ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, 2ನೇ ಬಾರಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ
ಬೆಂಗಳೂರು, ಜುಲೈ 28: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಈ ಬಾರಿ ಹೊಸ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೊಸ ಹೆಜ್ಜೆ ಇಟ್ಟಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಈ ನಿರ್ಧಾರವು ಅನುತೀರ್ಣರಾದ ವಿದ್ಯಾರ್ಥಿಗಳ ಹೊಸ ಭರವಸೆಗೆ ಕಾರಣವಾಗಿದೆ.
2022-23ರ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಗೆ ಎರಡನೇ ಬಾರಿಗೆ ಪೂರಕ ಪರೀಕ್ಷೆಯನ್ನು ನಡೆಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಕಟಿಸಿದೆ. ವಾರ್ಷಿಕ ಮುಖ್ಯ ಪರೀಕ್ಷೆ ಹಾಗೂ ಮೊದಲ ಪೂರಕ ಪರೀಕ್ಷೆ ಎರಡರಲ್ಲಿಯೂ ಉತ್ತೀರರ್ಣರಾಗದ ವಿದ್ಯಾರ್ಥಿಗಳಿಗಾಗಿ ಮಂಡಳಿ ಈ ಅವಕಾಶ ನೀಡಿದೆ.

ಇನ್ನು 2022-23ರ ಶೈಕ್ಷಣಿಕ ವರ್ಷ ಹೊರತು ಪಡಿಸಿ ಅದರ ಹಿಂದಿನ ವರ್ಷಗಳಲ್ಲಿ ಕೂಡ ಅನುತೀರ್ಣರಾದವರು ಈ ಪೂರಕ ಪರೀಕ್ಷೆ ಬರೆಯಲು ನೊಂದಾಯಿಸಿಕೊಳ್ಳಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಮೇ 23 ರಿಂದ ಜೂನ್ 2 ರವರೆಗೆ ನಡೆದ ಮೊದಲ ಪೂರಕ ಪರೀಕ್ಷೆಗಳಲ್ಲಿ ಒಟ್ಟು 1,57,756 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 50,478 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು. ಜೊತೆಗೆ ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಆದರೆ ಮೊದಲ ಪೂರಕ ಪರೀಕ್ಷೆಯಲ್ಲೂ ಅನುತೀರ್ಣರಾದವರಿಗೆ ಎರಡನೇ ಅವಕಾಶ ನೀಡಲಾಗಿದ್ದು, ಆಗಸ್ಟ್ 21 ರಿಂದ ಸಪ್ಟೆಂಬರ್ 02 ರವೆಗೆ ಎರಡನೇ ಪೂರಕ ಪರೀಕ್ಷೆ ನಡೆಯಲಿದೆ.
ಇನ್ನು ಇದೇ ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ವಿದ್ಯಾರ್ಥಿಗಳಿಗೆ ಎರಡನೇ ಬಾರಿ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದ್ದು, ಉಪನ್ಯಾಸಕರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಆದರೆ ಎರಡನೇ ಬಾರಿ ಪೂರಕ ಪರೀಕ್ಷೆ ಬೇಕು ಬೇಡ ಎನ್ನುವ ಚರ್ಚೆಯ ನಡುವೆಯೇ ಮಂಡಳಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡಗೆ ಮಾಡಿದೆ.
ದ್ವಿತೀಯ ಪಿಯುಸಿಗೆ ಎರಡನೇ ಬಾರಿಗೆ ಪೂರಕ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.
ದಿನಾಂಕ 21-08-2023ರಂದು ಕನ್ನಡ, ಆರೇಬಿಕ್
ದಿನಾಂಕ 22-08-2023ರಂದು ಐಚ್ಛಿಕ ಕನ್ನಡ, ಕೆಮಿಸ್ಟ್ರಿ, ಬೇಸಿಕ್ ಮ್ಯಾಥ್ಸ್
ದಿನಾಂಕ 23-08-2023ರಂದು ಸಮಾಜ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ದಿನಾಂಕ 24-08-2023ರಂದು ಲಾಜಿಕ್, ಹಿಂದೂಸ್ಥಾನಿ ಮ್ಯೂಸಿಕ್, ಬ್ಯುಸಿನೆಸ್ ಸ್ಟಡೀಸ್
ದಿನಾಂಕ 25-08-2023ರಂದು ಇತಿಹಾಸ, ಸ್ಯಾಟಿಸ್ಟಿಕ್ಸ್,
ದಿನಾಂಕ 26-08-2023ರಂದು ಇನ್ನರ್ಮೇಷನ್ ಟೆಕ್ನಾಲಜಿ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್
ದಿನಾಂಕ 28-08-2023ರಂದು ಜಿಯೋಗ್ರಾಫಿ, ಸೈಕಾಲಜಿ, ಫಿಜಿಕ್ಸ್,
ದಿನಾಂಕ 29-08-2023ರಂದು ಅಕೌಂಟ್ಸ್, ಜಿಯಾಲಜಿ, ಎಜುಕೇಷನ್, ಹೋಂ ಸೈನ್ಸ್
ದಿನಾಂಕ 30-08-2023ರಂದು ಪೊಲಿಟಿಕಲ್ ಸೈನ್ಸ್, ಮ್ಯಾಥಮೆಟಿಕ್ಸ್
ದಿನಾಂಕ 31-08-2023ರಂದು ಹಿಂದಿ
ದಿನಾಂಕ 01-09-2023ರಂದು ಎಕನಾಮಿಕ್ಸ್, ಬಯಾಲಜಿ.
ದಿನಾಂಕ 02-09-2023ರಂದು ತಮಿಳ್, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಪರೀಕ್ಷೆ ನಡೆಯಲಿದೆ.












Click it and Unblock the Notifications