ರಾಜ್ಯದಲ್ಲಿ ಇಂದು 1325 ಕೊರೊನಾ ವೈರಸ್ ಸೋಂಕಿತರು ಪತ್ತೆ

ಬೆಂಗಳೂರು, ಡಿಸೆಂಬರ್ 5: ರಾಜ್ಯದಲ್ಲಿ ಶನಿವಾರ 1325 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಜತೆಗೆ 1400 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳಲ್ಲಿ ಕೊಂಚ ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 12 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರಿಂದ ಇದುವರೆಗೂ ವೈರಸ್‌ಗೆ ಜೀವಕಳೆದುಕೊಂಡವರ ಸಂಖ್ಯೆ 11,846ಕ್ಕೆ ತಲುಪಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,959ಕ್ಕೆ ಇಳಿಕೆಯಾಗಿದೆ. ಇದುವರೆಗೂ ಒಟ್ಟು 8,91,685 ಪ್ರಕರಣಗಳು ವರದಿಯಾಗಿದ್ದು, 8,54,861 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾದವರಲ್ಲಿ 278 ಮಂದಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಡೆದ ಪರೀಕ್ಷೆಗಳಲ್ಲಿ ಶೇ 1.27ರಷ್ಟು ಸೋಂಕಿತ ಪ್ರಕರಣಗಳು ಖಚಿತವಾಗಿವೆ.

ಇಂದು ಒಟ್ಟು 18,367 ಮಂದಿಯನ್ನು ರಾಪಿಡ್ ಆಂಟಿಜೆನ್ ಪರೀಕ್ಷೆ ಮತ್ತು 85,665 ಮಂದಿಯನ್ನು ಆರ್‌ಟಿ ಪಿಸಿಆರ್ ಹಾಗೂ ಇತರೆ ಮಾದರಿಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

1325 New Covid Positive Cases, 12 Deaths In Karnataka

ಬೆಂಗಳೂರಿನಲ್ಲಿ ಅತಿ ಹೆಚ್ಚು, ಅಂದರೆ 709 ಮಂದಿಗೆ ಸೋಂಕು ತಗುಲಿದೆ. ನಗರದಲ್ಲಿ ಆರು ಮಂದಿ ಇಂದು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 55 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಹಾವೇರಿಯಲ್ಲಿ ಅತಿ ಕಡಿಮೆ ಅಂದರೆ ಕೇವಲ ಒಂದು ಪ್ರಕರಣ ವರದಿಯಾಗಿದೆ.

Recommended Video

      ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada

      ಬಾಗಲಕೋಟೆ 12, ಬಳ್ಳಾರಿ 23, ಬೆಳಗಾವಿ 45, ಬೆಂಗಳೂರು ಗ್ರಾಮಾಂತರ 23, ಬೀದರ್ 4, ಚಾಮರಾಜನಗರ 13, ಚಿಕ್ಕಬಳ್ಳಾಪುರ 27, ಚಿತ್ರದುರ್ಗ 8, ಚಿಕ್ಕಮಗಳೂರು 42, ದಕ್ಷಿಣ ಕನ್ನಡ 37, ದಾವಣಗೆರೆ 9, ಧಾರವಾಡ 25, ಗದಗ 11, ಹಾಸನ 36, ಕಲಬುರಗಿ 15, ಕೊಡಗು 18, ಕೋಲಾರ 22, ಕೊಪ್ಪಳ 3, ಮಂಡ್ಯ 24, ರಾಯಚೂರು 29, ರಾಮನಗರ 6, ಶಿವಮೊಗ್ಗ 17, ತುಮಕೂರು 44, ಉಡುಪಿ 14, ಉತ್ತರ ಕನ್ನಡ 30, ವಿಜಯಪುರ 9, ಯಾದಗಿರಿ ಜಿಲ್ಲೆಗಳಲ್ಲಿ 14 ಪ್ರಕರಣಗಳು ದಾಖಲಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+