ಕರ್ನಾಟಕದಲ್ಲಿ ಮಿತಿಮೀರಿದ ಕೊರೊನಾ: ಬೆಂಗಳೂರಲ್ಲಿ 1037 ಪ್ರಕರಣ ದಾಖಲು
ಬೆಂಗಳೂರು, ಮಾರ್ಚ್ 19: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರಿದೆ. ರಾಜ್ಯಾದ್ಯಂತ 1587 ಪ್ರಕರಣಗಳು ಪತ್ತೆಯಾಗಿದ್ದರೆ, ಬೆಂಗಳೂರೊಂದರಲ್ಲೇ 1037 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ, ಆಸ್ಪತ್ರೆಯಿಂದ 869 ಮಂದಿ ಬಿಡುಗಡೆಹೊಂದಿದ್ದಾರೆ.ಇಲ್ಲಿಯವರೆಗೆ 12425 ಮಂದಿ ಮೃತಪಟ್ಟಿದ್ದು, 942178 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 966689 ಪ್ರಕರಣಗಳಿದ್ದು, 131 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬಳ್ಳಾರಿ 8, ಬೆಳಗಾವಿ 37, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 1037, ಬೀದರ್ 40, ಚಾಮರಾಜನಗರ 08, ಚಿಕ್ಕಬಳ್ಳಾಪುರ 09, ಚಿಕ್ಕಮಗಳೂರು 11, ಚಿತ್ರದುರ್ಗ 16, ದಕ್ಷಿಣ ಕನ್ನಡ 47, ದಾವಣಗೆರೆ 11, ಧಾರವಾಡ 26, ಗದಗ 5, ಹಾಸನ 35, ಹಾವೇರಿ 1, ಕಲಬುರಗಿ 61, ಕೊಡಗು 4, ಕೋಲಾರ 14, ಕೊಪ್ಪಳ 1, ಮಂಡ್ಯ 25, ಮೈಸೂರು 49, ರಾಯಚೂರು 1, ರಾಮನಗರ 4, ಶಿವಮೊಗ್ಗ 12, ತುಮಕೂರು 50, ಉಡುಪಿ 13, ಉತ್ತರ ಕನ್ನಡ 5, ವಿಜಯಪುರ 30, ಯಾದಗಿರಿ 7 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications