Karnataka Exit Poll Results 2023: ಏಳು ಎಕ್ಸಿಟ್ ಫೋಲ್‌ಗಳಲ್ಲಿ 5 ರಲ್ಲಿ ಕಾಂಗ್ರೆಸ್, 2 ರಲ್ಲಿ ಬಿಜೆಪಿ ಮುಂದೆ

ಬೆಂಗಳೂರು, ಮೇ.10: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದಿದ್ದು, ರಾಜ್ಯದಲ್ಲಿ ಉತ್ತಮ ಮತದಾನ ನಡೆದಿದೆ. ಇದೆ ಬೆನ್ನಲ್ಲೇ ಹಲವು ಮಾಧ್ಯಮ ಸಂಸ್ಥೆಗಳು ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆ ಮಾಡಿವೆ. ಒಟ್ಟು ಏಳು ಸಮೀಕ್ಷೆಗಳ ಫಲಿತಾಂಶ ಬಂದಿದ್ದು, ಅವುಗಳಲ್ಲಿ ಬಹುಪಾಲು ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿನ ಲಾಭವಾಗುವ ಬಗ್ಗೆ ಭವಿಷ್ಯ ನುಡಿದಿವೆ.

ಬುಧವಾರ ಬಂದಿರುವ ಏಳು ಎಕ್ಸಿಟ್ ಪೋಲ್‌ಗಳಲ್ಲಿ ಐದು ಕಾಂಗ್ರೆಸ್ ಪರ ಭವಿಷ್ಯ ನುಡಿದಿವೆ . ಇನ್ನು ಎರಡು ಚುನಾವಣೋತ್ತರ ಫಲಿತಾಂಶಗಳು ಬಿಜೆಪಿ ಪರವಾಗಿವೆ. ಇದರಿಂದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಜಾತ್ಯಾತೀತ ಜನತಾ ದಳ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ ಎಂದು ಏಕ್ಸಿಟ್ ಪೋಲ್ ಭವಿಷ್ಯವಾಣಿಗಳು ಸೂಚಿಸಿವೆ.

 Exit Poll Results 2023

224 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತದಿಂದ ಸರ್ಕಾರ ರಚಿಸಲು 113 ಸ್ಥಾನಗಳನ್ನು ಪಡೆಯಬೇಕಿದೆ. ಟೈಮ್ಸ್ ನೌ ಇಟಿಜಿ ಮತ್ತು ಝೀ ನ್ಯೂಸ್ ಮ್ಯಾಟ್ರಿಜ್ ಸಂಸ್ಥೆ ಕೇವಲ ಎರಡು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಗೆಲುವಿನ ಸಾಧ್ಯತೆಯನ್ನು ಭವಿಷ್ಯ ನುಡಿದಿವೆ. ಇನ್ನಿಬ್ಬರು ಬಿಜೆಪಿಗೆ 114 ಮತ್ತು 117ರ ಗರಿಷ್ಠ ಸ್ಥಾನಗಳು ಗೆಲ್ಲಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ನ್ಯೂಸ್ ನೇಷನ್-ಸಿಜಿಎಸ್ ರಾಜ್ಯದ ಆಡಳಿತಾರೂಢ ಬಿಜೆಪಿ 114 ಸ್ಥಾನಗಳೊಂದಿಗೆ ಬಹುಮತದ ಗಡಿ ದಾಟಲಿದೆ. ಕಾಂಗ್ರೆಸ್ 86 ಸ್ಥಾನಗಳನ್ನು ಮತ್ತು ಜೆಡಿಎಸ್ 21 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ಸುವರ್ಣ ನ್ಯೂಸ್-ಜನ್ ಕಿ ಬಾತ್‌ ಕೂಡ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿದೆ. ಬಿಜೆಪಿ 94 ರಿಂದ 117 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 91-106 ಸ್ಥಾನಗಳನ್ನು ಮತ್ತು ಜೆಡಿಎಸ್ 14-24 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.

ಇತರ ಐದು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುಲಿದೆ ಎಂದು ಹೇಳಿವೆ. ಆದರೆ, ಬಿಜೆಪಿ ತೀರ ಸಮೀಪದಲ್ಲಿದೆ ಎಂದು ಭವಿಷ್ಯ ನುಡಿದಿವೆ.

 Exit Poll Results 2023

*ಟೈಮ್ಸ್ ನೌ-ಇಟಿಜಿ ಕಾಂಗ್ರೆಸ್ ಬಹುಮತದ ಗುರಿಯನ್ನು ಮುಟ್ಟುತ್ತದೆ ಎಂದು ಭವಿಷ್ಯ ನುಡಿದಿದೆ. ಪಕ್ಷ 113 ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಬಿಜೆಪಿ 85 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಭವಿಷ್ಯ ನುಡಿದಿದೆ. 23 ಸ್ಥಾನಗಳು ಜಾತ್ಯಾತೀತ ಜನತಾ ದಳದ ಪಾಲಾಗಲಿವೆ ಎಂದು ಭವಿಷ್ಯ ನುಡಿದಿದೆ.

* 224 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 85-100, ಕಾಂಗ್ರೆಸ್ 94-108 ಮತ್ತು ಜೆಡಿಎಸ್ 24-32 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಭವಿಷ್ಯ ನುಡಿದಿದೆ.

*TV 9 ಭಾರತ್‌ವರ್ಷ- ಪೋಲ್‌ಸ್ಟ್ರಾಟ್ ಬಿಜೆಪಿಗೆ 88-98 ಸ್ಥಾನಗಳು, ಕಾಂಗ್ರೆಸ್‌ಗೆ 99-109 ಸ್ಥಾನಗಳು ಮತ್ತು ಜೆಡಿಎಸ್‌ಗೆ 21-26 ಸ್ಥಾನಗಳನ್ನು ಭವಿಷ್ಯ ನುಡಿದಿದೆ.

* ಝೀ ನ್ಯೂಸ್ ಮ್ಯಾಟ್ರಿಜ್ ಬಿಜೆಪಿಗೆ 79-94 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 103-118 ಸ್ಥಾನಗಳು ಮತ್ತು ಜೆಡಿಎಸ್‌ಗೆ 25-33 ಸೀಟುಗಳು ಸಿಗಲಿವೆ ಎಂದು ಭವಿಷ್ಯ ನುಡಿದಿದೆ.

* ಎಬಿಪಿ ನ್ಯೂಸ್-ಸಿ ವೋಟರ್ ಬಿಜೆಪಿ 83-95 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 100 ರಿಂದ 112 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಜೆಡಿಎಸ್ 21 ರಿಂದ 29 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+