ರಾಜ್ಯಕ್ಕೀಗ ಹೊಸ ಆತಂಕ; ಪರೀಕ್ಷೆಯಿಲ್ಲದೇ ಬ್ರಿಟನ್ ನಿಂದ ಬಂದ 138 ಮಂದಿ

ಬೆಂಗಳೂರು, ಡಿಸೆಂಬರ್ 22: ಬ್ರಿಟನ್ ನಲ್ಲಿ ಪತ್ತೆಯಾಗಿರುವ, ಅತಿ ವೇಗವಾಗಿ ಹರಡಬಲ್ಲ ಕೊರೊನಾ ವೈರಸ್ SARS-CoV-2 ಹೊಸ ರೂಪ ಆತಂಕಕ್ಕೆ ಕಾರಣವಾಗಿದ್ದು, ಸದ್ಯಕ್ಕೆ ಬ್ರಿಟನ್ ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕಳೆದ ಹದಿನೈದು ದಿನಗಳಲ್ಲಿ ಬ್ರಿಟನ್ ನಿಂದ ಕರ್ನಾಟಕಕ್ಕೆ ಸುಮಾರು 138 ಮಂದಿ ಬಂದಿದ್ದು, ಇವರನ್ನು ಪತ್ತೆ ಹಚ್ಚುವುದು ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ.

Recommended Video

      UKಯಿಂದ ಬಂದವರಿಗೆ ಸಾಂಸ್ಥಿಕ ಕ್ವಾರೆಂಟೈನ್‌, ಸರ್ಕಾರದ ನಿರ್ಧಾರದ ವಿರುದ್ಧ ಪ್ರಯಾಣಿಕರ ಆಕ್ರೋಶ | Oneindia Kannada

      ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೇ, ನಿಲ್ದಾಣದಲ್ಲೂ ಪರೀಕ್ಷೆಗೆ ಒಳಗಾಗದೆ ಇವರು ಬಂದಿದ್ದು, ಸದ್ಯಕ್ಕೆ ಈ ಎಲ್ಲರನ್ನೂ ಪತ್ತೆ ಹಚ್ಚುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. 138 ಮಂದಿ ಬೆಂಗಳೂರಿನ ಹಲವೆಡೆಗಳಲ್ಲಿದ್ದಾರೆ. ಇದೀಗ ಎಲ್ಲರ ವಿಳಾಸ ಹಾಗೂ ಫೋನ್ ನಂಬರ್ ಟ್ರೇಸ್ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಮುಂದೆ ಓದಿ...

       ಪಟ್ಟಿ ಸಿದ್ಧ ಪಡಿಸಲು ನಿಲ್ದಾಣಗಳಿಗೆ ಸೂಚನೆ

      ಪಟ್ಟಿ ಸಿದ್ಧ ಪಡಿಸಲು ನಿಲ್ದಾಣಗಳಿಗೆ ಸೂಚನೆ

      ಡಿ.22ಕ್ಕೆ ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಕಳೆದ ಹದಿನೈದು ದಿನಗಳಿಂದ ಕರ್ನಾಟಕಕ್ಕೆ ಬ್ರಿಟನ್ ನಿಂದ ಎಷ್ಟು ಮಂದಿ ಬಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರು ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಡಿ.7ರಿಂದ ಬಂದಿರುವ ಪ್ರಯಾಣಿಕರ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಿದೆ. ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್, ಬ್ರಿಟಿಷ್ ಏರ್ ವೇಸ್ ನಿಂದ ಬಂದ 291 ಮಂದಿಯಲ್ಲಿ 49 ಮಂದಿ ಕೊರೊನಾ ಸರ್ಟಿಫಿಕೇಟ್ ಪಡೆದುಕೊಂಡಿಲ್ಲ ಹಾಗೂ ಯಾವುದೇ ಪರೀಕ್ಷೆಗೆ ಒಳಗಾಗಿಲ್ಲ. ಏರ್ ಇಂಡಿಯಾ ವಿಮಾನದಲ್ಲಿ ಬಂದ 246 ಮಂದಿಯಲ್ಲಿ 89 ಮಂದಿ ಕೊರೊನಾ ಸರ್ಟಿಫಿಕೇಟ್ ಇಲ್ಲದೇ ಬಂದಿದ್ದು, ಪರೀಕ್ಷೆಯನ್ನೂ ನಡೆಸಿಲ್ಲ ಎಂದು ತಿಳಿಸಿದ್ದಾರೆ. ಒಟ್ಟು 138 ಮಂದಿಯನ್ನು ಈಗ ಪತ್ತೆ ಹಚ್ಚಲಾಗುತ್ತಿದೆ.

       ಎಲ್ಲರಿಗೂ ಆರ್ ಟಿಪಿಸಿಆರ್ ಪರೀಕ್ಷೆ

      ಎಲ್ಲರಿಗೂ ಆರ್ ಟಿಪಿಸಿಆರ್ ಪರೀಕ್ಷೆ

      ಬ್ರಿಟನ್ ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಲಕ್ಷಣಗಳು ಇರಲಿಲ್ಲ. ಆದರೂ ಮುಂಜಾಗ್ರತಾ ದೃಷ್ಟಿಯಿಂದ ನಾಗರೀಕ ವಿಮಾನ ಯಾನ ಸಚಿವಾಲಯದಿಂದ ಇವರ ವಿವರವನ್ನು ಕೇಳಿದ್ದೇವೆ. ಅವರನ್ನು ಟ್ರೇಸ್ ಮಾಡುತ್ತಿದ್ದೇವೆ. ಸಿಕ್ಕ ನಂತರ ಅವರಿಗೆಲ್ಲಾ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. "ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಗೆ ಆಸ್ಪತ್ರೆಗಳಲ್ಲಿ ಐಸೊಲೇಷನ್ ನಲ್ಲಿರಿಸಲಾಗುವುದ. ನಿಮ್ಹಾನ್ಸ್ ಗೆ ಪರೀಕ್ಷಾ ಮಾದರಿ ಕಳುಹಿಸಲಾಗುವುದು. ನೆಗೆಟಿವ್ ಬಂದವರಿಗೆ ಹದಿನಾಲ್ಕು ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಕ್ವಾರಂಟೈನ್ ಮೇಲೆ ಕಣ್ಗಾವಲಿಗೆ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.

       ಎರಡೂ ವಿಮಾನಗಳಲ್ಲಿ ಕ್ರಮ

      ಎರಡೂ ವಿಮಾನಗಳಲ್ಲಿ ಕ್ರಮ

      ಮಂಗಳವಾರವೇ ಬ್ರಿಟನ್ ನಿಂದ ವಿಮಾನ ಯಾನ ಕೊನೆಯಾದ್ದರಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಶೇಷ ವ್ಯವಸ್ಥೆ ಕೈಗೊಳ್ಳಲಾಗಿಲ್ಲ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆದೇಶದಂತೆ ಸರ್ಕಾರದ ಎಲ್ಲಾ ಆದೇಶ ಪಾಲಿಸಲಾಗುವುದು. ಬ್ರಿಟನ್ ನಿಂದ ಬರುವ ವಿಮಾನಗಳು ಸ್ಥಗಿತಗೊಂಡಿವೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ವಕ್ತಾರ ತಿಳಿಸಿದ್ದಾರೆ. ಬ್ರಿಟಿನ್ ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳಿಲ್ಲ. ಆದರೆ ಮಂಗಳೂರಿಗೆ ಲಂಡನ್ ನಿಂದ ಬೇರೆ ವಿಮಾನಗಳಲ್ಲಿ ಬಂದಿದ್ದರೆ ಅವರನ್ನು ಕಂಡುಕೊಳ್ಳುವ ಸಾಧ್ಯತೆಗಳ್ನೂ ತಿಳಿದುಕೊಳ್ಳಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

      "ಭಯ ಪಡುವ ಅಗತ್ಯವಿಲ್ಲ"

      ವಿಮಾನ ನಿಲ್ದಾಣ ಆಡಳಿತ ಮಂಡಳಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಬೆಂಗಳೂರು, ಮಂಗಳೂರು ಎರಡೂ ಕಡೆ ವಿಮಾನ ನಿಲ್ದಾಣಗಳಲ್ಲಿ ಕಿಯೋಸ್ಕ್ ಅಳವಡಿಸಲಾಗುವುದು. ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರ ಪರೀಕ್ಷೆ ನಡೆಸಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ, ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದಿದ್ದಾರೆ ಸಚಿವ ಸುಧಾಕರ್.
      ಮಂಗಳವಾರ ಬ್ರಿಟನ್ ನಿಂದ ಬಂದಿರುವ ಎಲ್ಲಾ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.

       ಆತಂಕ ತಂದಿರುವ ಬ್ರಿಟನ್ ನ ಹೊಸ ಕೊರೊನಾ ವೈರಸ್

      ಆತಂಕ ತಂದಿರುವ ಬ್ರಿಟನ್ ನ ಹೊಸ ಕೊರೊನಾ ವೈರಸ್

      ಬ್ರಿಟನ್ ನಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆಯಾಗುತ್ತಿದ್ದಂತೆ ವಿಶ್ವದೆಲ್ಲೆಡೆ ಆತಂಕ ಶುರುವಾಗಿದೆ. ಪ್ರಸ್ತುತ ಇರುವ ವೈರಸ್ ಗಿಂತ ಇದು ಹೆಚ್ಚು ವೇಗವಾಗಿ ಹರಡಬಲ್ಲದ್ದಾಗಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ. ಬ್ರಿಟನ್ ನಿಂದ ಬರುವ ವಿಮಾನಗಳನ್ನು ಹಲವು ದೇಶಗಳು ಸ್ಥಗಿತಗೊಳಿಸಿವೆ.
      ಭಾರತದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವೂ ಡಿ.31ರವರೆಗೆ ಬ್ರಿಟನ್ ನಿಂದ ಬರುವ ವಿಮಾನಳನ್ನು ರದ್ದುಗೊಳಿಸಿದ್ದು, ಸೋಮವಾರ ಎಲ್ಲಾ ರಾಜ್ಯಗಳಿಗೆ ಬ್ರಿಟನ್ ನಿಂದ ವಿಮಾನಗಳಲ್ಲಿ ಬಂದವರಿಗೆ ಕ್ವಾರಂಟೈನ್ ಇರಲು ಸೂಚಿಸಿದೆ. ಇದೀಗ ರಾಜ್ಯ ಸರ್ಕಾರ ಬ್ರಿಟನ್ ನಿಂದ ಬಂದ ಪ್ರಯಾಣಿಕರ ಜಾಡು ಪತ್ತೆ ಹಚ್ಚುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+