Breaking; ಕರ್ನಾಟಕದಲ್ಲಿ 171 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಮೇ 07; ಕರ್ನಾಟಕದಲ್ಲಿ 171 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1945 ಆಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 121 ಜನರು ಗುಣಮುಖಗೊಂಡಿದ್ದಾರೆ. ಯಾವುದೇ ಸೋಂಕಿತರು ಸಹ ಮೃತಪಟ್ಟಿಲ್ಲ.

ರಾಜ್ಯದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 39,48,635 ಆಗಿದೆ. ಒಟ್ಟು ಗುಣಮುಖಗೊಂಡವರು 39,06,587. ಇದುವರೆಗೂ 40061 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ.

171 New Covid Cases Reported In Karnataka

ರಾಜ್ಯದ ದೈನಂದಿನ ಪಾಸಿಟಿವಿಟಿ ದರ ಶೇ 1.09 ಆಗಿದೆ. ವಾರದ ಪಾಸಿಟಿವಿಟಿ ದರ ಶೇ 1.42 ಆಗಿದೆ. 4127 ಆಂಟಿಜೆನ್, 11520 ಆರ್‌ಟಿಪಿಸಿಆರ್ ಸೇರಿದಂತೆ 15,647 ಮಾದರಿಗಳ ಪರೀಕ್ಷೆಗಳನ್ನು 24 ಗಂಟೆಯಲ್ಲಿ ನಡೆಸಲಾಗಿದೆ.

171 ಹೊಸ ಕೋವಿಡ್ ಪ್ರಕರಣಗಳ ಪೈಕಿ 155 ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿವೆ. ಮೈಸೂರಿನಲ್ಲಿ 10, ಉಡುಪಿಯಲ್ಲಿ 1, ದಕ್ಷಿಣ ಕನ್ನಡ 2, ಬೆಂಗಳೂರು ಗ್ರಾಮಾಂತರ ಮತ್ತು ಬೀದರ್‌ನಲ್ಲಿ ತಲಾ 1 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1841. ಇದುವರೆಗೂ ದಾಖಲಾದ ಪ್ರಕರಣಗಳು 1784497. ನಗರದಲ್ಲಿ ಇದುವರೆಗೂ 16962 ಜನರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+