ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರ್ಮ್: ಕರ್ನಾಟಕದ ಈ ನಗರಗಳಿಗೆ ಹೆಚ್ಚುವರಿ ರೈಲು?

ಮಂಗಳೂರು, ಆಗಸ್ಟ್ 21: ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ಹೊಸ ಪ್ಲಾಟ್‌ಫಾರ್ಮ್‌ಗಳನ್ನು ಆರಂಭಿಸಲಾಗಿದೆ. ಪ್ಲಾಟ್‌ಫಾರ್ಮ್ ನಂ 4 ಮತ್ತು 5 ಕಾರ್ಯಾರಂಭ ಮಾಡಿದ ನಂತರ ಮಂಗಳೂರು ಸೆಂಟ್ರಲ್‌ನಿಂದ ರಾಜ್ಯದ ಹಲವು ನಗರಗಳಿಗೆ ಹೆಚ್ಚುವರಿ ರೈಲುಗಳನ್ನು ಓಡಿಸುವಂತೆ ಬೇಡಿಕೆ ಬಂದಿದೆ. ಈ ಕುರಿತು ಮಂಗಳೂರಿನ ವಿಭಾಗೀಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ (ಡಿಆರ್‌ಯುಸಿಸಿ) ಸದಸ್ಯರು ಭಾರತೀಯ ರೈಲ್ವೆಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿಆರ್‌ಯುಸಿಸಿ ಸದಸ್ಯ ಹನುಮಂತ ಕಾಮತ್, ರೈಲು ಸಂಖ್ಯೆ 16539/40 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.

2 New Platforms at Mangaluru Central railway Station: Additional Trains to These Cities in Karnataka?

ಇತ್ತೀಚೆಗೆ ದಕ್ಷಿಣ ಪಾಲಕ್ಕಾಡ್ ( ಕೇರಳ) ರೈಲ್ವೆಯ ವಿಭಾಗದಲ್ಲಿ ನಡೆದ 162ನೇ ಡಿಆರ್‌ಯುಸಿಸಿ ಸಭೆಯಲ್ಲಿ ಈ ಸಲಹೆಗಳನ್ನು ನೀಡಲಾಗಿದೆ.

ಮಂಗಳೂರು ಸೆಂಟ್ರಲ್ (MAQ) ನಿಂದ ಮಂಗಳೂರು ಮತ್ತು ತಿರುವನಂತಪುರಂ/ಚೆನ್ನೈ ಕಡೆಗೆ ಸಾಕಷ್ಟು ಸಂಖ್ಯೆಯ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕಾಮತ್ ತಿಳಿಸಿದ್ದಾರೆ.

ಮಂಗಳೂರಿನಿಂದ ಕೊಂಕಣ ಭಾಗದಲ್ಲಿರುವ ವಿವಿಧ ಸ್ಥಳಗಳಿಗೆ ಮತ್ತು ಕರ್ನಾಟಕದ ಬೆಳಗಾವಿ, ಹೊಸಪೇಟೆ, ಹುಬ್ಬಳ್ಳಿ ಮುಂತಾದ ನಗರಗಳಿಗೆ ಕಡಿಮೆ ಸಂಖ್ಯೆಯ ರೈಲುಗಳಿವೆ ಎಂದು ತಿಳಿಸಿದ್ದಾರೆ.

2 New Platforms at Mangaluru Central railway Station: Additional Trains to These Cities in Karnataka?

ಆದ್ದರಿಂದ, MAQ ನಲ್ಲಿ ಹೊಸ ಪ್ಲಾಟ್‌ಫಾರ್ಮ್‌ಗಳ ಕಾರ್ಯಾರಂಭದ ನಂತರ ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ಇತ್ಯಾದಿಗಳಿಗೆ ಹೊಸ ರೈಲುಗಳನ್ನು ಓಡಿಸಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಸಾಕಷ್ಟು ರೈಲುಗಳು ಇರುವುದರಿಂದ MAQ ನಿಂದ ದಕ್ಷಿಣ ದಿಕ್ಕಿಗೆ ಹೊಸ ರೈಲುಗಳ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

MAQ ನಿಂದ ಕರ್ನಾಟಕದ ವಿವಿಧ ನಗರಗಳಿಗೆ ಹೊಸ ರೈಲುಗಳನ್ನು ಪ್ರಾರಂಭಿಸುವುದು ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

2 New Platforms at Mangaluru Central railway Station: Additional Trains to These Cities in Karnataka?

ರೈಲು ಸಂಖ್ಯೆ 12133/34 CSTM-ಮಂಗಳೂರು ಜಂಕ್ಷನ್ S.F ಎಕ್ಸ್‌ಪ್ರೆಸ್ ಅನ್ನು ವಿಸ್ತರಿಸಲು ಅವರು ರೈಲ್ವೆಗೆ ವಿನಂತಿಸಿದ್ದಾರೆ.

ರೈಲು ಸಂಖ್ಯೆ 16575/76 YPR-MAJN ಗೋಮಟೇಶ್ವರ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 07337/78 BJP-MAJN ಎಕ್ಸ್‌ಪ್ರೆಸ್ - ಮಂಗಳೂರು ಜಂಕ್ಷನ್‌ನಿಂದ (MAJN) MAQ ಗೆ ವಿಸ್ತರಿಸಲು ಅವರು ಒತ್ತಾಯಿಸಿದ್ದಾರೆ.

07337/78 BJP-MAJN ರೈಲು ಶನಿವಾರದಂದು ಸಂಜೆ 4.40 ಕ್ಕೆ MAJN ಗೆ ಆಗಮಿಸುತ್ತದೆ ಮತ್ತು ಮರುದಿನ (ಭಾನುವಾರ) MAJN ನಿಂದ ಬೆಳಿಗ್ಗೆ 7 ಗಂಟೆಗೆ ಹೊರಡುತ್ತದೆ ಎಂದು ಕಾಮತ್ ಹೇಳಿದ್ದಾರೆ.

ಶನಿವಾರದಂದು ಮೇಲಿನ ರೈಲಿನ ಸ್ಲಾಟ್‌ನಲ್ಲಿ ಯಾವುದೇ ಇತರ ರೈಲುಗಳ ಕಾರ್ಯಾಚರಣೆ ಇಲ್ಲ. ಅಂದರೆ ಮಂಗಳೂರು ಸೆಂಟ್ರಲ್ (MAQ) -ಕಣ್ಣೂರು (CAN) ಎಕ್ಸ್‌ಪ್ರೆಸ್ ನಿರ್ಗಮನದ ನಂತರ MAQ ನಲ್ಲಿ 18.45 ಗಂಟೆಗಳವರೆಗೆ ಪ್ಲಾಟ್‌ಫಾರ್ಮ್ ಸಂಖ್ಯೆ 2 ಖಾಲಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ರೈಲು 16539 ಅನ್ನು MAQ ನ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿ ನಿಲ್ಲಿಸಬಹುದು. ರೈಲು 06478 ಸಂಜೆ 5.15 ಕ್ಕೆ ನಿರ್ಗಮಿಸಿದ ನಂತರ ಈ ರೈಲನ್ನು ಬರಮಾಡಿಕೊಳ್ಳಬಹುದು. ಮರುದಿನ (ಭಾನುವಾರ) ರೈಲು 16539/40 ಅನ್ನು ಪ್ಲಾಟ್‌ಫಾರ್ಮ್ ಸಂಖ್ಯೆ 3 ಕ್ಕೆ ಸರಿಸಬಹುದು ಮತ್ತು 6.40 ಕ್ಕೆ ಯಶವಂತಪುರ (YPR) ಕಡೆಗೆ ಕಳುಹಿಸಬಹುದು. ಇದು 6.55 ಗಂಟೆಗೆ MAJN ಅನ್ನು ತಲುಪಬಹುದು ಮತ್ತು MAJN ನಿಂದ 7 ಗಂಟೆಗೆ ನಿಗದಿತ ನಿರ್ಗಮನ ಸಮಯಕ್ಕೆ ಈ ರೈಲನ್ನು ಕಳುಹಿಸಬಹುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+