ರಾಜ್ಯದಲ್ಲಿ ಇಂದು 1210 ಹೊಸ ಕೋವಿಡ್ ಪ್ರಕರಣ
ಬೆಂಗಳೂರು, ಡಿಸೆಂಬರ್ 11: ರಾಜ್ಯದಲ್ಲಿ ಇಂದು 1210 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜತೆಗೆ 1807 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 18,593ಕ್ಕೆ ಇಳಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ 16 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಮರಣ ಸಂಖ್ಯೆ 11,928ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ 8,99,011 ಒಟ್ಟು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 8,68,471 ಮಂದಿ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ಸಂಜೆಯವರೆಗೆ ರಾಜ್ಯದಲ್ಲಿ 13,508 ರಾಪಿಡ್ ಆಂಟಿಜೆನ್ ಪರೀಕ್ಷೆಗಳು ಮತ್ತು 87,338 ಆರ್‌ಟಿ-ಪಿಸಿಆರ್ ಹಾಗೂ ಇತರೆ ಮಾದರಿಗಳು ಸೇರಿದಂತೆ ಒಟ್ಟು 1,00,846 ಪರೀಕ್ಷೆಗಳನ್ನು ನಡೆಸಲಾಗಿದೆ.

ಬೆಂಗಳೂರು ನಗರದಲ್ಲಿ 659 ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಸಂಖ್ಯೆ 3,77,251ಕ್ಕೆ ಏರಿಕೆಯಾಗಿದ್ದು, 35,9801 ಮಂದಿ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 4,222ಕ್ಕೆ ಏರಿಕೆಯಾಗಿದೆ.
ಉಳಿದ ಜಿಲ್ಲೆಗಳಲ್ಲಿ ಸೋಂಕಿತರು:
ಮೈಸೂರು 44, ಚಿತ್ರದುರ್ಗ 40, ದಕ್ಷಿಣ ಕನ್ನಡ 29, ತುಮಕೂರು 27, ಮಂಡ್ಯ 26, ಹಾಸನ 45, ಚಿಕ್ಕಬಳ್ಳಾಪುರ 52, ಬೆಂಗಳೂರು ಗ್ರಾಮಾಂತರ 35, ಕಲಬುರಗಿ 17, ಬಳ್ಳಾರಿ 20, ದಾವಣಗೆರೆ 27, ಉಡುಪಿ 20, ಕೋಲಾರ 19, ಕೊಡಗು 16, ಧಾರವಾಡ 18, ಚಿಕ್ಕಮಗಳೂರು 25 ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ 4, ಬಾಗಲಕೋಟೆ 8, ಬೀದರ್ 2, ಗದಗ 2, ಕೊಪ್ಪಳ 6, ಯಾದಗಿರಿ 3, ಹಾವೇರಿ 1, ಚಾಮರಾಜನಗರ 8 - ಎರಡಂಕಿಗಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.












Click it and Unblock the Notifications