ಕರ್ನಾಟಕದಲ್ಲಿ ಹೊಸದಾಗಿ 529 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು,ಜನವರಿ 26:ಕರ್ನಾಟಕದಲ್ಲಿ ಇಂದು 526 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.738 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ ಒಟ್ಟು 918099 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
663 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 12204 ಮಂದಿ ಮೃತಪಟ್ಟಿದ್ದಾರೆ, ಒಂದೇ ದಿನ 4 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಇಂದು 276 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 3,97,609ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಟ್ಟು 936955 ಪ್ರಕರಣಗಳಿವೆ, 147 ಮಂದಿ ಐಸಿಯುನಲ್ಲಿದ್ದಾರೆ. ಬಳ್ಳಾರಿ 3, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 11, ಬೀದರ್ 1, ಚಾಮರಾಜನಗರ 1, ಚಿಕ್ಕಬಳ್ಳಾಪುರ 33, ಚಿಕ್ಕಮಗಳೂರು 5, ಚಿತ್ರದುರ್ಗ 11, ದಕ್ಷಿಣ ಕನ್ನಡ 19, ದಾವಣಗೆರೆ 5, ಧಾರವಾಡ 5, ಹಾಸನ 4, ಹಾವೇರಿ 2, ಕಲಬುರಗಿ 15, ಕೊಡಗು 6, ಕೋಲಾರ 2, ಮಂಡ್ಯ 8, ಮೈಸೂರು 26, ರಾಯಚೂರು 2, ರಾಮನಗರ 1, ಶಿವಮೊಗ್ಗ 5, ತುಮಕೂರು 36, ಉಡುಪಿ 7, ಉತ್ತರ ಕನ್ನಡ 16, ವಿಜಯಪುರ 2, ಯಾದಗಿರಿಯಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications