ಕರ್ನಾಟಕದಲ್ಲಿ 28,723 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಜನವರಿ 14; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. 24 ಗಂಟೆಯಲ್ಲಿ 28,723 ಹೊಸ ಪ್ರಕರಣ ದಾಖಲಾಗಿದ್ದು, ಕೋವಿಡ್ ಮಾದರಿಗಳ ಪರೀಕ್ಷೆಯಲ್ಲಿ ರಾಜ್ಯ ಹೊಸ ದಾಖಲೆ ಮಾಡಿದೆ.

ಶುಕ್ರವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಒಟ್ಟು 2,21,205 ಲಕ್ಷ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್ ಪರಿಸ್ಥಿತಿ ಆರಂಭವಾದ ಬಳಿಕ ಮೊದಲ ಬಾರಿಗೆ ಇಷ್ಟು ಸಂಖ್ಯೆಯ ಪರೀಕ್ಷೆ ಮಾಡಲಾಗಿದೆ.

ರಾಜ್ಯದಲ್ಲಿ 28,723 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 20,121 ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ 12.98ಕ್ಕೆ ಏರಿಕೆಯಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳು 1,41,337 ಆಗಿದೆ.

28,723 New Covid Cases Reported In Karnataka

24 ಗಂಟೆಯಲ್ಲಿ ರಾಜ್ಯದಲ್ಲಿ 3105 ಜನರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 14 ಜನರು ಮೃತಪಟ್ಟಿದ್ದು, ಬೆಂಗಳೂರು ನಗರದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.

ಕರ್ನಾಟಕದ ಕೋವಿಡ್ ವರದಿ; 24 ಗಂಟೆಯಲ್ಲಿ 3105 ಜನರು ಡಿಸ್ಚಾರ್ಜ್‌. ಒಟ್ಟು ಗುಣಮುಖಗೊಂಡವರು 2973470. ದಾಖಲಾದ ಹೊಸ ಪ್ರಕರಣಗಳು 28723. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 141337. ಒಟ್ಟು ಮೃತಪಟ್ಟವರು 14. ಒಟ್ಟು ಮೃತಪಟ್ಟವರು 38411. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3153247. ಪಾಸಿಟಿವಿಟಿ ದರ ಶೇ 12.98. ಮರಣ ಪ್ರಮಾಣ ಶೇ 0.04.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು?; ಬೆಂಗಳೂರು ನಗರದಲ್ಲಿ 20121 ಹೊಸ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಸಕ್ರಿಯ ಪ್ರಕರಣಗಳು 109312. ಒಟ್ಟು ಪ್ರಕರಣಗಳು 1373452. ಒಟ್ಟು ಮೃತಪಟ್ಟವರು 16443.

ಬಾಗಲಕೋಟೆ 49, ಬಳ್ಳಾರಿ 400, ಬೆಳಗಾವಿ 227, ಬೆಂಗಳೂರು ಗ್ರಾಮಾಂತರ 418, ಬೀದರ್ 131, ಚಾಮರಾಜನಗರ 106, ಚಿಕ್ಕಬಳ್ಳಾಪುರ 246, ಚಿಕ್ಕಮಗಳೂರು 174, ಚಿತ್ರದುರ್ಗ 104 ಹೊಸ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ 639, ದಾವಣಗೆರೆ 187, ಧಾರವಾಡ 338, ಗದಗ 110, ಹಾಸನ 654, ಹಾವೇರಿ 25, ಕಲಬುರಗಿ 338, ಕೊಡಗು 104, ಕೋಲಾರ 502, ಕೊಪ್ಪಳ 49 ಪ್ರಕರಣ ದಾಖಲಾಗಿದೆ.

ಮಂಡ್ಯ 554, ಮೈಸೂರು 803, ರಾಯಚೂರು 239, ಶಿವಮೊಗ್ಗ 315, ತುಮಕೂರು 796, ಉಡುಪಿ 497, ಉತ್ತರ ಕನ್ನಡ 301, ವಿಜಯಪುರ 106, ಯಾದಗರಿ 18.

Recommended Video

      Rahane ಮತ್ತು Pujara ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಫುಲ್ ಗರಂ ಆಗಿ Virat Kohli ಹೇಳಿದ್ದೇನು? |Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+