ಕರ್ನಾಟಕದಲ್ಲಿ 70 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ. 3649 ಹೊಸ ಪ್ರಕರಣಗಳು ಪತ್ತೆಯಾಗಿವೆ. 61 ಮಂದಿ ಸಾವನ್ನಪ್ಪಿದ್ದಾರೆ. ಇಂದು 1664 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Recommended Video
ಇದುವರೆಗೆ 71,069 ಕೊರೊನಾ ಸೋಂಕಿತ ಪ್ರಕರಣಗಳಿವೆ. ಅದರಲ್ಲಿ 44140 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 25,459 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 1464 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 583 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 1714, ಬಳ್ಳಾರಿ 193, ದಕ್ಷಿಣ ಕನ್ನಡ 149. ಮೈಸೂರು 135, ಯಾದಗಿರಿ 117, ಉತ್ತರ ಕನ್ನಡ 109, ಹಾಸನ 107, ಕೋಲಾರ 103, ಕಲಬುರಗಿ 99, ದಾವಣಗೆರೆ 95, ಬೆಂಗಳೂರು ಗ್ರಾಮಾಂತರ 95, ಉಡುಪಿ 84, ಧಾರವಾಡ 84, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 68, ಬೀದರ್ 66, ಬಾಗಲಕೋಟೆ 65, ತುಮಕೂರು 47, ಕೊಪ್ಪಳ 45, ಹಾವೇರಿ 39, ಚಾಮರಾಜನಗರ 34, ಬೆಳಗಾವಿ 23, ಚಿತ್ರದುರ್ಗ 23, ಶಿವಮೊಗ್ಗ 20, ಗದಗ 15, ವಿಜಯಪುರ 13, ಮಂಡ್ಯ 13, ರಾಮನಗರ 8, ರಾಯಚೂರು 4, ಕೊಡಗು 1.












Click it and Unblock the Notifications