ಬಿಗ್ ಬ್ರೇಕಿಂಗ್: 24 ಗಂಟೆಗಳಲ್ಲೇ ಕರ್ನಾಟಕದ 178 ಮಂದಿಗೆ ಕೊರೊನಾ ವೈರಸ್

ಬೆಂಗಳೂರು, ಮೇ.29: ನೊವೆಲ್ ಕೊರೊನಾ ವೈರಸ್ ಸೋಂಕು ಕರ್ನಾಟಕದಲ್ಲಿ ರೌದ್ರತಾಂಡವ ಆಗುತ್ತಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 178 ಮಂದಿಗೆ ಕೊವಿಡ್-19 ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆಯು 2,700ರ ಗಡಿ ದಾಟಿದೆ.

Recommended Video

      ಫಿಲಂ ಟಿಕೆಟ್ ಗೆ 5 ರೂಪಾಯಿ ಜಾಸ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಫಿಲಂ ಛೇಂಬರ್| Film Chamber | KFI | BSY

      ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗಿನ ಬುಲೆಟಿನ್ ವೇಳೆಗೆ 178 ಮಂದಿಗೆ ಸೋಂಕು ಪತ್ತೆಯಾಗಿದ್ದು ದಾಖಲಾಗಿದೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 2,711ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

      ಯಾದಗಿರಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 60 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಎಲ್ಲ ಸೋಂಕಿತರಿಗೂ ಮಹಾರಾಷ್ಟ್ರ ನಂಟು ಇರುವುದು ಪತ್ತೆಯಾಗಿದ್ದು, ನೆರೆ ರಾಜ್ಯದಿದಂಲೇ ಯಾದಗಿರಿಗೆ ಆಗಮಿಸಿದ್ದ ಕಾರ್ಮಿಕರು ಎಂದು ತಿಳಿದು ಬಂದಿದೆ.

      ಮಹಾರಾಷ್ಟ್ರದಿಂದ ವಾಪಸ್ಸಾದ 156 ಮಂದಿಗೆ ಸೋಂಕು

      ಮಹಾರಾಷ್ಟ್ರದಿಂದ ವಾಪಸ್ಸಾದ 156 ಮಂದಿಗೆ ಸೋಂಕು

      ಕರ್ನಾಟಕದಲ್ಲಿ ಶುಕ್ರವಾರ ಬೆಳಗ್ಗಿನ ಬುಲೆಟಿನ್ ವೇಳೆಯಲ್ಲೇ 178 ಕೊರೊನಾ ವೈರಸ್ ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಶೇ.90ರಷ್ಟು ಪ್ರಕರಣಗಳಲ್ಲಿ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ. 156 ಮಂದಿ ಮಹಾರಾಷ್ಟ್ರದಿಂದಲೇ ರಾಜ್ಯಕ್ಕೆ ವಾಪಸ್ ಆಗಿದ್ದವರು ಎಂದು ತಿಳಿದು ಬಂದಿದೆ.

      34 ಮಕ್ಕಳಿಗೆ 76 ಮಹಿಳೆಯರಿಗೆ ಕೊರೊನಾ ವೈರಸ್

      34 ಮಕ್ಕಳಿಗೆ 76 ಮಹಿಳೆಯರಿಗೆ ಕೊರೊನಾ ವೈರಸ್

      ರಾಜ್ಯದಲ್ಲಿ ಪತ್ತೆಯಾದ 178 ಕೊರೊನಾ ವೈರಸ್ ಸೋಂಕಿತರ ಪೈಕಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ 34 ಮಕ್ಕಳಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇದರ ಜೊತೆಗೆ 76 ಮಂದಿ ಮಹಿಳೆಯರಿಗೆ ಕೊವಿಡ್-19 ಸೋಂಕು ಅಂಟಿಕೊಂಡಿರುವುದು ಪತ್ತೆಯಾಗಿದೆ.

      ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣ?

      ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣ?

      ಯಾದಗಿರಿ - 60, ರಾಯಚೂರು - 62, ಉಡುಪಿ - 15, ಕಲಬುರಗಿ - 15, ದಾವಣಗೆರೆ - 4, ಚಿಕ್ಕಬಳ್ಳಾಪುರ - 4, ಬೆಂಗಳೂರು - 9, ಮೈಸೂರು - 2, ಮಂಡ್ಯ - 2, ಚಿತ್ರದುರ್ಗ - 1, ಬೆಂಗಳೂರು ಗ್ರಾಮಾಂತರ - 1, ಶಿವಮೊಗ್ಗ - 1, ಧಾರವಾಡ - 1 ಕೊರೊನಾ ವೈರಸ್ ಸೋಂಕಿತ ಪ್ರರಣಗಳು ಪತ್ತೆಯಾಗಿವೆ.

      35 ಮಂದಿ ಕೊರೊನಾ ವೈರಸ್ ಸೋಂಕಿತರು ಗುಣಮುಖ

      35 ಮಂದಿ ಕೊರೊನಾ ವೈರಸ್ ಸೋಂಕಿತರು ಗುಣಮುಖ

      ರಾಜ್ಯದಲ್ಲಿ ಶುಕ್ರವಾರದ ಬೆಳಗ್ಗಿನ ಬುಲೆಟಿನ್ ನಲ್ಲಿ 35 ಮಂದಿ ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿರುವ ಬಗ್ಗೆ ತಿಳಿಸಲಾಗಿದೆ. ಹಾಸನ ಜಿಲ್ಲೆಯೊಂದರಲ್ಲೇ 30 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ 3, ಚಿಕ್ಕಮಗಳೂರಿನಲ್ಲಿ ಒಬ್ಬರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಒಬ್ಬರು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+