ಕೊರೊನಾ ಸೋಂಕಿತರಿಲ್ಲದ ಜಿಲ್ಲೆಗಳು: 16 ರಿಂದ 13ಕ್ಕೆ ಇಳಿಕೆ
ವಿಶ್ವದಲ್ಲಿ ಕೊರೊನಾ ಸೋಂಕಿತರು ಮತ್ತು ಅದರಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರಕಾರ ಲಾಕ್ ಡೌನ್ ಶೇ. 75ರಷ್ಟೂ ಪಾಲನೆಯಾಗುತ್ತಿಲ್ಲ.
ಸೋಮವಾರದಿಂದ ( ಏ 6) ಪೊಲೀಸರಿಗೆ ವಿಶೇಷ ಅಧಿಕಾರವನ್ನು ರಾಜ್ಯ ಸರಕಾರ ನೀಡಿದ್ದು, ಇನ್ನು ಮುಂದೆಯಾದರೂ, ಸಾರ್ವಜನಿಕರ ಸಂಚಾರ ಕಮ್ಮಿಯಾಗಲಿದೆಯೋ ಎಂದು ಕಾದು ನೋಡಬೇಕಾಗಿದೆ.
ಲಾಕ್ ಡೌನ್ ಮುಗಿಯಲು ಇನ್ನು ಒಂದು ವಾರ ಬಾಕಿ ಉಳಿದಿದ್ದು, ಇದು ಇನ್ನೂ ವಿಸ್ತರಣೆಯಾಗಲಿದೆಯೇ ಎನ್ನುವ ವಿಚಾರದಲ್ಲಿ ಇನ್ನೂ ಅಧಿಕೃತ ಸ್ಪಷ್ಟನೆ ಸಿಗಬೇಕಿದೆ.
ಏಪ್ರಿಲ್ ಒಂದರ ವೇಳೆ, ರಾಜ್ಯದ ಹದಿನಾರು ಜಿಲ್ಲೆಗಳಿಗೆ ಕೊರೊನಾ ಸೋಂಕು ಹಬ್ಬಿರಲಿಲ್ಲ. ಈಗ, ಈ ಹದಿನಾರು ಜಿಲ್ಲೆಗಳ ಪೈಕಿ ಮತ್ತೆ ಮೂರು ಜಿಲ್ಲೆಗಳಿಗೆ ಈ ಸೋಂಕು ಹರಡಿರುವುದರಿಂದ, ಕೊರೊನಾ ಸೋಂಕು ಇಲ್ಲದ ಜಿಲ್ಲೆಗಳು 16 ರಿಂದ 13ಕ್ಕೆ ಇಳಿಕೆಯಾಗಿದೆ. ಆ ಜಿಲ್ಲೆಗಳು ಇಂತಿವೆ:

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಜಿಲ್ಲೆಗಳು - 1
1.ವಿಜಯಪುರ
2. ಹಾವೇರಿ
3. ಶಿವಮೊಗ್ಗ

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಜಿಲ್ಲೆಗಳು - 2
4. ರಾಮನಗರ
5. ಚಿತ್ರದುರ್ಗ
6. ಕೋಲಾರ

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಜಿಲ್ಲೆಗಳು - 3
7. ತುಮಕೂರು (ಒಂದು ಸಾವು ಸಂಭವಿಸಿದ ನಂತರ, ಯಾವುದೇ ಹೊಸ ಪಾಸಿಟಿವ್ ಕೇಸ್ ಗಳಿಲ್ಲ)
8. ಕೊಪ್ಪಳ
9. ರಾಯಚೂರು

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಜಿಲ್ಲೆಗಳು - 4
10. ಯಾದಗಿರಿ
11. ಚಾಮರಾಜನಗರ
12. ಚಿಕ್ಕಮಗಳೂರು
13. ಹಾಸನ












Click it and Unblock the Notifications