H3N2 : ಸೋಂಕು ಪತ್ತೆ, ಕರ್ನಾಟಕದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ: ಡಾ.ಕೆ.ಸುಧಾಕರ್
ಕೊರೊನಾ ಹಾವಳಿ ಕಡಿಮೆಯಾಗಿದೆ ಎನ್ನುವಷ್ಟರಲ್ಲಿ ರಾಜ್ಯದಲ್ಲಿ 26 ಎಚ್3ಎನ್2 ವೈರಸ್ ಪ್ರಕರಣ ಪತ್ತೆ. ಹೀಗಾಗಿ ಇಂದಿನಿಂದಲೇ ಮಾಸ್ಕ್ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್.
ಬೆಂಗಳೂರು, ಮಾರ್ಚ್ 06: ವಿಶ್ವದಾದ್ಯಂತ ಕಾಡಿದ್ದ ಕೊರೊನಾ ಹಾವಳಿ ಕಡಿಮೆಯಾಗಿದೆ ಎಂದು ಚೇತರಿಸಿಕೊಳ್ಳುವಷ್ಟರಲ್ಲಿ ಎಚ್3ಎನ್2 ವೈರಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆರೋಗ್ಯ ಸಿಬ್ಬಂದಿಗೆ ಇಂದಿನಿಂದಲೇ (ಮಾ.6) ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕದಲ್ಲಿ ಈವರೆಗೆ 26 ಮಂದಿಯಲ್ಲಿ ಎಚ್3ಎನ್2 ವೈರಸ್ ಪತ್ತೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಹಾವಳಿ ಹೆಚ್ಚಾಗಿದೆ. ಇದಕ್ಕೆ ಎಚ್3ಎನ್2 ವೈರಸ್ ಕಾರಣವಾಗಿದ್ದು, ಕಳೆದ ಎರಡು ತಿಂಗಳಿನಿಂದ ಈ ಕುರಿತು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಎಲ್ಲೆಡೆ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

ಈ ಸಂಬಂಧ ಸೋಮವಾರ ವಿಧಾನಸೌಧದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ತಜ್ಞರು, ತಾಂತ್ರಿಕಾ ಸಲಹಾ ಸಭೆ ನಡೆಯಿರು. ಈ ವೇಳೆ ಮಾತನಾಡಿದ ಸಚಿವರು ಹೊಸ ವೈರಸ್ ಬಗ್ಗೆ ಅಧಿಕೃತ ಮಾಹಿತಿ ತಿಳಿಸಿದರು. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಮೂಲಕ ರೋಗಿಗಳಿಗೆ ಅರಿವು ಮೂಡಿಸಬೇಕು. ಕಳೆದ ಜವರಿಯಿಂದ ಮಾಚ್ ವರೆಗೆ ಈ ಹೊಸ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಇನ್ನೂ ಗರ್ಭಿಣಿ ಹೆಂಗಸರು, ಮಕ್ಕಳು ಸಹ ಅಗತ್ಯ ಮುಂಜಾಗೃತೆ ವಹಿಸಬೇಕು. ಇವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಈ ವೈರಸ್ ಬೇಗ ತಗುಲುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಜ್ವರ ಕೆಮ್ಮು, ಶೀತ ಜ್ವರದಂತೆ ಅನಾರೋಗ್ಯ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಬೇಕು. ಸದ್ಯಕ್ಕೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವೈರಸ್ ಹರಡುವಿಕೆ ತಡೆಗೆ ಮಾರ್ಗಸೂಚಿ
ಜನ ತಾವೇ ವೈಯಕ್ತಿಕವಾಗಿ ಚಿಕಿತ್ಸೆ ತೆಗೆದುಕೊಳ್ಳಬಾರದು. ಜೊತೆಗೆ ರೋಗ ನಿರೋಧಕ ಔಷಧಿ ಹೆಚ್ಚು ಪಡೆಯಬಾರದು. ಸದ್ಯ ಬೇಸಿಗೆ ಆರಂಭವಾಗಿದೆ. ಬಿಸಿಗಾಳಿ ಇದ್ದು, ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಟ ಕಡಿಮೆ ಮಾಡಬೇಕು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಬಿಸಿಲಿಗೆ ಓಡಾಡಬಾರದು. ಇಲ್ಲದಿದ್ದರೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಅವರು ಸೂಚಿಸಿದರು.
ರಾಜ್ಯ ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ನೀಡಲಿದೆ. ಎಚ್3ಎನ್2 ಕೂಡಾ ಕೊವೀಡ್ ಪರೀಕ್ಷೆ ರೀತಿಯಲ್ಲೇ ಮಾಡಲಾಗುವುದು. ಸ್ವ್ಯಾಬ್ ಟೆಸ್ಟ್ ಮೂಲಕ ಎಚ್3ಎನ್2 ವೈರಸ್ ಪತ್ತೆ ಮಾಡಬಹುದಾಗಿದೆ. ಎಚ್3ಎನ್2 ಸೋಂಕು ಇದು ಅಷ್ಟೋಂದು ಮಾರಕವಲ್ಲ, ಸೋಂಕು ಪತ್ತೆಯಾದರೂ ಸಹ ಬೇಗ ಗುನಮುಖರಾಗಬಹುದು ಎಂದು ಅವರು ಅಭಯ ನೀಡಿದರು.












Click it and Unblock the Notifications