ಕರ್ನಾಟಕ; 39,998 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಮೇ 12; ಕರ್ನಾಟಕದಲ್ಲಿ 24 ಗಂಟೆಯಲ್ಲಿ 39,998 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 517 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಹೇಳಿದೆ.

ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ 34,752 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳು 20,53,191ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣ 5,92,182.

ರಾಜ್ಯದಲ್ಲಿ ಇದುವರೆಗೂ 14,40,621 ಜನರು ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 20,368 ಜನರು ಮೃತಪಟ್ಟಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ 29.67 ಮತ್ತು ಮರಣ ಪ್ರಮಾಣ ಶೇ 1.29.

 39,998 New COVID Cases Reported In Karnataka In 24 Hours

24 ಗಂಟೆಯಲ್ಲಿ 10,560 ಆಂಟಿಜೆನ್, 1,24,232 ಮಾದರಿಗಳ ಆರ್‌ಟಿಪಿಸಿಆರ್ ಸೇರಿಸಿ ಒಟ್ಟು 1,34,792 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ 27393360 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ 16,286 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 9,99,805ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,60,619.

ಬಳ್ಳಾರಿ 1823. ಬೆಂಗಳೂರು ಗ್ರಾಮಾಂತರ 1,138. ದಕ್ಷಿಣ ಕನ್ನಡ 1077. ಹಾಸನ1572. ಮಂಡ್ಯ 1223. ಮೈಸೂರು 1773. ತುಮಕೂರು 2360. ಶಿವಮೊಗ್ಗ 1125 ಹೊಸ ಪ್ರಕರಣಗಳು ದಾಖಲಾಗಿವೆ.

ಉತ್ತರ ಕನ್ನಡ 960. ಉಡುಪಿ 919. ಕೋಲಾರ 815. ಧಾರವಾಡ 904. ಬೆಳಗಾವಿ 856. ಬಾಗಲಕೋಟೆ 610. ಚಿಕ್ಕಮಗಳೂರು 646. ಚಿಕ್ಕಬಳ್ಳಾಪುರ 554 ಹೊಸ ಪ್ರಕರಣಗಳು ವರದಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+