳನ್ನು ಪಡೆಯಲಾಗುತ್ತಿದ್ದ ಪ್ರಕರಣಗಳಲ್ಲಿ ಮಹಾಲೇಖಪಾಲರನ್ನು ಸಮಾಲೋಚಿಸುವುದು.

ದಿನಾಂಕ 01.07.2022 ಮುಂಚೆ ಸೇವೆಯಿಂದ ನಿವೃತ್ತರಾದ ಅಥವಾ ಸೇವಾವಧಿಯಲ್ಲಿರುವಾಗಲೇ ಮರಣ ಹೊಂದಿದ ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರ ಪಕರಣಗಳಲ್ಲಿ ಈ ಆದೇಶದನ್ವಯ ಹೆಚ್ಚಳವಾಗುವ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಮೊತ್ತವನ್ನು ಅನ್ವಯಿಸುವ ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರಿಗೆ ಈ ಮೇಲಿನ ನಿಬಂಧನೆಗಳ ಪೂರೈಕೆಗೊಳಪಟ್ಟು ಮಹಾಲೇಖಪಾಲರಿಂದ ಯಾವುದೇ ಪ್ರಾಧೀಕರಣ ಪಡೆಯದೇ ಖಜಾನಾಧಿಕಾರಿಯೇ ಪಾವತಿಸತಕ್ಕದ್ದು.

ದಿನಾಂಕ 01.07.2022ರಂದು ಇದ್ದಂತ ನಿವೃತ್ತಿ ವೇತನದಾರರ/ ಕುಟುಂಬ ನಿವೃತ್ತಿ ವೇತನದಾರರ ಪ್ರಸಕ್ತ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದ ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೊತ್ತವು ಆದೇಶದಲ್ಲಿ ತೋರಿಸಿರುವಂತೆ ಇರುತ್ತದೆ.

ಈ ಆದೇಶದನ್ವಯ ಮಂಜೂರು ಮಾಡಲಾಗುವ ನಿವೃತ್ತಿ ವೇತನವು ಅಥವಾ ಕುಟುಂಬ ನಿವೃತ್ತಿ ವೇತನ ಈ ಕೆಳಕಂಡ ನಿಬಂಧನೆಗಳಿಗೊಳಪಟ್ಟಿರುತ್ತದೆ

* ಸಂದರ್ಭಾನುಸಾರ ಪ್ರಸಕ್ತ ನಿವೃತ್ತಿ ವೇತನ ಅಥವಾ ಕುಟುಂಬ ನಿವೃತ್ತಿ ವೇತನದ ಲಭ್ಯತೆಯ ಜೊತೆಗೆ ನಿವೃತ್ತಿ ವೇತನ ಅಥವಾ ಕುಟುಂಬ ನಿವೃತ್ತಿ ವೇತನದ ಹೆಚ್ಚಳದ ಕಾರಣದಿಂದಾಗಿ ಲಭ್ಯವಾಗುವ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಮೊತ್ತವು ಮಾಹಯಾನ ಲಭ್ಯವಿರುವ ಗರಿಷ್ಠ ನಿವೃತ್ತಿ ವೇತನ ಅಥವಾ ಗರಿಷ್ಠ ಕುಟುಂಬ ನಿವೃತ್ತಿ ವೇತನದ ಮಿತಿಯನ್ನು ಮೀರುವಂತಿದ್ದಲ್ಲಿ, ಅದರ ಒಟ್ಟಾರ ಮೊತ್ತವು ಈ ಗರಿಷ್ಠ ಪಿಂಚಣಿ ಮತ್ತು ಗರಿಷ್ಠ ಕುಟುಂಬ ಪಿಂಚಣಿಯ ನಿರ್ಧಿಷ್ಟ ಮೊತ್ತಕ್ಕೆ ಸೀಮಿತಗೊಳಿಸತಕ್ಕದ್ದು.

* ನಿವೃತ್ತಿ ವೇತನ ಹೆಚ್ಚಳ ಬಾಕಿಗೆ ಅರ್ಹತೆ ಹೊಂದಿದ್ದ ಮೃತ ಪಿಂಚಣಿದಾರರ ಪ್ರಕರಣದಲ್ಲಿ ಅನ್ವಯಿಸುವ ನಿಯಮಗಳ ಅವಕಾಶಗಳಡಿ ಕುಟುಂಬ ಪಿಂಚಣಿಯನ್ನು ಪಡೆಯಲು ಅರ್ಹನಿರುವ ವ್ಯಕ್ತಿಗೆ ಅಥವಾ ಮೃತ ಪಿಂಚಣಿದಾರರ ವಾರಸುದಾರರಿಗೆ ಪಾವತಿಸತಕ್ಕದ್ದು. ಅಂತಹ ಪಾವತಿಯನ್ನು ಮಾಡುವಲ್ಲಿ ಕರ್ನಾಟಕ ಖಜಾನೆ ಸಂಹಿತೆಯಲ್ಲಿ ವಿಧಿಸಲಾದ ಕಾರ್ಯ ವಿಧಾನವನ್ನು ಅನುಸರಿಸತಕ್ಕದ್ದು.

* ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಕ್ರಮಬದ್ಧಗೊಳಿಸುವ ಕುರಿತಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002 ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಅಸಾಧಾರಣ ನಿವೃತ್ತಿ ವೇತನ) ನಿಯಮಗಳು 2003 ಮತ್ತು ಅದರಡಿ ಕಾಲ ಕಾಲಕ ಹೊರಡಿಸಿದ ಆದೇಶಗಳು ಸೂಕ್ತ ಬದಲಾವಣೆಗಳೊಂದಿಗೆ ಅನ್ವಯಿಸತಕ್ಕದ್ದು.

* ನಿವೃತ್ತಿ ವೇತನ, ನಿವೃತ್ತಿ ಉಪದಾನ, ಕುಟುಂಬ ನಿವೃತ್ತಿ ವೇತನ ಮತ್ತು ಪರಿವರ್ತಿತ ನಿವೃತ್ತಿ ವೇತನ ಕ್ರಮಬದ್ಧಗೊಳಿಸುವ ಕುರಿತಂತೆ ಚಾಲ್ತಿಯಲ್ಲಿರುವ ನಿಯಮ/ ಆದೇಶಗಳು ಮುಂದುವರೆದು ಅನ್ವಯಿಸುತ್ತದೆ.

* ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು ಮತ್ತು ಇತರ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

* ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002 ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಅಸಾಧಾರಣ ನಿವೃತ್ತಿ ವೇತನ) ನಿಯಮಗಳು, 2003 ಗಳಿಗೆ ಸೂಕ್ತ ತಿದ್ದುಪಡಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+