ರಾಜ್ಯದಲ್ಲಿ ಇಂದು 1,238 ಕೊರೊನಾ ವೈರಸ್ ಪ್ರಕರಣ
ಬೆಂಗಳೂರು, ಡಿಸೆಂಬರ್ 10: ರಾಜ್ಯದಲ್ಲಿ ಗುರುವಾರ 1,238 ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ರಾಜ್ಯದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 8,97,801ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 12 ಮಂದಿ ವೈರಸ್‌ನಿಂದ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 11,912 ಕೋವಿಡ್ ಸೋಂಕಿತರು ಮರಣ ಹೊಂದಿದ್ದಾರೆ. ಇಂದು 5076 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 86,6664ಕ್ಕೆ ತಲುಪಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 19,206ಕ್ಕೆ ಇಳಿಕೆಯಾಗಿದೆ.
ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣ ಶೇ 1.46ರಷ್ಟಿದೆ. ದೈನಂದಿನ ಮರಣ ಪ್ರಮಾಣ ಶೇ 0.96ರಷ್ಟು ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ 701 ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಸಂಖ್ಯೆ 3,76,592ಕ್ಕೆ ಏರಿಕೆಯಾಗಿದ್ದು, 3,58553 ಮಂದಿ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 4,218ಕ್ಕೆ ಇಳಿಕೆಯಾಗಿವೆ.
ಉಳಿದ ಜಿಲ್ಲೆಗಳಲ್ಲಿ ಸೋಂಕಿತರು:
ಮೈಸೂರು 53, ಚಿತ್ರದುರ್ಗ 22, ದಕ್ಷಿಣ ಕನ್ನಡ 30, ತುಮಕೂರು 36, ಮಂಡ್ಯ 46, ಹಾಸನ 42, ಚಿಕ್ಕಬಳ್ಳಾಪುರ 22, ಬೆಂಗಳೂರು ಗ್ರಾಮಾಂತರ 35, ಕಲಬುರಗಿ 26, ಬಳ್ಳಾರಿ 27 ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ 5, ಬಾಗಲಕೋಟೆ 7, ಬೀದರ್ 2, ಗದಗ 3, ಕೊಪ್ಪಳ 4, ಯಾದಗಿರಿ 2, ಧಾರವಾಡ 9, ಚಿಕ್ಕಮಗಳೂರು 9- ಎರಡಂಕಿಗಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.












Click it and Unblock the Notifications