ಬೆಂಗಳೂರಲ್ಲಿ 9917 ಸೇರಿ ಕರ್ನಾಟಕದಲ್ಲಿ 14,859 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು, ಏಪ್ರಿಲ್ 16: ಕರ್ನಾಟಕದಲ್ಲಿ ಬರೋಬ್ಬರಿ 14,859 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಹಿತಿ ನೀಡಿದೆ. ಒಂದೇ ದಿನ 78 ಮಂದಿ ಮೃತಪಟ್ಟಿದ್ದಾರೆ, ಇದುವರೆಗೆ 13,190 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ 4031ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇದುವರೆಗೆ 1003985 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 107315 ಸಕ್ರಿಯ ಪ್ರಕರಣಗಳಿವೆ, ಒಟ್ಟು 1124509 ಪ್ರಕರಣಗಳಿವೆ. 577 ಮಂದಿ ಐಸಿಯುನಲ್ಲಿದ್ದಾರೆ.

ಬಾಗಲಕೋಟೆ 71, ಬಳ್ಳಾರಿ 279, ಬೆಳಗಾವಿ 120, ಬೆಂಗಳೂರು ಗ್ರಾಮಾಂತರ 358, ಬೆಂಗಳೂರು ನಗರ 9917, ಬೀದರ್ 326, ಚಾಮರಾಜನಗರ 68, ಚಿಕ್ಕಬಳ್ಳಾಪುರ 180, ಚಿಕ್ಕಮಗಳೂರು 73, ಚಿತ್ರದುರ್ಗ 57, ದಕ್ಷಿಣ ಕನ್ನಡ 256, ದಾವಣಗೆರೆ 85, ಧಾರವಾಡ 176, ಗದಗ 34, ಹಾಸನ 244, ಹಾವೇರಿ 35, ಕಲಬುರಗಿ 488, ಕೊಡಗು 33, ಕೋಲಾರ 109, ಕೊಪ್ಪಳ 158, ಮಂಡ್ಯ 137, ಮೈಸೂರು 415, ರಾಯಚೂರು 108, ರಾಮನಗರ 100, ಶಿವಮೊಗ್ಗ 67, ತುಮಕೂರು 432, ಉಡುಪಿ 101, ಉತ್ತರ ಕನ್ನಡ 72, ವಿಜಯಪುರ 207, ಯಾದಗಿರಿಯಲ್ಲಿ 153 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.












Click it and Unblock the Notifications