ಕರ್ನಾಟಕ; 3146 ಹೊಸ ಕೋವಿಡ್ ಪ್ರಕರಣಗಳು ದಾಖಲು
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದಲ್ಲಿ 3,146 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,12,784ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇಂದು ರಾಜ್ಯದ್ಲಲಿ ಗುಣಮುಖರಾದವರ ಸಂಖ್ಯೆ 7,384. ಇದುವರೆಗೂ 7,33,558 ಜನರು ಗುಣಮುಖರಾಗಿದ್ದಾರೆ.
ಬುಧವಾರ ರಾಜ್ಯದಲ್ಲಿ ಮೃತಪಟ್ಟವರು 55. ಇದುವರೆಗೂ ಮೃತಪಟ್ಟವರ ಸಂಖ್ಯೆ 11046. ಇನ್ನೂ ಐಸಿಯುನಲ್ಲಿ 939 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 68,161.

ಅಕ್ಟೋಬರ್ 28ರಂದು 24,256 ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. 61,898 ಆರ್‌ಟಿಪಿಸಿಆರ್ ಪರೀಕ್ಷೆಯನ್ನು ನಡೆಸಲಾಗಿದೆ. ಒಟ್ಟು 86,154 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ ರಾಜ್ಯದಲ್ಲಿ 7600348 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು? : ಬುಧವಾರ ಬೆಂಗಳೂರು ನಗರದಲ್ಲಿ 1,612 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 330862. ಸಕ್ರಿಯ ಪ್ರಕರಣಗಳು 43760.
ಬುಧವಾರ ಚಿತ್ರದುರ್ಗದಲ್ಲಿ 70, ದಕ್ಷಿಣ ಕನ್ನಡದಲ್ಲಿ 99, ದಾವಣಗೆರೆಯಲ್ಲಿ 60, ಹಾಸನದಲ್ಲಿ 127, ಮೈಸೂರಿನಲ್ಲಿ 169, ತುಮಕೂರಿನಲ್ಲಿ 129 ಹೊಸ ಪ್ರಕರಣಗಳು ದಾಖಲಾಗಿವೆ.












Click it and Unblock the Notifications