ಕರ್ನಾಟಕದಲ್ಲಿ ಹೊಸದಾಗಿ 3,693 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಜುಲೈ 17: ಕರ್ನಾಟಕದಲ್ಲಿ ಹೊಸದಾಗಿ 3,693 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 115 ಮಂದಿ ಮೃತಪಟ್ಟಿದ್ದಾರೆ.
Recommended Video
ಇಂದು 1028 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 20757 ಮಂದಿ ಗುಣಮುಖರಾಗಿದ್ದಾರೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2,208 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 3,693 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55,115ಕ್ಕೇರಿಕೆಯಾಗಿದೆ.
33,205 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 1147 ಮಂದಿ ಸಾವನ್ನಪ್ಪಿದ್ದಾರೆ. ಇಂದು 24,700 ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. 9,50,177 ಮಂದಿ ಪರೀಕ್ಷೆ ಇದುವರೆಗೆ ನಡೆದಿದೆ.

ಬೆಂಗಳೂರಿನಲ್ಲಿ ಇಂದು 2208, ಧಾರವಾಡ 157, ಬಳ್ಳಾರಿ 133, ವಿಜಯಪುರ 118, ಬೆಳಗಾವಿ 95, ಮೈಸೂರು 93, ಕಲಬುರಗಿ 89, ಉಡುಪಿ 80, ಉತ್ತರ ಕನ್ನಡ 75, ಬೀದರ್ 69, ಗದಗ 59, ಹಾವೇರಿ 58, ಕೋಲಾರ 51, ದಕ್ಷಿಣ ಕನ್ನಡ 39, ತುಮಕೂರು 36, ರಾಯಚೂರು 33, ಬೆಂಗಳೂರು ಗ್ರಾಮಾಂತರ 33, ದಾವಣಗೆರೆ 31, ಚಿಕ್ಕಬಳ್ಳಾಪುರ 31, ಕೊಪ್ಪಳ 30, ಬಾಗಲಕೋಟೆ 29, ಚಿಕ್ಕಮಗಳೂರು 28, ಚಿತ್ರದುರ್ಗ 24, ಮಂಡ್ಯ 22, ಹಾಸನ 21, ರಾಮನಗರ 14, ಕೊಡಗು 13, ಶಿವಮೊಗ್ಗ 10, ಚಾಮರಾಜನಗರ 10, ಯಾದಗಿರಿಯಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications