ಬೆಂಗಳೂರು, ಮೈಸೂರಿನ ಜನರಿಗೆ ಕೊರೊನಾವೈರಸ್ ಶಾಕ್!
ಬೆಂಗಳೂರು, ಮಾರ್ಚ್.11: ಕೊರೊನಾವೈರಸ್ ಸೋಂಕಿನ ಹರಡುವಿಕೆಯು ಬೆಂಗಳೂರು ಮತ್ತು ಮೈಸೂರಿನ ಜನರ ಎದೆಯಲ್ಲಿ ಮತ್ತಷ್ಟು ಭಯವನ್ನು ಹುಟ್ಟು ಹಾಕುತ್ತಿದೆ. ಕಳೆದ 24 ಗಂಟೆಗಳಲ್ಲಿ ಎರಡು ಜಿಲ್ಲೆಗಳಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಒಂದೇ ದಿನ 492 ಮಂದಿಗೆ ಸೋಂಕು ತಗುಲಿದ್ದರೆ, ಮೈಸೂರಿನಲ್ಲಿ 50 ಜನರಿಗೆ ಕೊವಿಡ್-19 ಸೋಂಕು ಅಂಟಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಒಂದೇ ದಿನ 783 ಜನರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 957584ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಒಂದೇ ದಿನ 406 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 937353 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ ಒಂದೇ ದಿನ ಇಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 12381ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 7831 ಸಕ್ರಿಯ ಪ್ರಕರಣಗಳಿರುವುದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ಜಿಲ್ಲಾವಾರು ಕೊರೊನಾವೈರಸ್:
ರಾಜ್ಯದಲ್ಲಿ ಒಟ್ಟು 783 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 5, ಬಳ್ಳಾರಿ 20, ಬೆಳಗಾವಿ 11, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು 492, ಬೀದರ್ 20, ಚಾಮರಾಜನಗರ 3, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 4, ಚಿತ್ರದುರ್ಗ 8, ದಕ್ಷಿಣ ಕನ್ನಡ 11, ದಾವಣಗೆರೆ 7, ಧಾರವಾಡ 15, ಗದಗ 4, ಹಾಸನ 9, ಹಾವೇರಿ 0, ಕಲಬುರಗಿ 20, ಕೊಡಗು 5, ಕೋಲಾರ 1, ಕೊಪ್ಪಳ 1, ಮಂಡ್ಯ 2, ಮೈಸೂರು 50, ರಾಯಚೂರು 3, ರಾಮನಗರ 1, ಶಿವಮೊಗ್ಗ 2, ತುಮಕೂರು 36, ಉಡುಪಿ 14, ಉತ್ತರ ಕನ್ನಡ 3, ವಿಜಯಪುರ 8, ಯಾದಗಿರಿ 2 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications