ಕರ್ನಾಟಕ; 24 ಗಂಟೆಯಲ್ಲಿ 1219 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಜುಲೈ 19; ಕರ್ನಾಟಕದಲ್ಲಿ 24 ಗಂಟೆಯಲ್ಲಿ 1291 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 40 ಜನರು ಮೃತಪಟ್ಟಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 27,527.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ 3015 ಜನರು ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 0.94 ಮತ್ತು ಮರಣ ಪ್ರಮಾಣ 3.09.

ಕರ್ನಾಟಕದಲ್ಲಿ ಇದುವರೆಗಿನ ಖಚಿತ ಪ್ರಕರಣಗಳ ಸಂಖ್ಯೆ 2885238. ಒಟ್ಟು ಮೃತಪಟ್ಟವರು 36,197. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 2821491.

 1291 New Covid Cases Reported In Karnataka

24 ಗಂಟೆಯಲ್ಲಿ 17,839 ಆಂಟಿಜೆನ್, 118135 ಆರ್‌ಟಿಪಿಸಿಆರ್ ಸೇರಿದಂತೆ 135974 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಇದುವರೆಗೂ ರಾಜ್ಯದಲ್ಲಿ 37019681 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 266 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸಂಖ್ಯೆ 1222455. ಸಕ್ರಿಯ ಪ್ರಕರಣಗಳು 10809.

ಚಿಕ್ಕಮಗಳೂರು 100. ದಕ್ಷಿಣ ಕನ್ನಡ 126. ಹಾಸನ 125. ಮೈಸೂರು 125. ಉಡುಪಿ 85. ತುಮಕೂರು 70. ಶಿವಮೊಗ್ಗದಲ್ಲಿ 51 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಬೆಳಗಾವಿ 38. ಬೆಂಗಳೂರು ಗ್ರಾಮಾಂತರ 34. ಚಾಮರಾಜನಗರ 27. ಧಾರವಾಡ 13. ಕೊಡಗು 60. ಕೋಲಾರ 25. ಮಂಡ್ಯ 42. ಉತ್ತರ ಕನ್ನಡ 38 ಪ್ರಕರಣ ಪತ್ತೆಯಾಗಿದೆ.

ಬಾಗಲಕೋಟೆ 1. ಬಳ್ಳಾರಿ 3. ಬೀದರ್ 1. ಚಿಕ್ಕಬಳ್ಳಾಪುರ 9. ದಾವಣಗೆರೆ 8. ಗದಗ 1. ಹಾವೇರಿ 1, ಕಲಬುರಗಿ 8. ಕೊಪ್ಪಳ 0. ರಾಯಚೂರು 5. ರಾಮನಗರ 5. ವಿಜಯಪುರ 7. ಯಾದಗಿರಿ 2 ಹೊಸ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+