2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಕೌಂಟ್‌ಡೌನ್ ಶುರು...

ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಕಾಯುತ್ತಿದ್ದರು ವಿದ್ಯಾರ್ಥಿಗಳು. ಮುಂದೆ ಯಾವ ಯಾವ ಕೋರ್ಸ್‌ಗೆ ಸೇರಬೇಕು? ಅಂತಾ ಕಾಯುತ್ತಿದ್ದ ಸ್ಟೂಡೆಂಟ್ಸ್‌ಗೆ ಭರ್ಜರಿ ಸುದ್ದಿ ಸಿಕ್ಕಿದೆ. ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದ ಲಕ್ಷ ಲಕ್ಷ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಓದಲು ಹೋಗುವುದಕ್ಕೆ ಕಾದು ಕುಳಿತಿದ್ದರು. ಹೀಗಿದ್ದಾಗಲೇ, ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಕೌಂಟ್‌ಡೌನ್ ಶುರು...

ದ್ವಿತೀಯ ಪಿಯುಸಿ ಎಂಬುದು ಪ್ರತಿಯೊಬ್ಬರ ವಿಚಾರದಲ್ಲಿ ಕೂಡ ಮಹತ್ವದ ಹಂತವಾಗಿದ್ದು, ಈ ಹಂತ ಮುಗಿದ ನಂತರ ಜೀವನದಲ್ಲಿ ಏನಾಗಬೇಕು? ಎಂಬ ಬಗ್ಗೆ ಮನುಷ್ಯ ಯೋಚನೆ ಮಾಡುತ್ತಾನೆ. ಅದರಲ್ಲೂ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ದ್ವಿತೀಯ ಪಿಯುಸಿ ಎಂಬುದು ಅತ್ಯಂತ ಪ್ರಮುಖ ಘಟ್ಟವಾಗಿದೆ. ಹೀಗಾಗಿಯೇ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಫಲಿತಾಂಶ ಪಡೆಯಲು ಕಾಯುತ್ತಾ ಕುಳಿತಿದ್ದಾರೆ. ಹೀಗಿದ್ದಾಗಲೇ, ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಕೌಂಟ್‌ಡೌನ್ ಶುರುವಾಗಿದೆ!

2nd PUC Result 2025 Second PUC Result Will Be Announced On This Date And Time

ದ್ವಿತೀಯ ಪಿಯುಸಿ ರಿಸಲ್ಟ್ ಈ ದಿನ!

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 01 ರಿಂದ ಮಾರ್ಚ್ 20 ರವರೆಗೂ ನಡೆದಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನವು ತಕ್ಷಣವೇ ಶುರುವಾಗಿತ್ತು & ಕರ್ನಾಟಕದಲ್ಲಿ 1,171 ಕೇಂದ್ರಗಳಲ್ಲಿ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯ ಬರೆದಿದ್ದರು. ಮಾರ್ಚ್ ತಿಂಗಳಲ್ಲೇ ಮೌಲ್ಯಮಾಪನ ಪ್ರಕ್ರಿಯೆ ಕೂಡ ಆರಂಭ ಆಗಿತ್ತು. ಇದೀಗ ಫಲಿತಾಂಶ ಹೊರಗೆ ಬೀಳಲಿದ್ದು, ಇದಕ್ಕಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ಧತೆ ನಡೆಸಿದೆ. ಹಾಗಾದರೆ 2nd PUC ರಿಸಲ್ಟ್ ನೋಡೋದು ಹೇಗೆ? & ಯಾವಾಗ?

ಪಿಯುಸಿ ರಿಸಲ್ಟ್ ನೋಡಲು ಕಾತುರ!

ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರನ್ನು ಪಡೆದು ಗಮನ ಸೆಳೆಯುತ್ತಿದೆ. ಹೀಗಾಗಿ ಕರ್ನಾಟಕ ಪಿಯುಸಿ ಫಲಿತಾಂಶ ಇಡೀ ದೇಶದ ಗಮನ ಸೆಳೆಯುತ್ತಿದ್ದು, 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್ ಅಂದ್ರೆ 2nd PUC ರಿಸಲ್ಟ್ ಏಪ್ರಿಲ್ 11ರ ಒಳಗಾಗಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ಯಾಕಂದ್ರೆ ಕಳೆದ ವರ್ಷ ಕೂಡ 2nd PUC ರಿಸಲ್ಟ್ ಏಪ್ರಿಲ್ 10 ರಂದು ಪ್ರಕಟ ಮಾಡಲಾಗಿತ್ತು.

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಅದೇ ದಿನ ಅಥವ ಒಂದು ದಿನದ ನಂತರ ಪ್ರಕಟ ಆಗುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಫಲಿತಾಂಶ ಪ್ರಕಟಿಸಲು ಬೇಕಾದ ಎಲ್ಲಾ ರೀತಿಯ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ. ಹಾಗೇ ವಿದ್ಯಾರ್ಥಿಗಳು ಇನ್ನು ಒಂದು ವಾರದಲ್ಲಿ ಫಲಿತಾಂಶ ಪಡೆಯಬಹುದು.

ಕರ್ನಾಟಕದ ಫಲಿತಾಂಶ ಯಾವಾಗ?

ಇಡೀ ದೇಶದಲ್ಲೇ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಭಾರಿ ಗಮನ ಸೆಳೆಯುತ್ತಾ ಬಂದಿದೆ. ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಪಿಯುಸಿ ಫಲಿತಾಂಶ ಇಡೀ ಇಂಡಿಯಾ ಗಮನ ಸೆಳೆದಿದೆ. ಯಾಕೆ ಅಂದ್ರೆ, ನಮ್ಮ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2024 & 2025ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟ ಆಗಲಿದೆ. ಹೀಗೆ, ಕೆಲವು ದಿನಗಳ ಹಿಂದಷ್ಟೇ ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಫಲಿತಾಂಶ ಸಿಗುವ ನಿರೀಕ್ಷೆ ಇದ್ದು, ಮೌಲ್ಯಮಾಪನ ಪ್ರಕ್ರಿಯೆ ವೇಗವಾಗಿ ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+