ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 4,436 ಹೊಸ ಪ್ರಕರಣ ದಾಖಲು
ಬೆಂಗಳೂರು, ಜೂನ್ 23: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 4,436 ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ 1008 ಪ್ರಕರಣಗಳಿದ್ದು, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಎರಡು ಪ್ರಕರಣಗಳು ಪತ್ತೆಯಾಗಿವೆ.
ಒಂದು ದಿನದ ಅವಧಿಯಲ್ಲಿ 123 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 34,287ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 6,455 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಬುಧವಾರದ ಅಂಕಿ ಸಂಖ್ಯೆ ಪ್ರಕಾರ, ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 28,19,465 ಆಗಿದೆ. ಇಲ್ಲಿಯವರೆಗೆ 26,68,705 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯಕ್ಕೆ 116450 ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ: ರಾಜ್ಯದಲ್ಲಿ ಒಟ್ಟು 4,436 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ ಬಾಗಲಕೋಟೆ 9, ಬಳ್ಳಾರಿ 42, ಬೆಳಗಾವಿ 179, ಬೆಂಗಳೂರು ಗ್ರಾಮಾಂತರ 125, ಬೆಂಗಳೂರು 1008, ಬೀದರ್ 1, ಚಾಮರಾಜನಗರ 89, ಚಿಕ್ಕಬಳ್ಳಾಪುರ 103, ಚಿಕ್ಕಮಗಳೂರು 163, ಚಿತ್ರದುರ್ಗ 57, ದಕ್ಷಿಣ ಕನ್ನಡ 538, ದಾವಣಗೆರೆ 119, ಧಾರವಾಡ 90, ಗದಗ 15, ಹಾಸನ 301, ಹಾವೇರಿ 24, ಕಲಬುರಗಿ 41, ಕೊಡಗು 152, ಕೋಲಾರ 92, ಕೊಪ್ಪಳ 32, ಮಂಡ್ಯ 110, ಮೈಸೂರು 499, ರಾಯಚೂರು 21, ರಾಮನಗರ 26, ಶಿವಮೊಗ್ಗ 219, ತುಮಕೂರು 126, ಉಡುಪಿ 135, ಉತ್ತರ ಕನ್ನಡ 104, ವಿಜಯಪುರ 7, ಯಾದಗಿರಿ 9 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.











Click it and Unblock the Notifications