Karnataka Airports: ಕರ್ನಾಟಕದಲ್ಲಿ 12 ವಿಮಾನ ನಿಲ್ದಾಣಗಳು
Karnataka Airports: ಕರ್ನಾಟಕ ರಾಜ್ಯದಲ್ಲಿ ಇದೀಗ ಪ್ರಸ್ತುತ ಶಿವಮೊಗ್ಗ ಸೇರಿ ಒಟ್ಟು 9 ವಿಮಾನ ನಿಲ್ದಾಣಗಳಿವೆ. ಇದರ ಜೊತೆ ಇನ್ನು ಮೂರು ಸೇರ್ಪಡೆ ಆಗಲಿವೆ ಎನ್ನುವ ಮಾಹಿತಿ ಇದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿರಲಿವೆ ಎನ್ನುವ ಮಾಹಿತಿಯನ್ನು ಸಂಪೂರ್ಣ ವಿವರ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕದಲ್ಲಿ ಮತ್ತೆ ಮೂರು ವಿಮಾನ ನಿಲ್ದಾಣ ನಿರ್ಮಾಣ ಆಗಲಿವೆ. ಈ ಪೈಕಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಇದೇ ವರ್ಷ ಅಂದರೆ 2025ರಲ್ಲಿ ಉದ್ಘಾಟನೆ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 2024ರಲ್ಲೇ ಉದ್ಘಾಟನೆ ಆಗಬೇಕಿದ್ದ ವಿಮಾನ ನಿಲ್ದಾಣ ಕಾಮಗಾರಿ ವಿಳಂಬ ಹಿನ್ನೆಲೆ ಮುಂದೂಡಿಕೆ ಆಗಿತ್ತು.

ಇದೇ ವಂರ್ಷದ ಅಂದರೆ 2025ರ ಏಪ್ರಿಲ್ ವೇಳೆಗೆ ಉದ್ಘಾಟನೆಯಾಗುವ ನಿರೀಕ್ಷೆ ಇದೆ ಎನ್ನುವ ಮಾಹಿತಿ ಇದೆ. ಇನ್ನೂ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಈಗಾಗಲೇ ಬಿಡದಿ, ರಾಮನಗರ, ಹೊಸೂರು, ತುಮಕೂರು ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತು ಮಾಡಲಾಗಿದೆ. ಆದರೆ ಇದೇ ನಿಗಧಿತ ಸ್ಥಳ ಎಂಬ ಬಗ್ಗೆ ಅಪ್ಡೇಟ್‌ವೊಂದು ಹೊರಬೀಳಬೇಕಿದೆ ಅಷ್ಟೇ. ಮತ್ತೊಂದೆಡೆ ಹಾಸನದಲ್ಲೂ ವಿಮಾನ ನಿಲ್ದಾಣ ನಿರ್ಮಾಣವಾದ್ರೆ ರಾಜ್ಯದಲ್ಲಿ ಒಟ್ಟು 12 ವಿಮಾನ ನಿಲ್ದಾಣ ಆದಂತಾಗಲಿವೆ.
ಇದೀಗ ರಾಜ್ಯದಲ್ಲಿ ಇರುವ ಒಟ್ಟು 9 ವಿಮಾನ ನಿಲ್ದಾಣಗಳಲ್ಲಿ 2 ಅಂತಾರಾಷ್ಟ್ರೀಯ, 2 ದೇಶಿಯ ವಿಮಾನ ನಿಲ್ದಾಣಗಳಾಗಿವೆ. ಇವುಗಳ ಜೊತೆ ಹಾಸನ, ವಿಜಯಪುರ, ಬೆಮಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದ್ರೆ ಒಟ್ಟು 12 ಆದಂತಾಗಲಿವೆ.
ರಾಜ್ಯದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ, ಬೆಂಗಳೂರು
* ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ -ಬಾಜಪೆ
ದೇಶಿಯ ವಿಮಾನ ನಿಲ್ದಾಣಗಳು
* ಬೆಳಗಾವಿ ವಿಮಾನ ನಿಲ್ದಾಣ (ಸಾಂಬ್ರಾ)
* ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣ
* ಕಲಬುರಗಿ ವಿಮಾನ ನಿಲ್ದಾಣ
* ಬೀದರ್ ವಿಮಾನ ನಿಲ್ದಾಣ
* ಬಳ್ಳಾರಿ ವಿಮಾನ ನಿಲ್ದಾಣ
* ಮೈಸೂರು ವಿಮಾನ ನಿಲ್ದಾಣ
* ಶಿವಮೊಗ್ಗ ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜಧಾನಿ ಬೆಂಗಳೂರಿನ ಉತ್ತರಕ್ಕೆ ಸುಮಾರು 30 ಕಿಲೋ ಮೀಟರ್ ಇರುವ ದೇವನಹಳ್ಳಿಯಲ್ಲಿ ಈ ವಿಮಾನ ನಿಲ್ದಾಣ ಇದೆ. ಪ್ರತಿನಿತ್ಯ ಸಾವಿರಾರು ಅಂತಾರಾಷ್ಟ್ರೀಯ ಪ್ರಯಾಣಿಕರು ಇಲ್ಲಿಂದ ಪ್ರಯಾಣ ಮಾಡುತ್ತಾರೆ.
ಮೂಲತಃ ಬೆಂಗಳೂರಿನಲ್ಲಿ ಮೊದಲಿಗೆ ಇದ್ದಿದ್ದು, ಎಚ್ಎಎಲ್ ವಿಮಾನ ನಿಲ್ದಾಣವಾಗಿದೆ. ಇದನ್ನು 1942ರಲ್ಲಿ ಮಿಲಿಟರಿ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಸ್ಥಾಪನೆ ಮಾಡಲಾಯಿತು. ದಿನ ಕಳೆದಂತೆ ಜನಸಂಖ್ಯೆ ಹೆಚ್ಚಾಗುತ್ತಿದಂತೆ ವಿಮಾನ ನಿಲ್ದಾಣದ ಅವಶ್ಯಕತೆ ಹೆಚ್ಚಾಯಿತು. ಆದ್ದರಿಂದ ಮಾರ್ಚ್ 1991ರಲ್ಲಿ ಭಾರತೀಯ ರಾಷ್ಟ್ರೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧಾರ ಮಾಡಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ಹತ್ತಿರವಿರುವ ದೇವನಹಳ್ಳಿಯಲ್ಲಿ 4,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಿದ್ದೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವನ್ನು 2008ರ ಮೇ 24ರಂದು ಉದ್ಘಾಟನೆ ಮಾಡಲಾಯಿತು.
ಇನ್ನು 2013ರ ಡಿಸೆಂಬರ್ 14ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಲಾಯಿತು. ಆಗಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಂತಲೇ ಹೆಸರುವಾಸಿಯಾಗಿದೆ.
ಸೌಲಭ್ಯಗಳ ವಿವರ
* ಇದು ಕ್ಲೀನ್‌ಮ್ಯಾಕ್ಸ್ ಸೋಲಾರ್ ಅಭಿವೃದ್ಧಿಪಡಿಸಿದ ಕರ್ನಾಟಕದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವಾಗಿದೆ.
* ಈ ವಿಮಾಣ ನಿಲ್ದಾಣವು ಎರಡು ಟರ್ಮಿಲ್ಗಳನ್ನು ಒಳಗೊಂಡಿದೆ.
* ಟರ್ಮಿನಲ್-1 ವಾರ್ಷಿಕ 40ಮಿಲಿಯನ್ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ.
* ಟರ್ಮಿನಲ್-2 ಏಷ್ಯಾದ ಗಾರ್ಡನ್ ಟರ್ಮಿನಲ್-2 ಆಗಿದೆ. 2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಟರ್ಮಿನಲ್ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂಪಾಯಿ ವೆಚ್ಚ ತಗುಲಿದೆ. ಇದು ವಾರ್ಷಿಕವಾಗಿ 5ರಿಂದ 6 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕರ್ನಾಟಕದ ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಇದೆ. ಇದು ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ನಗರದಿಂದ ಈಶಾನ್ಯಕ್ಕೆ ಸುಮಾರು 13 ಕಿಲೋ ಮೀಟರ್ ಬಜಪೆ ಸಮೀಪದಲ್ಲಿದೆ. ಈ ವಿಮಾನ ನಿಲ್ದಾಣವನ್ನು 1951ರ ಡಿಸೆಂಬರ್ 25 ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರು ಲೋಕಾರ್ಪಣೆ ಮಾಡಿದರು.
ಈ ವಿಮಾನ ನಿಲ್ದಾಣ ಬೆಟ್ಟದ ಮೇಲಿದ್ದು, ಎರಡು ಟೇಬಲ್‌ಟಾಪ್ ರನ್‌ವೇಗಳನ್ನು ಹೊಂದಿದೆ. ಇದರ ಸಂಪೂರ್ಣ ವಿಶೇಷತೆ ಕುರಿತು ಇಲ್ಲಿ ತಿಳಿಯಿರಿ.
* ಭಾರತದಲ್ಲಿ ಮೂರು ವಿಮಾನ ನಿಲ್ದಾಣಗಳು ಮಾತ್ರ ಟೇಬಲ್‌ಟಾಪ್ ರನ್‌ವೇಗಳನ್ನು ಹೊಂದಿವೆ. ಇದರಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಕೂಡ ಒಂದಾಗಿದೆ.
* 2000ರ ದಶಕದ ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಇದರ ಟರ್ಮಿನಲ್ ಅನ್ನು ನವೀಕರಿಲಾಗಿದೆ.
* 2006ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈಗೆ ಪ್ರಯಾಣ ಮಾಡುವ ಮೂಲಕ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಆರಂಭಿಸಿತು.
* 28 ಸೆಪ್ಟೆಂಬರ್ 2012ರಂದು, ಏರ್ ಬಸ್ A310, ಮೊದಲ ಬಾರಿಗೆ ಇಲ್ಲಿ ಲ್ಯಾಂಡ್ ಆಗಿತ್ತು.











Click it and Unblock the Notifications