ಕರ್ನಾಟಕದಲ್ಲಿ 5815 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಬೆಂಗಳೂರು, ಜೂನ್ 19: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 5815 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1263 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 161 ಮಂದಿ ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೂ ಸೋಂಕಿನಿಂದ 33763 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಅವಧಿಯಲ್ಲಿ 11832 ಸೋಂಕಿತರು ಗುಣಮುಖರಾಗಿದ್ದಾರೆ.

5815 New Coronavirus Cases Reported In On June 19

ಶನಿವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2801936ಕ್ಕೆ ಏರಿಕೆಯಾಗಿದೆ. ಈವರೆಗೂ 2637279 ಸೋಂಕಿತರು ಗುಣಮುಖರಾಗಿದ್ದು. 130872 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Recommended Video

      Yediyurappa ವಿರುದ್ಧ ಕಂಪ್ಲೇಂಟ್ ನೀಡಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡ Eshwarappa | Oneindia Kannada

      ಕರ್ನಾಟಕದಲ್ಲಿ ಅಪಾಯಕಾರಿಯಾದ ಕೊರೊನಾವೈರಸ್: ಒಂದೇ ದಿನ ಸತ್ತವರೆಷ್ಟು?

      ಜಿಲ್ಲಾವಾರು ಕೋವಿಡ್ ಪ್ರಕರಣಗಳು:
      ರಾಜ್ಯದಲ್ಲಿ ಒಟ್ಟು 5815 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 11, ಬಳ್ಳಾರಿ 128, ಬೆಳಗಾವಿ 222, ಬೆಂಗಳೂರು ಗ್ರಾಮಾಂತರ 161, ಬೆಂಗಳೂರು 1263, ಬೀದರ್ 3, ಚಾಮರಾಜನಗರ 113, ಚಿಕ್ಕಬಳ್ಳಾಪುರ 105, ಚಿಕ್ಕಮಗಳೂರು 177, ಚಿತ್ರದುರ್ಗ 113, ದಕ್ಷಿಣ ಕನ್ನಡ 832, ದಾವಣಗೆರೆ 194, ಧಾರವಾಡ 83, ಗದಗ 28, ಹಾಸನ 391, ಹಾವೇರಿ 20, ಕಲಬುರಗಿ 28, ಕೊಡಗು 135, ಕೋಲಾರ 132, ಕೊಪ್ಪಳ 62, ಮಂಡ್ಯ 208, ಮೈಸೂರು 594, ರಾಯಚೂರು 16, ರಾಮನಗರ 24, ಶಿವಮೊಗ್ಗ 229, ತುಮಕೂರು 182, ಉಡುಪಿ 174, ಉತ್ತರ ಕನ್ನಡ 144, ವಿಜಯಪುರ 44, ಯಾದಗಿರಿ 5 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+