Breaking: ಕರ್ನಾಟಕದಲ್ಲಿ ಕೊರೊನಾ ಅಪಾಯ; ಗಂಟೆಗೆ 25 ಮಂದಿಗೆ ಸೋಂಕು!

ಬೆಂಗಳೂರು, ಜೂನ್ 27: ಕರ್ನಾಟಕದಿಂದ ಕೊರೊನಾ ವೈರಸ್ ಸೋಂಕಿನ ಹಾವಳಿ ಹೋಯ್ತು ಎನ್ನುವಷ್ಟರಲ್ಲೇ ಎಲ್ಲ ಲೆಕ್ಕಾಚಾರಗಳು ಉಲ್ಟಾ ಹೊಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯ ರಾಜಧಾನಿ ಮಂದಿ ಎಷ್ಟು ಜಾಗೃತಿ ವಹಿಸಿದರೂ ಕಡಿಮೆ ಎನ್ನುವಂತಾ ವಾತಾವರಣ ಸೃಷ್ಟಿ ಆಗುತ್ತಿದೆ.

ರಾಜ್ಯದಲ್ಲಿ ಪ್ರತಿಯೊಂದು ಗಂಟೆಯಲ್ಲಿ 25 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆ ಮೂಲಕ ಕಳೆದ 24 ಗಂಟೆಯಲ್ಲಿ 617 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಖಾತ್ರಿಯಾಗಿದೆ.

ಕರ್ನಾಟಕದ ಮಂದಿ ಕೊಂಚ ನಿಟ್ಟುಸಿರು ಬಿಡುವುದಕ್ಕೂ ಒಂದು ಕಾರಣವಿದೆ. ಇದೇ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಸಾವಿನ ಸಂಖ್ಯೆಯು ಶೂನ್ಯ ಪ್ರಮಾಣದಲ್ಲಿದೆ. ಒಂದು ದಿನದಲ್ಲಿ ಕೋವಿಡ್-19 ಸೋಂಕಿಗೆ ಒಬ್ಬರೇ ಒಬ್ಬರು ಪ್ರಾಣ ಬಿಟ್ಟಿಲ್ಲ ಎನ್ನುವುದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ-ಅಂಶಗಳಲ್ಲಿ ಖಾತ್ರಿಯಾಗಿದೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣ

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣ

ಕರ್ನಾಟಕದಲ್ಲಿ ಕೋವಿಡ್-19 ಸೋಂಕಿನ ಪಾಸಿಟಿವಿಟಿ ದರವು ಶೇ.3.13ರಷ್ಟಾಗಿದೆ. ಅದೇ ರೀತಿ ಒಂದು ವಾರದಲ್ಲಿ ಕೊರೊನಾ ವೈರಸ್ ಪಾಸಿಟಿವಿಟಿ ದರದಲ್ಲಿ ಶೇ.3.45ರಷ್ಟು ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲೇ 617 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 767 ಸೋಂಕಿತರು ಗುಣಮುಖರಾಗಿದ್ದು, ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 3965452 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 3921050 ಸೋಂಕಿತರು ಗುಣಮುಖರಾಗಿದ್ದು, 40,072 ಜನರು ಕೋವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 4288 ಸಕ್ರಿಯ ಪ್ರಕರಣಗಳಿವೆ.

ರಾಜ್ಯ ರಾಜಧಾನಿಯಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣ

ರಾಜ್ಯ ರಾಜಧಾನಿಯಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣ

ಕರ್ನಾಟಕದಲ್ಲಿ 617 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಾತ್ರಿಯಾಗಿದ್ದರೆ, ಅದರಲ್ಲಿ 592 ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ವರದಿಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1800415ಕ್ಕೆ ಏರಿಕೆಯಾಗಿದೆ. ಇದುವರೆಗೂ 1779359 ಸೋಂಕಿತರು ಗುಣಮುಖರಾಗಿದ್ದರೆ, 16967 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೋವಿಡ್-19 ಅಪಾಯ ಇನ್ನೂ ಕಡಿಮೆಯಾಗಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ.

ಬೆಂಗಳೂರು ಹೊರತಾಗಿ ಇತರೆ ಜಿಲ್ಲೆಗಳಲ್ಲಿ 25 ಪ್ರಕರಣ

ಬೆಂಗಳೂರು ಹೊರತಾಗಿ ಇತರೆ ಜಿಲ್ಲೆಗಳಲ್ಲಿ 25 ಪ್ರಕರಣ

ಕರ್ನಾಟಕದಲ್ಲಿ ವರದಿ ಆಗಿರುವ ಒಟ್ಟು 617 ಕೊರೊನಾ ವೈರಸ್ ಪ್ರಕರಣಗಳಲ್ಲಿ 592 ಪ್ರಕರಣಗಳು ಬೆಂಗಳೂರು ನಗರ ಜಲ್ಲೆಗೆ ಸೇರಿವೆ. ಉಳಿದ 25 ಸೋಂಕಿತ ಪ್ರಕರಣಗಳ ಪೈಕಿ ಬಳ್ಳಾರಿ 3, ಬೀದರ್ 1, ದಕ್ಷಿಣ ಕನ್ನಡ 7, ಧಾರವಾಡ 4, ಹಾಸನ 1, ಹಾವೇರಿ 1, ಕಲಬುರಗಿ 1, ಕೋಲಾರ 1, ಮೈಸೂರು 4, ಉಡುಪಿ 3 ಮತ್ತು ಉತ್ತರ ಕನ್ನಡ 3 ಕೋವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಕೋವಿಡ್-19 ತಪಾಸಣೆ ಮತ್ತು ಲಸಿಕೆ ವಿತರಣೆ

ರಾಜ್ಯದಲ್ಲಿ ಕೋವಿಡ್-19 ತಪಾಸಣೆ ಮತ್ತು ಲಸಿಕೆ ವಿತರಣೆ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 4415 ಜನರಿಗೆ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ನಡೆಸಲಾಗಿದೆ. 15342 ಜನರಿಗೆ RT-PCR ತಪಾಸಣೆ ನಡೆಸಲಾಗಿದ್ದು, ಒಂದು ದಿನದಲ್ಲಿ ಒಟ್ಟು 19757 ಮಂದಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ.

ಕರ್ನಾಟಕದಲ್ಲಿ ಈವರೆಗೂ 5,47,97,258 ಜನರಿಗೆ ಮೊದಲ ಡೋಸ್, 5,35,73,080 ಜನರಿಗೆ ಎರಡನೇ ಡೋಸ್ ಮತ್ತು 35,86,247 ಮಂದಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 11,16,39,056 ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+