ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 5.10 ಕೋಟಿ ಮತದಾರರು

ಬೆಂಗಳೂರು, ಏಪ್ರಿಲ್ 09 : 2019ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮತದಾರರ ಪಟ್ಟಿ ಅಂತಿಮಗೊಂಡಿದೆ. ಏಪ್ರಿಲ್ 18 ಮತ್ತು 23ರಂದು ಮತದಾನ ನಡೆಯಲಿದ್ದು, 5.10 ಕೋಟಿ ಜನರು ಮತದಾನ ಮಾಡಬಹುದಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 2014ರ ಚುನಾವಣೆಯಲ್ಲಿ 4.62 ಕೋಟಿ ಮತದಾರರು ಇದ್ದರು. ಈ ಬಾರಿ 4,661 ತೃತೀಯ ಲಿಂಗಿಗಳು ಸೇರಿದಂತೆ 5.10 ಕೋಟಿ ಜನರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ.

ಈ ಬಾರಿ ರಾಜ್ಯದಲ್ಲಿ 2.58 ಕೋಟಿ ಪುರುಷ, 2.52 ಕೋಟಿ ಮಹಿಳಾ, 4,661 ತೃತೀಯ ಲಿಂಗಿಗಳು ಮತದಾನ ಮಾಡಬಹುದಾಗಿದೆ. 18 ರಿಂದ 19 ವರ್ಷ ವಯಸ್ಸಿನ 10 ಲಕ್ಷ ಹೊಸ ಮತದಾರರು ಈ ಬಾರಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಏಪ್ರಿಲ್ 18 ಮತ್ತು 23ರಂದು ಒಟ್ಟು ಎರಡು ಹಂತದಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಎರಡು ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದ್ದು, ಬಿರುಸಿನಿಂದ ಪ್ರಚಾರ ನಡೆಯುತ್ತಿದೆ....

5 ಸಾವಿರ ಶತಾಯುಷಿ ಮತದಾರರು

5 ಸಾವಿರ ಶತಾಯುಷಿ ಮತದಾರರು

ಕರ್ನಾಟಕದಲ್ಲಿ 30 ರಿಂದ 39 ವರ್ಷದ 1.33 ಕೋಟಿ ಮತದಾರರು, 5,580 ಮಂದಿ ಶತಾಯುಷಿ ಮತದಾರರು ಇದ್ದಾರೆ. 90 ರಿಂದ 99 ವರ್ಷ ವಯಸ್ಸಿನ 1,47,213 ಮಂದಿ, 80 ರಿಂದ 90 ವರ್ಷ ವಯಸ್ಸಿನ 7,87,893 ಮತದಾರರು ಇದ್ದಾರೆ.

10 ಲಕ್ಷ ಹೊಸ ಮತದಾರರು

10 ಲಕ್ಷ ಹೊಸ ಮತದಾರರು

ಕರ್ನಾಟಕದಲ್ಲಿ ಒಟ್ಟು 5.10 ಕೋಟಿ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬಹುದು.
* 2.58 ಕೋಟಿ ಪುರುಷ
* 2.52 ಕೋಟಿ ಮಹಿಳಾ
* 4,661 ತೃತೀಯ ಲಿಂಗಿಗಳು

58,186 ಮತಗಟ್ಟೆ

58,186 ಮತಗಟ್ಟೆ

ಕರ್ನಾಟಕದ 28 ಕ್ಷೇತ್ರಗಳಿಗೆ ಒಟ್ಟು 2 ಹಂತದಲ್ಲಿ ಮತದಾನ ನಡೆಯಲಿದೆ. ಮತದಾನಕ್ಕಾಗಿ 58,186 ಮತಗಟ್ಟೆ ಸ್ಥಾಪನೆ ಮಾಡಲಾಗುತ್ತದೆ. ಮೊದಲ ಹಂತದ ಮತದಾನಕ್ಕೆ 30,164 ಮತ್ತು 2ನೇ ಹಂತದ ಮತದಾನಕ್ಕೆ 28,022 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.

639 ಸಖಿ ಮತಗಟ್ಟೆ

639 ಸಖಿ ಮತಗಟ್ಟೆ

ಮಹಿಳೆಯರೇ ನಿರ್ವಹಣೆ ಮಾಡುವ 639 ಸಖಿ ಮತಗಟ್ಟೆ. ಅಂಗವಿಕಲರು ನಿರ್ವಹಣೆ ಮಾಡುವ 96 ಮತಗಟ್ಟೆ, ಬುಡಕಟ್ಟು ಸಂಸ್ಕೃತಿ ಬಿಂಬಿಸುವ 39 ಎಥ್ನಿಕ್ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+