• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿಂದೂ 'ಮಹಾ' ಕಂಟಕ, ಒಂದೇ ದಿನ 308 ಕೇಸ್

|

ಬೆಂಗಳೂರು, ಜೂನ್ 8: ಕರ್ನಾಟಕದಲ್ಲಿಂದು 308 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಮೂರು ಜನ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. 308 ಕೇಸ್‌ಗಳ ಪೈಕಿ ಕಲಬುರಗಿಯಲ್ಲಿ 99 ಜನರಿಗೆ ಸೋಂಕು ದೃಢವಾಗಿದೆ. ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 759ಕ್ಕೆ ಜಿಗಿದಿದೆ.

ಬಾಗಿಲು ತೆರೆಯದ ರಾಯರ ಮಂತ್ರಾಲಯ: ಭಕ್ತರು ವಾಪಸ್

ಇಂದು ವರದಿಯಾಗಿರುವ ಕೊರೊನಾ ವೈರಸ್ ಪ್ರಕರಣಗಳ ಪೈಕಿ ಬಹುತೇಕ ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. 387 ಮಂದಿ ಇಂದು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲೆವಾರು ಇಂದಿನ ಪ್ರಕರಣಗಳು

ಕಲಬುರಗಿ 99

ಯಾದಗಿರಿ 66

ಬೀದರ್ 48

ಉಡುಪಿ 45

ಬೆಂಗಳೂರು ನಗರ 18

ಬಳ್ಳಾರಿಯಲ್ಲಿ 8, ಗದಗದಲ್ಲಿ 6, ಶಿವಮೊಗ್ಗ ಮತ್ತು ಧಾರವಾಡದಲ್ಲಿ ತಲಾ 4, ಹಾಸನ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 3, ಬಾಗಲಕೋಟೆಯಲ್ಲಿ 2, ಕೊಪ್ಪಳ ಹಾಗೂ ರಾಮನಗರದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ.

ಒಟ್ಟು ರಾಜ್ಯದಲ್ಲಿ 2519 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಂತೆ ರಾಜ್ಯದಲ್ಲಿ 3175 ಕೇಸ್‌ಗಳು ಸಕ್ರಿಯವಾಗಿದೆ. ಒಟ್ಟು 64 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

English summary
308 New Coronavirus Cases Reported in Karnataka Today, State Tally Rise to 5760. three death reported in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X