ಕೋಲಾರ : ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಕೋಲಾರ, ಜು. 9 : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಮೂರು ವರ್ಷದ ಮಗುವಿನ ಮೇಲೆ ಬಾಲಕನೊಬ್ಬ ಅತ್ಯಾಚಾರ ಮಾಡಿ ಪರಾರಿಯಾಗಿರುವ ಘಟನೆ ನಡೆಸಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮಂಗಳವಾರ ರಾತ್ರಿ ಶ್ರೀನಿವಾಸಪುರ ತಾಲೂಕಿನ ಎಚ್. ಗೊಲ್ಲಹಳ್ಳಿಯಲ್ಲಿ ಮಗುವಿನ ಮೇಲೆ 17 ವರ್ಷದ ಬಾಲಕ ಅತ್ಯಾಚಾರ ಮಾಡಿದ್ದಾನೆ. ಮಗುವಿನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಕೃತ್ಯ ನಡೆಸಿದ್ದಾನೆ ಎಂದು ಮಗುವಿನ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಅತ್ಯಾಚಾರ ನಡೆದ ಬಳಿಕ ಅಸ್ವಸ್ಥವಾಗಿರುವ ಮಗುವನ್ನು ಕೋಲಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ನಡೆಸಿದ ಆರೋಪಿ ಸುಧಾಕರ್ ಎಂಬ ಬಾಲಕನಿಗಾಗಿ ರಾಯಲ್ಪಾಡು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. [ಅತ್ಯಾಚಾರ, ಪಿಜಿ ನಿಯಂತ್ರಣಕ್ಕೆ ತಜ್ಞ ಸಮಿತಿ ರಚನೆ]
ಹಾಸನ : ಹಾಸನದ ಅರಕಲಗೋಡಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಅರಕಲಗೂಡಿನ ನಿವಾಸಿ ಅಂಜನ ಕೊಣನೂರು ಎಂಬ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ. ಪೋಷಕರ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.












Click it and Unblock the Notifications