ಚುನಾವಣಾ ಅಕ್ರಮದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ, ಮೇ 13 : ದೇಶಾದ್ಯಂತ ನಡೆದ ಒಂಭತ್ತು ಹಂತಗಳ ಲೋಕಸಭೆ ಚುನಾವಣೆ ಸೋಮವಾರ ಅಂತ್ಯಗೊಂಡಿದೆ. ಶುಕ್ರವಾರ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ಅಕ್ರಮ ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದುಕೊಂಡಿದೆ. ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ 28 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣೆ ಮುಗಿಯುತ್ತಿದ್ದಂತೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಅಕ್ರಮಗಳ ಕುರಿತ ಅಂಕಿ-ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಅದರಂತೆ, ಅತಿ ಹೆಚ್ಚು ಹಣ ಹೆಂಡ ಹಂಚಿದ ರಾಜ್ಯಗಳ ಪೈಕಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನವನ್ನು ಪಡೆದಿದೆ. [ಕರ್ನಾಟಕದಲ್ಲಿ ಎಷ್ಟು ಮತದಾನವಾಗಿದೆ?]

cash

ಆಂಧ್ರಪ್ರದೇಶದಲ್ಲಿ 153 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಅದು ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 28 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಎರಡನೇ ಸ್ಥಾನವನ್ನು ಪಡೆದಿದೆ. ಮಹಾರಾಷ್ಟ್ರದಲ್ಲಿ25.67ಕೋಟಿ ನಗರದನ್ನು ವಶಪಡಿಸಿಕೊಳ್ಳಲಾಗಿದೆ. [ಮೇ 16ರಂದು ಬೆಳಗ್ಗೆ 8ರಿಂದ ಮತಎಣಿಕೆ ಆರಂಭ]

ಒಟ್ಟು ಈ ಬಾರಿಯ ಚುನಾವಣೆಯಲ್ಲಿ ಒಟ್ಟು ದೇಶಾದ್ಯಂತ 331 ಕೋಟಿ ನಗರದು, 2.25 ಲಕ್ಷ ಲೀಟರ್ ಮದ್ಯ ಮತ್ತು 1.85 ಲಕ್ಷ ಕೆಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. [ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸೀಟು?]

ಮಾದಕ ದ್ರವ್ಯ ವಶಪಡಿಸಿಕೊಂಡ ರಾಜ್ಯದಲ್ಲಿ ಪಂಜಾಬ್ ಮೊದಲ ಸ್ಥಾನದಲ್ಲಿದ್ದು 1,39 ಲಕ್ಷ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದಲ್ಲಿ 24 ಸಾವಿರ ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು ಅದು ಎರಡನೇ ಸ್ಥಾನದಲ್ಲಿದೆ.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಒಟ್ಟು 13,642 ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೇಶದಲ್ಲಿ ಚುನಾವಣಾ ಅಕ್ರಮವನ್ನು ಪತ್ತೆ ಹಚ್ಚಲು 20,349 ವಿಶೇಷ ದಳವನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ, ಅತೀಸೂಕ್ಷ್ಮ ಮತಗಟ್ಟೆಗಳಿಗೆ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+