ಕರ್ನಾಟಕದಲ್ಲಿ 176 ಮಂದಿಗೆ ಸೋಂಕು, 312 ಸೋಂಕಿತರು ಡಿಸ್ಚಾರ್ಜ್

ಬೆಂಗಳೂರು, ಜೂನ್.14: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಹಾವಳಿ ಮುಂದುವರಿದಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಮತ್ತೊಮ್ಮೆ ಬರೋಬ್ಬರಿ 7,000ಕ್ಕೆ ಏರಿಕೆಯಾಗಿದ್ದು, ಒಂದೇ ದಿನ 176 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಬೆಂಗಳೂರಿನ ಮಂದಿಗೆ ಬಿಗ್ ಶಾಕ್ ನೀಡಿದೆ. ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ 42 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರಿಗಿಂತಲೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 176 ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದ್ದರೆ, 312 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

176 New Coronavirus Cases Reported in Karnataka Today, State Tally Rise to 7000

ರಾಜ್ಯದಲ್ಲಿ ಜಿಲ್ಲಾವಾರು ಕೊವಿಡ್-19 ಸೋಂಕಿತರ ಸಂಖ್ಯೆ

ಬೆಂಗಳೂರು ನಗರ - 42, ಯಾದಗಿರಿ - 22, ಉಡುಪಿ - 21, ಬೀದರ್ -20, ಕಲಬುರಗಿ - 13, ಧಾರವಾಡ - 10, ಬಳ್ಳಾರಿ -8, ಕೋಲಾರ -7, ಉತ್ತರ ಕನ್ನಡ - 6, ಮಂಡ್ಯ -5, ದಕ್ಷಿಣ ಕನ್ನಡ -5, ಬಾಗಲಕೋಟೆ - 4, ರಾಮನಗರ - 3, ರಾಯಚೂರು -2, ಶಿವಮೊಗ್ಗ - 2, ಬೆಳಗಾವಿ - 1, ಹಾಸನ -1, ವಿಜಯಪುರ - 1, ಬೆಂಗಳೂರು ಗ್ರಾಮಾಂತರ -1, ಹಾವೇರಿ -1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

312 ಕೊರೊನಾ ವೈರಸ್ ಸೋಂಕಿತರು ಗುಣಮುಖ

ಕರ್ನಾಟಕದಲ್ಲಿ ಒಂದೇ ದಿನ 312 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಡುಪಿ -130, ಕಲಬುರಗಿ - 50, ಯಾದಗಿರಿ -35, ಬೆಂಗಳೂರು ನಗರ - 28, ದಕ್ಷಿಣ ಕನ್ನಡ - 11, ವಿಜಯಪುರ - 10, ದಾವಣಗೆರೆ - 10, ಹಾಸನ - 9, ಉತ್ತರ ಕನ್ನಡ -8, ಬೆಳಗಾವಿ -6, ಬಳ್ಳಾರಿ - 6, ಕೊಪ್ಪಳ -5, ಧಾರವಾಡ - 2, ಬಾಗಲಕೋಟೆ -1, ಇತರೆ - 1 ಕೊರೊನಾ ವೈರಸ್ ಸೋಂಕಿತರ ಆರೋಗ್ಯದಲ್ಲಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+