ಅ.24ರ ಕರ್ನಾಟಕ ಕೊರೊನಾ ವರದಿ; ಗುಣಮುಖರ ಸಂಖ್ಯೆಯಲ್ಲಿ ಏರಿಕೆ

ಬೆಂಗಳೂರು, ಅಕ್ಟೋಬರ್ 24: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಇಂದು 4471 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 798378ಕ್ಕೆ ಏರಿಕೆಯಾಗಿದೆ. ಅ.23ರಂದು 5352 ಕೊರೊನಾ ಪ್ರಕರಣಗಳು ದಾಖಲಾಗಿದ್ದವು.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ 52 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 10873ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.ಅದರಂತೆ ವರದಿ ಹೀಗಿದೆ...

ಒಟ್ಟು 798378 ಕೊರೊನಾ ವೈರಸ್ ಪ್ರಕರಣಗಳ ಪೈಕಿ 700737 ಸೋಂಕಿತರು ಗುಣಮುಖರಾಗಿದ್ದು, 86749 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 7153 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

4471 New Coronavirus Cases Reported In Karnataka On Oct 24 Total Rise To 798378

ಕೊರೊನಾ ವೈರಸ್ ಪರೀಕ್ಷೆಯ ವಿವರ: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 21981 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 90564 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 112545 ಜನರನ್ನು ಕೊವಿಡ್-19 ಪರೀಕ್ಷೆಗೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 72,81,090 ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣದ ವಿವರ: ರಾಜ್ಯದಲ್ಲಿ ಒಟ್ಟು 4471 ಮಂದಿಯಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಬಾಗಲಕೋಟೆ 57, ಬಳ್ಳಾರಿ 129, ಬೆಳಗಾವಿ 73, ಬೆಂಗಳೂರು ಗ್ರಾಮಾಂತರ 102, ಬೆಂಗಳೂರು 2251, ಬೀದರ್ 7, ಚಾಮರಾಜನಗರ 34, ಚಿಕ್ಕಬಳ್ಳಾಪುರ 78, ಚಿಕ್ಕಮಗಳೂರು 85, ಚಿತ್ರದುರ್ಗ 84, ದಕ್ಷಿಣ ಕನ್ನಡ 136, ದಾವಣಗೆರೆ 52, ಧಾರವಾಡ 93, ಗದಗ 14, ಹಾಸನ 136, ಹಾವೇರಿ 30, ಕಲಬುರಗಿ 71, ಕೊಡಗು 33, ಕೋಲಾರ 45, ಕೊಪ್ಪಳ 49, ಮಂಡ್ಯ 163, ಮೈಸೂರು 173, ರಾಯಚೂರು 25, ರಾಮನಗರ 22, ಶಿವಮೊಗ್ಗ 79, ತುಮಕೂರು 232, ಉಡುಪಿ 81, ಉತ್ತರ ಕನ್ನಡ 48, ವಿಜಯಪುರ 62, ಯಾದಗಿರಿ 27 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+