ರಾಜ್ಯದಲ್ಲಿ ಮತ್ತೆ ಐದು ಸಾವಿರದ ಅಂಚಿಗೆ ಬಂದ ಕೊರೊನಾ ಪ್ರಕರಣ

ಬೆಂಗಳೂರು, ಏಪ್ರಿಲ್ 2: ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 4991 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1006229ಕ್ಕೆ ಏರಿಕೆಯಾಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಐದು ಸಾವಿರದ ಅಂಚಿಗೆ ಬಂದಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು, 3509 ಪ್ರಕರಣಗಳು ಬೆಂಗಳೂರು ನಗರ ಪ್ರದೇಶದಲ್ಲಿ ದಾಖಲಾಗಿದೆ.

ದಕ್ಷಿಣ ಕನ್ನಡ, ಹಾಸನ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

4991 New Coronavirus Cases Found In Karnataka On April 2

ಕಳೆದ 24 ಗಂಟೆಗಳಲ್ಲಿ 1631 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಆರು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಒಟ್ಟು 34219 ಸಕ್ರಿಯ ಪ್ರಕರಣಗಳಿವೆ.

ಇದುವರೆಗೂ ಒಟ್ಟು 959400 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 12591 ಮಂದಿ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಕೊರೊನಾ ವರದಿ: ಬಾಗಲಕೋಟೆ 13, ಬಳ್ಳಾರಿ 34, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 69, ಬೆಂಗಳೂರು ನಗರ 3509, ಬೀದರ್ 126, ಚಾಮರಾಜನಗರ 13, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 47, ಚಿತ್ರದುರ್ಗ 22, ದಕ್ಷಿಣ ಕನ್ನಡ 105, ದಾವಣಗೆರೆ 21, ಧಾರವಾಡ 62, ಗದಗ 16, ಹಾಸನ 102, ಹಾವೇರಿ 8, ಕಲಬುರಗಿ 105, ಕೊಡಗು 3, ಕೋಲಾರ 74, ಕೊಪ್ಪಳ 6, ಮಂಡ್ಯ 58, ಮೈಸೂರು 174, ರಾಯಚೂರು 27, ರಾಮನಗರ 5, ಶಿವಮೊಗ್ಗ 37, ತುಮಕೂರು 142, ಉಡುಪಿ 95, ಉತ್ತರ ಕನ್ನಡ 25, ವಿಜಯಪುರ 30, ಯಾದಗಿರಿಯಲ್ಲಿ 18 ಪ್ರಕರಣಗಳು ದಾಖಲಾಗಿವೆ.

Recommended Video

      ಚೀನಾದಲ್ಲಿ ಲಸಿಕೆ ತಗೊಂಡ ವ್ಯಕ್ತಿಗೆ Corona Positive! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+