ಕರ್ನಾಟಕದಲ್ಲಿ ಹೊಸದಾಗಿ 4025 ಮಂದಿ ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ಇಂದು 4025 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 7661 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು 816809 ಮಂದಿ ಕೊರೊನಾ ಸೋಂಕಿತರಿದ್ದಾರೆ. ಒಂದೇ ದಿನದಲ್ಲಿ 45 ಮಂದಿ ಮೃತಪಟ್ಟಿದ್ದಾರೆ. 64480 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 11091 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 935 ಮಂದಿ ಐಸಿಯುನಲ್ಲಿದ್ದಾರೆ.
ಬಾಗಲಕೋಟೆ 19, ಬಳ್ಳಾರಿ 74, ಬೆಳಗಾವಿ 42, ಬೆಂಗಳೂರು ಗ್ರಾಮಾಂತರ 81, ಬೆಂಗಳೂರು ನಗರ 2175, ಬೀದರ್ 14, ಚಾಮರಾಜನಗರ 37, ಚಿಕ್ಕಬಳ್ಳಾಪುರ 42, ಚಿಕ್ಕಮಗಳೂರು 38, ಚಿತ್ರದುರ್ಗ 41, ದಕ್ಷಿಣ ಕನ್ನಡ 96, ದಾವಣಗೆರೆ 94, ಧಾರವಾಡ 76, ಗದಗ 12, ಹಾಸನ 114, ಹಾವೇರಿ 54, ಕಲಬುರಗಿ 35, ಕೊಡಗು 13, ಕೋಲಾರ 28, ಕೊಪ್ಪಳ 25, ಮಂಡ್ಯ 115, ಮೈಸೂರು 204, ರಾಯಚೂರು 20, ರಾಮನಗರ 48, ಶಿವಮೊಗ್ಗ 127, ತುಮಕೂರು 136, ಉಡುಪಿ 66, ಉತ್ತರಕನ್ನಡ 99, ವಿಜಯಪುರ 71, ಯಾದಗಿರಿಯಲ್ಲಿ 29 ಮಂದಿ ಕೊರೊನಾ ಸೋಂಕಿತರಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಕೊಂಚ ತಗ್ಗಿದಂತೆ ತೋರುತ್ತಿದೆ. ಕಳೆದ 24 ಗಂಟೆಗಳಲ್ಲಿ 49881 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಕಳೆದೊಂದು ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ. ಒಂದು ದಿನದಲ್ಲಿ 56,480 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 517 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.












Click it and Unblock the Notifications