ಕರ್ನಾಟಕದಲ್ಲಿ 1,791 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ನವೆಂಬರ್ 18 : ಕರ್ನಾಟಕದಲ್ಲಿ 1,791 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,65,931ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 25,146.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 1,947 ಜನರು ಬುಧವಾರ ಕರ್ನಾಟಕದಲ್ಲಿ ಗುಣಮುಖರಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 8,29,188 ಜನರು ಗುಣಮುಖವಾಗಿದ್ದಾರೆ. ಗುಣಮುಖರಾಗುವವರ ಪ್ರಮಾಣ ಶೇ 95.75 ರಷ್ಟಿದೆ.

ಬುಧವಾರ 21 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 11,578. ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 636 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಮರಣ ಪ್ರಮಾಣ ಶೇ 1.17ರಷ್ಟಿದೆ.

1791 New COVID Cases Reported On November 18

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 28,703 ಆಂಟಿಜೆನ್ ಪರೀಕ್ಷೆ, 68,339 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿದಂತೆ ಇಂದು 97,042 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ ನಡೆಸಿರುವ ಪರೀಕ್ಷೆಗಳು 9741051.

ಯಾವ ಜಿಲ್ಲೆಯಲ್ಲಿ ಎಷ್ಟು? : ಬೆಂಗಳೂರು ನಗರದಲ್ಲಿ 933 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 3,59,539. ಸಕ್ರಿಯ ಪ್ರಕರಣಗಳು 17,703.

ಬುಧವಾರ ದಕ್ಷಿಣ ಕನ್ನಡದಲ್ಲಿ 45, ದಾವಣಗೆರೆ 14, ಹಾಸನ 71, ಮೈಸೂರು 97, ತುಮಕೂರು 86, ಉಡುಪಿ 33, ಉತ್ತರ ಕನ್ನಡ 31, ವಿಜಯಪುರ 121, ಚಿತ್ರದುರ್ಗದಲ್ಲಿ 44 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+