ಕರ್ನಾಟಕದಲ್ಲಿ ತಗ್ಗುತ್ತಿರುವ ಸೋಂಕಿನ ಪ್ರಮಾಣ; 142 ಮಂದಿ ಸಾವು
ಬೆಂಗಳೂರು, ಜೂನ್ 21: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 4867 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜ್ಯ ರಾಜಧಾನಿಯಲ್ಲಿ 1034 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 142 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೂ ಸೋಂಕಿನಿಂದ 34025 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ಒಂದು ದಿನದಲ್ಲಿ 8404 ಸೋಂಕಿತರು ಗುಣಮುಖರಾಗಿದ್ದಾರೆ.
ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2811320ಕ್ಕೆ ಏರಿಕೆಯಾಗಿದೆ. ಈವರೆಗೂ 2654139 ಸೋಂಕಿತರು ಗುಣಮುಖರಾಗಿದ್ದು. 123134 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೋವಿಡ್ ಪ್ರಕರಣಗಳು: ರಾಜ್ಯದಲ್ಲಿ ಒಟ್ಟು 4867 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಬಾಗಲಕೋಟೆ 23, ಬಳ್ಳಾರಿ 106, ಬೆಳಗಾವಿ 93, ಬೆಂಗಳೂರು ಗ್ರಾಮಾಂತರ 134, ಬೆಂಗಳೂರು 1034, ಬೀದರ್ 12, ಚಾಮರಾಜನಗರ 109, ಚಿಕ್ಕಬಳ್ಳಾಪುರ 152, ಚಿಕ್ಕಮಗಳೂರು 152, ಚಿತ್ರದುರ್ಗ 138, ದಕ್ಷಿಣ ಕನ್ನಡ 542, ದಾವಣಗೆರೆ 176, ಧಾರವಾಡ 55, ಗದಗ 17, ಹಾಸನ 364, ಹಾವೇರಿ 18, ಕಲಬುರಗಿ 26, ಕೊಡಗು 206, ಕೋಲಾರ 90, ಕೊಪ್ಪಳ 26, ಮಂಡ್ಯ 154, ಮೈಸೂರು 546, ರಾಯಚೂರು 20, ರಾಮನಗರ 21, ಶಿವಮೊಗ್ಗ 217, ತುಮಕೂರು 182, ಉಡುಪಿ 117, ಉತ್ತರ ಕನ್ನಡ 119, ವಿಜಯಪುರ 34, ಯಾದಗಿರಿ 8 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.











Click it and Unblock the Notifications