ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ಸ್ಥಾನಗಳಲ್ಲಿ ಎನ್ ಸಿಪಿ ಸ್ಪರ್ಧೆ ಉಳಿದೆಡೆ ಕಾಂಗ್ರೆಸ್ ಗೆ ಬೆಂಬಲ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 2: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಯಲ್ಲಿರುವ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಕರ್ನಾಟಕದಲ್ಲಿ ಸ್ವತಂತ್ರವಾಗಿ 14 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿದೆ.

ಒಂದು ಹಂತದಲ್ಲಿ ಎನ್ ಸಿಪಿ ಪಕ್ಷ ಜೆಡಿಎಸ್ ಜೊತೆ ಕೈ ಜೋಡಿಸಲು ಮುಂದಾಗಿತ್ತು. ಮತ್ತೊಮ್ಮೆ ಎನ್ ಸಿಪಿ ನಮಗೆ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಒಟ್ಟು 14 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಪವಾರ್ ಉಳಿದೆಡೆ ಮಾತ್ರ ಕಾಂಗ್ರೆಸಿಗೆ ಬೆಂಬಲ ನೀಡಿದ್ದಾರೆ.

ಚುನಾವಣೆಗೂ ಮುನ್ನ ನಾಪತ್ತೆಯಾದ ಮಾಯಾವತಿ, ಓವೈಸಿ, ಪವಾರ್ಚುನಾವಣೆಗೂ ಮುನ್ನ ನಾಪತ್ತೆಯಾದ ಮಾಯಾವತಿ, ಓವೈಸಿ, ಪವಾರ್

ವಿಜಯಪುರ ನಗರದಲ್ಲಿ ಪೀರ್ ಪಾಷಾ ಗಚ್ಚಿಮಹಲ್, ಸಿಂಧಗಿಯಲ್ಲಿ ಸಂಶುದ್ದೀನ್ ಕೆ ಮುಲ್ಲಾ, ರಾಯಚೂರು ನಗರದಲ್ಲಿ ಶ್ರೀಹರಿ ನಾಯಕ್, ಬಸವಕಲ್ಯಾಣದಲ್ಲಿ ರಾಮಬಾವು ಯಾದವ್, ರಾಯಭಾಗದಲ್ಲಿ ನೀಲಪ್ಪ ಬಸಪ್ಪ ಗಡ್ಡಗೋಲ್, ಹುಕ್ಕೇರಿಯಲ್ಲಿ ರಾಯಪ್ಪ ಜಿ ಕನ್ನೂರ, ಸವದತ್ತಿಯಲ್ಲಿ ಮಹೇಶ್ ಜಿ ಅಂಗಡಿ, ಬೆಳಗಾವಿ ನಗರ ಉತ್ತರದಲ್ಲಿ ರಹೀಮ್ ದೊಡ್ಡಮನಿ, ಬಳ್ಳಾರಿ ನಗರದಲ್ಲಿ ಮೊಹಮ್ಮದ್ ಇಸ್ಮಾಯಿಲ್, ಶಿರಹಟ್ಟಿದಲ್ಲಿ ಗೀತಾ ಕೃಷ್ಣ ನಾಯಕ್, ಕಾರವಾರದಲ್ಲಿ ಮಹದೇವ ನಾಯಕ್, ಹರಪ್ಪನಹಳ್ಳಿಯಲ್ಲಿ ಆರ್.ಕೃಷ್ಣಮೂರ್ತಿ, ಧಾರವಾಡ ನಗರದಲ್ಲಿ ಈರಪ್ಪ ಎಮ್ಮಿ ಮತ್ತು ಮಹಾಲಕ್ಷ್ಮೀ ಲೇಔಟ್ ನಲ್ಲಿ ಎನ್ ಗಿರೀಶ್ ಎನ್ ಸಿಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.

14 NCP candidates contesting in Karnataka assembly elections 2018

14 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎನ್ ಸಿಪಿ ಉಳಿದೆಡೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬೆನ್ಸಾನಿಯೋ ಸಿಲ್ವರ್ ಹೇಳಿದ್ದಾರೆ. ಇನ್ನು ಎನ್ ಸಿಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಶರದ್ ಪವಾರ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
14 candidates of Nationalist Congress Party (NCP) are contesting in Karnataka assembly elections 2018. Sharad Pawar has decided to support Congress in the remaining 210 constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X