ನಾವು ಉದ್ಯೋಗ ಹುಡುಕುವ ವಯಸ್ಸಿನಲ್ಲಿ ಇವರುಗಳು ಸಂಸದರು!

6 youngest winning candidates: ಈಗಾಗಲೇ ನಿನ್ನೆ (ಜೂನ್‌ 04) ಲೋಕಸಭೆ ಚುನಾನಣೆ ಫಲಿತಾಂಶ ಪ್ರಕಟವಾಗಿದೆ. ಹಾಗಾದರೆ ಈ ಬಾರಿ ಗೆಲುವು ಸಾಧಿಸಿ ಸಂಸತ್‌ಗೆ ಆಯ್ಕೆಯಾದ ಅತೀ ಚಿಕ್ಕ ವಯಸ್ಸಿನ ಅಭ್ಯರ್ಥಿಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

25 ವರ್ಷ ವಯಸ್ಸಿನ ನಾಲ್ವರು ಅಭ್ಯರ್ಥಿಗಳು ಸಂಸಯತ್‌ಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ. ಇಸಿಐ ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಬಿಹಾರದಾದ್ಯಂತ ಇರುವ ಕ್ಷೇತ್ರಗಳ ಈ ನಾಲ್ಕು ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ವಿಜಯಶಾಲಿಯಾದ ಅತ್ಯಂತ ಕಿರಿಯ ಅಭ್ಯರ್ಥಿಗಳಾಗಿದ್ದಾರೆ.

6 Youngest winning candidates of Lok sabha election 2024 in India Know details

ಉತ್ತರ ಪ್ರದೇಶ ಕೌಶಾಂಬಿ ಯಿಂದ ಪುಷ್ಪೇಂದ್ರ ಸರೋಜ್ (ಸಮಾಜವಾದಿ ಪಕ್ಷ), ಉತ್ತರ ಪ್ರದೇಶ ಮಚ್ಲಿಶಹರ್‌ನಿಂದ ಪ್ರಿಯಾ ಸರೋಜ್ (ಸಮಾಜವಾದಿ ಪಕ್ಷ), ಬಿಹಾರದ ಸಮಸ್ತಿಪುರದಿಂದ ಶಾಂಭವಿ ಚೌಧರಿ (ಎನ್‌ಡಿಎ), ರಾಜಸ್ಥಾನದ ಭರತಪುರದಿಂದ ಸಂಜನಾ ಜಾತವ್ (ಕಾಂಗ್ರೆಸ್), ಕರ್ನಾಕದ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಿಯಾಂಕ ಜಾರಕಿಹೊಳಿ (ಕಾಂಗ್ರೆಸ್) ಅವರು ಗೆಲುವು ಸಾಧಿಸಿದ್ದು, ಇವರು ಸಂಸತ್‌ ಪ್ರವೇಶಿಸಲಿರುವ ಅತ್ಯಂತ ಕಿರಿಯ ಅಭ್ಯರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದ ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಾಂಕ ಜಾರಕಿಹೊಳಿ (ಕಾಂಗ್ರೆಸ್‌) ಅವರು 90,834 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಬೀದರ್‌ ಕ್ಷೇತ್ರದಿಂದ ಸಾಗರ್ ಈಶ್ವರ್ ಖಂಡ್ರೆ (ಕಾಂಗ್ರೆಸ್‌) 1,26,308, ಉತ್ತರ ಪ್ರದೇಶದ ಕೌಶಾಂಬಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪುಷ್ಪೇಂದ್ರ ಸರೋಜ್ 1,03,944 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಉತ್ತರ ಪ್ರದೇಶದ ಮಚ್ಲಿಶಹರ್‌ ಕ್ಷೇತ್ರದಲ್ಲಿ ಪ್ರಿಯಾ ಸರೋಜ್ 35,850, ಬಿಹಾರದ ಸಮಸ್ತಿಪುರ ಕ್ಷೇತ್ರದಲ್ಲಿ ಶಾಂಭವಿ ಚೌಧರಿ 1,87,251, ರಾಜಸ್ಥಾನದ ಭರತಪುರ ಕ್ಷೇತ್ರದಲ್ಲಿ ಸಂಜನಾ ಜಾತವ್ ಅವರು 51,983 ಮತಗಳ ಅಂತರದಿಂದ ಗೆಲವು ಸಾಧಿಸಿದ ಅತ್ಯಂತ ಕಿರಿಯ ಅಭ್ಯರ್ಥಿಗಳಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+