ಶಾಕಿಂಗ್: ಕರ್ನಾಟಕದಲ್ಲಿ 10 ಲಕ್ಷದ ಗಡಿ ದಾಟಿದ ಕೊರೊನಾ ಕೇಸ್!
ಬೆಂಗಳೂರು, ಏಪ್ರಿಲ್ 1: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ 4234 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 1599 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 18 ಮಂದಿ ಪ್ರಾಣ ಬಿಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 10,01,238ಕ್ಕೆ ಏರಿಕೆಯಾಗಿದೆ. ಈವರೆಗೂ 957769 ಸೋಂಕಿತರು ಗುಣಮುಖರಾಗಿದ್ದು, ಸಾವಿನ ಸಂಖ್ಯೆ 12585ಕ್ಕೆ ಏರಿಕೆಯಾಗಿದೆ. ಉಳಿದಂತೆ 30865 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ರಾಜ್ಯದಲ್ಲಿ ಒಟ್ಟು 4234 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 19, ಬಳ್ಳಾರಿ 25, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 73, ಬೆಂಗಳೂರು 2906, ಬೀದರ್ 218, ಚಾಮರಾಜನಗರ 17, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 51, ಚಿತ್ರದುರ್ಗ 28, ದಕ್ಷಿಣ ಕನ್ನಡ 30, ದಾವಣಗೆರೆ 17, ಧಾರವಾಡ 57, ಗದಗ 15, ಹಾಸನ 67, ಹಾವೇರಿ 4, ಕಲಬುರಗಿ 144, ಕೊಡಗು 23, ಕೋಲಾರ 31, ಕೊಪ್ಪಳ 9, ಮಂಡ್ಯ 67, ಮೈಸೂರು 109, ರಾಯಚೂರು 21, ರಾಮನಗರ 3, ಶಿವಮೊಗ್ಗ 24, ತುಮಕೂರು 102, ಉಡುಪಿ 53, ಉತ್ತರ ಕನ್ನಡ 44, ವಿಜಯಪುರ 18, ಯಾದಗಿರಿ 5 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications