ನೋಟಿಗಾಗಿ ಸಾಲಿನಲ್ಲಿ ನಿಂತಾಗ ಮಾಡಬಹುದಾದ 12 ಕೆಲಸಗಳು

ಬೆಂಗಳೂರು, ನವೆಂಬರ್ 18: 'ನನಗೆ ಮಾತ್ರ ಹೀಗಾಗುತ್ತೆ' ಅನ್ನೋ ಸ್ಥಿತಿಯಲ್ಲ ಅದು. ನೋಟು ಬದಲಾವಣೆಗೋ ವಿಥ್ ಡ್ರಾ ಮಾಡಿಕೊಳ್ಳುವುದಕ್ಕೆ ಎಲ್ಲರೂ ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಅದು ರಾಹುಲ್ ಗಾಂಧಿ ಇರಲಿ, ಪಾಪ, ಮೋದಿ ತಾಯಿ ಇರಲಿ. ಸಾಲಿನಲ್ಲಿ ಹೋಗಿ ಹಣ ಪಡೆಯುತ್ತಿದ್ದಾರೆ. ಆದ್ದರಿಂದ ಒಂದು ವಿಚಾರ ನೆನಪಿನಲ್ಲಿರಬೇಕು: ಇಂದು ಎಲ್ಲರದೂ ಇದೇ ಸ್ಥಿತಿ.

ಎಲ್ಲರಿಗೂ ನಗದು ಬೇಕಿದೆ. ಅ ಕಾರಣಕ್ಕೆ ಬ್ಯಾಂಕ್ ನೌಕರರೂ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಸಾಲಿನಲ್ಲಿ ನಿಲ್ಲುತ್ತಿರುವವರೆಲ್ಲರೂ ಕೆಲಸ-ಕಾರ್ಯ ಇದ್ದು, ಇಲ್ಲಿ ಬಂದು ನಿಲ್ಲುತ್ತಿದ್ದಾರೆ. ಆದ್ದರಿಂದ ಸುಮ್ಮಸುಮ್ಮನೆ ಕೋಪ ಮಾಡಿಕೊಂಡು ಅವರಿವರ ಮೇಲೆ ರೇಗುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ.

12 Things You Can Do To Make Standing In Bank Queues

ಇದೇ ಪರಿಸ್ಥಿತಿ ಇನ್ನೂ ಕೆಲವು ವಾರ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿರುವುದರಿಂದ ಕೆಲವು ಸಲಹೆಗಳನ್ನು ಕೊಡಲಾಗಿದೆ. ಇದನ್ನು ಅನುಸರಿಸಿದರೆ ಇಂದಿನ ಬದುಕು ಹೆಚ್ಚು ಆಪ್ಯಾಯಮಾನವಾಗುತ್ತದೆ. ಜತೆಗೆ ನಮ್ಮಂತೆಯೇ ಇರುವ ಮತ್ತೊಬ್ಬರಿಗೆ ಆಗುವ ತೊಂದರೆ ತಪ್ಪುತ್ತದೆ ಎಂಬುದೇ ಮುಖ್ಯ ಕಾಳಜಿ.

1.ಸಾಧ್ಯವಾದಷ್ಟು ಮನೆ ಹಾಗೂ ಆಫೀಸಿಗೆ ಹತ್ತಿರ ಇರೋ ಎಟಿಎಂ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಬ್ಯಾಂಕ್ ಗಿಂತ ಅಲ್ಲಿ ಸಾಲಿನ ಉದ್ದ ಕಡಿಮೆ ಇರುತ್ತದೆ. ಸಂಬಂಧಿಕರೋ ಸ್ನೇಹಿತರದೋ ಸಹಾಯ ಪಡೆಯುವುದಕ್ಕೂ ಅನುಕೂಲ. ನೀವು ಅವರಿಗೆ ಅದೇ ರೀತಿ ನೆರವಾಗಬೇಕು.

2.ಪರಿಸ್ಥಿತಿ ಅಂದುಕೊಂಡಂತೆ ಇಲ್ಲದೆ ಐದಾರು ಗಂಟೆ ಕಾಯುವ ಸಂದರ್ಭ ಬಂದರೆ, ಆದ್ದರಿಂದ ಗ್ಲುಕೋಸ್ ನೀರು, ಸ್ವಲ್ಪ ಸಕ್ಕರೆ, ಬಿಸ್ಕೆಟ್ ನಂಥದ್ದನ್ನು ಜತೆಯಲ್ಲಿಟ್ಟುಕೊಂಡಿರಿ. ಅದರ ಅಗತ್ಯ ನಿಮಗೇ ಬರಬೇಕು ಅಂತಿಲ್ಲ. ಆ ಸಾಲಿನಲ್ಲಿ ನಿಂತವರಿಗೆ ಯಾರಿಗೆ ಬಂದರೂ ಪ್ರಯೋಜನಕಾರಿ.

3.ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಬಳಸವಂಥ ಮಾತ್ರೆಗಳನ್ನು ಜತೆಯಲ್ಲಿಟ್ಟುಕೊಂಡಿರೋದು ಮುಂಜಾಗ್ರತೆ.

4. ಸ್ಥಳೀಯವಾಗಿ ಹತ್ತಿರದಲ್ಲಿರುವ ವೈದ್ಯರು, ಆಸ್ಪತ್ರೆ, ಆಂಬ್ಯುಲೆನ್ಸ್ ದೂರವಾಣಿ ಸಂಖ್ಯೆ ಇಟ್ಟುಕೊಂಡಿದ್ದರೆ ಉತ್ತಮ. ಯಾರಿಗೇ ಅಗತ್ಯ ಬಂದರೂ ಅದನ್ನು ಬಳಸಬಹುದು.

5. ಎಟಿಎಂನ ಅದೇ ಮೊದಲ ಬಾರಿಗೆ ಬಳಸುತ್ತಿರುವವರು, ಹಿರಿಯ ನಾಗರಿಕರು ಕಷ್ಟಪಡುತ್ತಿದ್ದರೆ ಅವರಿಗೆ ನೆರವಾಗಬಹುದು. ಇದರಿಂದ ಮತ್ತೊಬ್ಬರಿಗೆ ಸಹಾಯ ಮಾಡಿದ ಹಾಗೆಯೂ ಆಯಿತು, ಉಳಿದವರ ಸಮಯವೂ ಉಳಿತಾಯ ಆಯಿತು.

6.ಬ್ಯಾಂಕ್ ಗೆ ಹೋಗಿ ಹಣ ಜಮೆ ಮಾಡುವ ಮುಂಚೆಯೇ ಚಲನ್ ತುಂಬಿಕೊಂಡು ಹೋಗಿ, ಇದರಿಂದ ನಿಮ್ಮದೇ ಸಮಯ ಉಳಿಯುತ್ತದೆ.

7. ತುಂಬ ಹೊತ್ತು ನಿಲ್ಲಲು ತ್ರಾಣವಿಲ್ಲದವರು ನಿಮಗಿಂತ ಮುಂದೆ ನಿಂತಿದ್ದರೆ ಅವರನ್ನು ಒಂದು ಕಡೆ ಕೂರಲು ತಿಳಿಸಿ, ಅವರ ಸರದಿ ಬಂದಾಗ ಕರೆಯಿರಿ.

8. ನಿಮ್ಮ ಜತೆಗೆ ಒಂದಿಷ್ಟು ಹಳೇ ನ್ಯೂಸ್ ಪೇಪರ್ ಗಳನ್ನು ತೆಗೆದುಕೊಂಡು ಹೋಗಿ. ನಿಮಗೆ ಕಾಲು ಸೋತಂತೆ ಆದಾಗ, ಕೂರಬೇಕು ಅನ್ನಿಸಿದರೆ, ಅದಕ್ಕೆ ಅವಕಾಶವೂ ಇದ್ದಾಗ ನ್ಯೂಸ್ ಪೇಪರ್ ಬಳಸಬಹುದು.

9. ನಿಮಗೆ ತಾಳ್ಮೆ ಕಡಿಮೆಯಿದ್ದಲ್ಲಿ ಪುಸ್ತಕವೊಮ್ದನ್ನು ಓದುವುದಕ್ಕೆ ತೆಗೆದುಕೊಂಡು ಹೋಗಿ. ಒಂದಿಷ್ಟು ಸಂಗೀತ, ಇ ಬುಕ್ ಗಳಿಗೆ ಮೊಬೈಲ್ ಇದ್ದರೆ ಅದನ್ನು ಬಳಸಿ.

10.ಬ್ಯಾಂಕ್-ಎಟಿಎಂಗಳ ಮುಂಭಾಗ ವಿಪರೀತ ಕೂಗಾಡುತ್ತಾ ನಿಲ್ಲುವವರೂ ಜಾಸ್ತಿ ಕಾಣ್ತೀವಿ. ನೀವು ಬ್ಯಾಂಕ್ ನೌಕರರನ್ನೋ ಅಲ್ಲಿಯ ಸೆಕ್ಯೂರಿಟಿ ಗಾರ್ಡ್ ನೋ ಬೈದರೆ, ಒಂದು ಕ್ಷಣ ನೆನಪಿಟ್ಟುಕೊಳ್ಳಿ: ಅವರು ಬಿಡುವಿಲ್ಲದ ಕೆಲಸ ಮಾಡಿದ್ದಾರೆ, ಒತ್ತಡದಲ್ಲಿದ್ದಾರೆ. ಆದರೂ ನಿಮ್ಮದೇ ಸಹಾಯಕ್ಕಾಗಿ ಅಲ್ಲಿದ್ದಾರೆ.

11.ಸರತಿ ಸಾಲಿನಲ್ಲಿ ನಿಂತಾಗ ದಯವಿಟ್ಟು ಸಿಗರೇಟ್ ಸೇದಬೇಡಿ.

12. ನಿಮಗಿಂತ ದುರ್ಬಲರು, ನಿಮ್ಮ ಅಗತ್ಯ ಇರುವಂತಹವರು ಕಂಡಾಗ ಅವರಿಗೆ ನೆರವಾಗಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+