ಕರ್ನಾಟಕದಲ್ಲಿ 24 ಗಂಟೆಗಳಲ್ಲೇ 7866 ಮಂದಿಗೆ ಕೊವಿಡ್-19 ಪಾಸಿಟಿವ್

ಬೆಂಗಳೂರು, ಸಪ್ಟೆಂಬರ್.08: ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 412190ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 7866 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ಕರ್ನಾಟಕದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 146 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 6680ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಕೊರೊನಾವೈರಸ್ ಒಟ್ಟು 412190 ಸೋಂಕಿತ ಪ್ರಕರಣಗಳ ಪೈಕಿ 308573 ಸೋಂಕಿತರು ಗುಣಮುಖರಾಗಿದ್ದಾರೆ. 96918 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 7803 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

7866 New Coronavirus Cases Reported in Karnataka Today, State Tally Rise to 412190

ರಾಜ್ಯದಲ್ಲಿ ಎಷ್ಟು ಮಂದಿಗೆ ಕೊರೊನಾವೈರಸ್ ಪರೀಕ್ಷೆ?:

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 38291 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 29152 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 67443 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 34,61,119 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?:

ರಾಜ್ಯದಲ್ಲಿ ಒಟ್ಟು 7866 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 212, ಬಳ್ಳಾರಿ 404, ಬೆಳಗಾವಿ 230, ಬೆಂಗಳೂರು ಗ್ರಾಮಾಂತರ 104, ಬೆಂಗಳೂರು 3102, ಬೀದರ್ 52, ಚಾಮರಾಜನಗರ 42, ಚಿಕ್ಕಬಳ್ಳಾಪುರ 82, ಚಿಕ್ಕಮಗಳೂರು 162, ಚಿತ್ರದುರ್ಗ 23, ದಕ್ಷಿಣ ಕನ್ನಡ 374, ದಾವಣಗೆರೆ 240, ಧಾರವಾಡ 318, ಗದಗ 196, ಹಾಸನ 219, ಹಾವೇರಿ 165, ಕಲಬುರಗಿ 199, ಕೊಡಗು 29, ಕೋಲಾರ 30, ಕೊಪ್ಪಳ 269, ಮಂಡ್ಯ 273, ಮೈಸೂರು 337, ರಾಯಚೂರು 209, ರಾಮನಗರ 28, ಶಿವಮೊಗ್ಗ 0, ತುಮಕೂರು 153, ಉಡುಪಿ 250, ಉತ್ತರ ಕನ್ನಡ 24, ವಿಜಯಪುರ 61, ಯಾದಗಿರಿ 79 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+